• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿಯಲ್ಲಿ ಮಾಜಿ ಶಾಸಕಿ ವಿನ್ನಿಫ್ರಡ್ ಫರ್ನಾಂಡಿಸ್ ನಿಧನ

By ಉಡುಪಿ ಪ್ರತಿನಿಧಿ
|

ಉಡುಪಿ, ಏಪ್ರಿಲ್ 28: ಮಾಜಿ ಶಾಸಕಿ ವಿನ್ನಿಫ್ರಡ್ ಫರ್ನಾಂಡಿಸ್ ಇಂದು ನಿಧನ ಹೊಂದಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದ ಚರ್ಚ್‌ ರಸ್ತೆಯ ತಮ್ಮ ಸ್ವಗ್ರಹದಲ್ಲಿ ಇಂದು ವಿಧಿವಶರಾದರು.

   ರೈತನ ಪತ್ನಿ ವಿಡಿಯೋ ನೋಡಿದ ಕೂಡಲೇ ಫೋನ್ ಮಾಡಿದ C M..? | Oneindia Kannada

   ಅವರಿಗೆ ತೊಂಬತ್ತೆರಡು ವರ್ಷ ವಯಸ್ಸಾಗಿತ್ತು. ಮೂವರು ಪುತ್ರಿಯರು ಮತ್ತು ಮೂವರು ಪುತ್ರರನ್ನು ಮಾಜಿ ಶಾಸಕಿ ಅಗಲಿದ್ದಾರೆ. ಇವರು ಪ್ರಜಾ ಸೋಶಿಯಲಿಸ್ಟ್ ಪಕ್ಷದ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದರು.

   ಬಳಿಕ ಕಾಂಗ್ರೆಸ್ ಪಕ್ಷದಿಂದ ಸ್ವರ್ಧಿಸಿ ಎರಡು ಬಾರಿ ಕುಂದಾಪುರ ಕ್ಷೇತ್ರದ ಶಾಸಕಿ ಆಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು. ಮಾತ್ರವಲ್ಲ, ವಿಧಾನಪರಿಷತ್ ಸದಸ್ಯೆಯಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಕುಂದಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆ ಆರಂಭಿಸಲು ಕಾರಣರಾದ ವಿನ್ನಿಪ್ರೆಡ್ ಫರ್ನಾಂಡಿಸ್ ಹಲವು ಜನಾನುರಾಗಿ ಕಾರ್ಯ ಮಾಡಿದವರು. ಅವರ ನಿಧನಕ್ಕೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.

   English summary
   Former legislator Winnifred Fernandez died today. at her home in Kundapur, Udupi district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X