• search

ಕುಂದಾಪುರ ಬಿಜೆಪಿಯ ಗುರುಶಿಷ್ಯರ ಶೀತಲ ಸಮರಕ್ಕೆ ಬಂಡಾಯದ ತುಪ್ಪ!

By ಉಡುಪಿ ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಕುಂದಾಪುರದ ಮಟ್ಟಿಗೆ ಬಿಜೆಪಿ ಅಂದರೆ ಹಾಲಾಡಿ ಶ್ರೀನಿವಾಸ ಶೆಟ್ಟಿ , ಹಾಲಾಡಿ ಅಂದರೆ ಬಿಜೆಪಿ ಎಂಬಂತಿತ್ತು. ಬಿಜೆಪಿಯ ಅನೇಕ ಕಾರ್ಯಕರ್ತರು ಅವರನ್ನು 'ಕುಂದಾಪುರದ ವಾಜಪೇಯಿ' ಎಂದೂ ಕರೆಯುವುದುಂಟು.

  ಅಂತಹ ನಾಯಕ ಕಳೆದ ಚುನಾವಣೆ ಹೊತ್ತಿಗೆ ಬಂಡಾಯ ಎದ್ದು ಬಿಜೆಪಿಗೆ ಗುಡ್ ಬೈ ಹೇಳಿ ಪಕ್ಷೇತರರಾಗಿ ನಿಂತು ಶಾಸಕರಾಗಿದ್ದು ಗೊತ್ತೇ ಇದೆ. ಈಗ ಹಾಲಾಡಿಯವರು ಮತ್ತೆ ಬಿಜೆಪಿಗೆ ಬಂದು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಆದರೆ ಕಳೆದ ಐದು ವರ್ಷಗಳ ಹಿಂದೆ ಹಾಲಾಡಿ ಶ್ರೀನಿವಾಸ ಶೆಟ್ಟರಿಗಿದ್ದ ವರ್ಚಸ್ಸು ಹಾಗೇ ಇದೆಯಾ?

  ರಾಜೀನಾಮೆ ಕೊಟ್ಟ ಬಿಜೆಪಿ ಪದಾಧಿಕಾರಿಗಳು ಏನಂದ್ರು ಗೊತ್ತಾ?

  ಕುಂದಾಪುರದ ಸುದ್ದಿಯ ಪ್ರಕಾರ, ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಮೂಲ ಬಿಜೆಪಿಗರು ತಿರುಗಿ ಬಿದ್ದಿದ್ದಾರೆ. ಬೂದಿ ಮುಚ್ಚಿದ ಕೆಂಡದಂತೆ ಇದ್ದ ಹಾಲಾಡಿ ವಿರುದ್ಧದ ಅಸಮಾಧಾನ ಈಗ ಸ್ಪೋಟಗೊಳ್ಳತೊಡಗಿದೆ. ಇದಕ್ಕೆ ಮಂಗಳವಾರ (ಏ 10) ಸಂಜೆ ನಡೆದ ವಿದ್ಯಮಾನವೇ ಸಾಕ್ಷಿ.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

  ಹಾಲಾಡಿಗೆ ಟಿಕೆಟ್ ನೀಡಿದ ವಿಚಾರವಾಗಿ ಕುಂದಾಪುರ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಏಳು ಜನ ಪದಾಧಿಕಾರಿಗಳು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಬಿಜೆಪಿಯ ಮೊದಲ ಪಟ್ಟಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಟಿಕೆಟ್ ಘೊಷಣೆಯಾಗಿತ್ತು. ಇದು ಬಿಜೆಪಿ ಮೂಲ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

  ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಬಿಜೆಪಿ ಟಿಕೆಟ್ ಅನುಮಾನ

  ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಸೇರಿದಂತೆ ಏಳು ಪದಾಧಿಕಾರಿಗಳು ರಾಜೀನಾಮೆಯನ್ನು ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆಗೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದ ಪದಾಧಿಕಾರಿಗಳು ಹಾಲಾಡಿ ವಿರುದ್ಧ ಕೆಲಸ ಮಾಡುವುದಾಗಿಯೂ ಘೋಷಣೆ ಮಾಡಿದ್ದಾರೆ. ಇದು ಹಾಲಾಡಿಯವರಿಗೆ ದುಬಾರಿಯಾಗಿ ಪರಿಣಮಿಸುತ್ತಾ? ಸದ್ಯ ಹೀಗೊಂದು ಚರ್ಚೆ ಪ್ರಾರಂಭವಾಗಿದೆ. ಮುಂದೆ ಓದಿ..

  ಯಡಿಯೂರಪ್ಪ, ಶೋಭಾ ಕರಂದ್ಲಾಜೆ ವಿರುದ್ಧ ಕಾರ್ಯಕರ್ತರ ಕಿಡಿ

  ಯಡಿಯೂರಪ್ಪ, ಶೋಭಾ ಕರಂದ್ಲಾಜೆ ವಿರುದ್ಧ ಕಾರ್ಯಕರ್ತರ ಕಿಡಿ

  ಇದೇ ವೇಳೆ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ವಿರುದ್ಧವೂ ಕಾರ್ಯಕರ್ತರು ಕಿಡಿಕಾರಿದ್ದಾರೆ. ಬಿಜೆಪಿಯಲ್ಲಿ ಪಕ್ಷ ತೊರೆದು ಬಂದವರಿಗೆ ಮಾತ್ರ ಅವಕಾಶ, ಸ್ಥಾನಮಾನದ ಹುದ್ದೆ ಸಿಗುತ್ತೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ ಎನ್ನುವ ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ,ಭಿನ್ನಮತ ಶಮನಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಬಿಜೆಪಿಗೆ ಮರಳಿದ ಹಾಲಾಡಿ ಶ್ರೀನಿವಾಸ ಶೆಟ್ಟಿ!

  ಕುಂದಾಪುರ ಬಿಜೆಪಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ.

  ಕುಂದಾಪುರ ಬಿಜೆಪಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ.

  ಒಟ್ಟಾರೆ ,ಕುಂದಾಪುರ ಬಿಜೆಪಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಮೊದಲ ಪಟ್ಟಿಯಲ್ಲೇ ಟಿಕೆಟ್ ಪಡೆಯಲು ಯಶಸ್ವಿಯೇನೋ ಆದರು, ಆದರೆ ಪಕ್ಷ ತನ್ನ ಮೂಲ ಕಾರ್ಯಕರ್ತರ ವಿರೋಧ ಕಟ್ಟಿಕೊಳ್ಳುವಂತಾಗಿದೆ. ಪಕ್ಷ ತೊರೆದು ಹೋಗಿದ್ದ ಹಾಲಾಡಿ ಮತ್ತೆ ಬಿಜೆಪಿಗೆ ವಾಪಾಸಾದಾಗಲೇ ಕೆಲ ಕಾರ್ಯರ್ತರ ವಿರೋಧವಿತ್ತು.

  ಕೊಡ್ಗಿ ಅವರು ಹಾಲಾಡಿ ಅಭ್ಯರ್ಥಿ ಆಗೋದಕ್ಕೆ ನನ್ನ ಸಹಮತ ಇಲ್ಲ ಎಂದು ಹೇಳಿದ್ದರು

  ಕೊಡ್ಗಿ ಅವರು ಹಾಲಾಡಿ ಅಭ್ಯರ್ಥಿ ಆಗೋದಕ್ಕೆ ನನ್ನ ಸಹಮತ ಇಲ್ಲ ಎಂದು ಹೇಳಿದ್ದರು

  ಹೆಚ್ಚೇಕೆ, ಸ್ವತ: ಹಾಲಾಡಿಯ ರಾಜಕೀಯ ಗುರು ಎ.ಜಿ.ಕೊಡ್ಗಿ ಅವರು ಹಾಲಾಡಿ ಅಭ್ಯರ್ಥಿ ಆಗೋದಕ್ಕೆ ನನ್ನ ಸಹಮತ ಇಲ್ಲ ಎಂದು ಬಹಿರಂಗವಾಗಿಯೇ ಕಿಡಿಕಾರಿದ್ದರು. ಹಾಲಾಡಿಗೆ ಟಿಕೆಟ್ ಕೊಟ್ಟರೆ ತಟಸ್ಥವಾಗಿ ಉಳಿಯುತ್ತೇನೆ ಎಂದು ಘೋಷಿಸಿದ್ದರು. ಇನ್ನು ,ಕುಂದಾಪುರದ ವಾಜಪೇಯಿ ಎಂಬ ಹೆಸರಿದ್ದರೂ ಹಾಲಾಡಿಯವರನ್ನು ಕಂಡರೆ ಸಂಘಪರಿವಾರಕ್ಕೂ ಅಷ್ಟಕ್ಕಷ್ಟೇ.

  ಮೊದಲ ಪಟ್ಟಿಯಲ್ಲೇ ಟಿಕೆಟ್ ಕೊಡಿಸಲು ಬಿಎಸ್ವೈ ಯಶಸ್ವಿ

  ಮೊದಲ ಪಟ್ಟಿಯಲ್ಲೇ ಟಿಕೆಟ್ ಕೊಡಿಸಲು ಬಿಎಸ್ವೈ ಯಶಸ್ವಿ

  ಏನೇ ಇದ್ದರೂ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಮ್ಮ ಬಂಟ ಹಾಲಾಡಿಗೆ ಮೊದಲ ಪಟ್ಟಿಯಲ್ಲೇ ಟಿಕೆಟ್ ಕೊಡಿಸಲು ಯಶಸ್ವಿಯಾಗಿದ್ದಾರೆ. ಕಾರ್ಯಕರ್ತರು ಪಕ್ಷದ ಮರ್ಯಾದೆಗೆ ಅಂಜಿ ಸೈಲೆಂಟಾಗಿದ್ದಾರೆ. ಜಯಪ್ರಕಾಶ ಹೆಗ್ಡೆ ಬಗ್ಗೆ ಒಲವು ತೋರಿದ್ದ ಮೂಲ ಬಿಜೆಪಿಗರು ಈಗ ವಿಧಿಯಿಲ್ಲದೆ ಹಾಲಾಡಿ ಅಭ್ಯರ್ಥಿತನವನ್ನು ಒಪ್ಪಿಕೊಳ್ಳಬೇಕಾಗಿದೆ.

  ನಪ್ರಿಯತೆಯ ಮುಂದೆ ಎಲ್ಲಾ ಕೊಚ್ಚಿಹೋಗುತ್ತಾ?

  ನಪ್ರಿಯತೆಯ ಮುಂದೆ ಎಲ್ಲಾ ಕೊಚ್ಚಿಹೋಗುತ್ತಾ?

  ಒಂದು ಮೂಲದ ಪ್ರಕಾರ, ಹಾಲಾಡಿ ವಿರುದ್ಧ ಅಸಮಾಧಾನ ಇದ್ದರೂ, ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ಬಲಿ ಕೊಡಲು ತಯಾರಿಲ್ಲ ಎಂದೂ ಹೇಳಲಾಗುತ್ತಿದೆ. ಕಳೆದ ಬಾರಿ 40 ಸಾವಿರ ಮತಗಳ ಅಂತರದಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆಲುವಿನ ನಗೆ ಬೀರಿದ್ದರು. ಈ ಬಾರಿ ಅವರ ಗೆಲುವಿನ ಅಂತರ ಕಡಿಮೆಯಾಗಬಹುದೇ ಹೊರತು ಗೆಲುವಿಗೆ ತೊಡಕಾಗದು ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ. ಒಟ್ಟಾರೆ ,ಬಿಜೆಪಿಯ ಈ ಭಿನ್ನಮತ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಾ? ಅಥವಾ ಹಾಲಾಡಿ ಜನಪ್ರಿಯತೆಯ ಮುಂದೆ ಎಲ್ಲಾ ಕೊಚ್ಚಿಹೋಗುತ್ತಾ? ಎಂಬುದನ್ನು ಕಾದು ನೋಡಬೇಕಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Haladi Srinivas Shetty got the BJP ticket from Kundapura (Udupi dist), dissident activities over the ticket issue continues. Haladi name was announced in the first list itself by BJP.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more