ಮಿಸೆಸ್ ಯೂನಿವರ್ಸಲ್‌ ಗೆ ಉಡುಪಿಯ ಡಾ.ಪದ್ಮಾ ಗಡಿಯಾರ್ ಆಯ್ಕೆ

ಉಡುಪಿ ಫೆಬ್ರವರಿ 17: ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಯೂನಿವರ್ಸಲ್ ಸ್ಪರ್ಧೆಯಲ್ಲಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿರುವ ಉಡುಪಿಯ ಮಹಿಳೆಯೊಬ್ಬರು ಮಿಸೆಸ್ ಯೂನಿವರ್ಸಲ್‌ಗೆ ಪ್ರವೇಶ ಪಡೆದಿದು ಗಮನ ಸೆಳೆದಿದ್ದಾರೆ.

ಉಡುಪಿ ತೆಂಕಪೇಟೆಯ ಅರುಣ್ ಶೆಣೈ-ಅರ್ಚನಾ ಶೆಣೈ ದಂಪತಿ ಪುತ್ರಿ ಡಾ.ಪದ್ಮಾ ಗಡಿಯಾರ್ ಬ್ರಿಸ್ಬೇನ್‌ನಲ್ಲಿ 2018 ಅಕ್ಟೋಬರ್ ತಿಂಗಳಲ್ಲಿ ಯು.ಎಸ್. ಮೂಲದ ಸಂಸ್ಥೆ ಆಯೋಜಿಸಿದ ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸಸ್ ಸೌತ್ ಇಂಡಿಯಾ ಯೂನಿವರ್ಸಲ್ ಕಿರೀಟ ಗೆದ್ದಿದ್ದರು.

ಇದೀಗ ಇದೇ ಬರುವ ಆಗಸ್ಟ್‌ನಲ್ಲಿ ಮೆಕ್ಸಿಕೊದಲ್ಲಿ ಮಿಸೆಸ್ ಯೂನಿವರ್ಸಲ್ ಸ್ಪರ್ಧೆ ನಡೆಯಲಿದ್ದು, ಕಿರಿಟ ಮುಡಿಗೇರಿಸಿಕೊಳ್ಳುವ ನಿರೀಕ್ಷೆ ಹುಟ್ಟಿಸಿದ್ದಾರೆ.

ಡಾ ಪದ್ಮಾ ಡಿಗ್ರಿ ಕಂಪ್ಲೀಟ್ ಮಾಡೋ ಹೊತ್ತು ಅಪಾರ ಕನಸುಗಳನ್ನು ಹೊತ್ತು ಸುಂದರ ಕಲ್ಪನೆಯ ಲೋಕ ಸೃಷ್ಟಿಸಿಕೊಂಡಿದ್ದರು . ನೋಡೋಕೆ ಸುಂದರವಾಗಿದ್ದಪದ್ಮಾ ಅವರಿಗೆ ದೂರದ ಮುಂಬಯಿಯಿಂದ ಒಳ್ಳೆ ಸಂಬಂಧ ಬಂತು. ತಡಮಾಡೋದೇಕೆ ಅಂತಾ ಅಪ್ಪ ಅಮ್ಮ ಮದುವೆ ಮಾಡಿಸಿದರು.

ಬಾಲ್ಯದಲ್ಲಿ ಮಾಡೆಲ್ ಆಗ್ಬೇಕು ಅನ್ನೊ ಕನಸು ಹೊತ್ತವಳಿಗೆ ಪೋಷಕರ ಆಸೆಗೆ ತಣ್ಣೀರು ಹಾಕೋ ಮನಸ್ಸು ಇರಲಿಲ್ಲ. ಮುಂದೆ ಓದಿ

ಮಿಸೆಸ್ ಯುನಿವರ್ಸಲ್ ಗೆ ಆಯ್ಕೆ

ಮಿಸೆಸ್ ಯುನಿವರ್ಸಲ್ ಗೆ ಆಯ್ಕೆ

ಪೋಷಕರ ಇಚ್ಛೆಯಂತೆ ಮದುವೆ ಆದ ಪದ್ಮಾಗೆ ಎರಡು ಮಕ್ಕಳು ಆದ ಮೇಲೆಯೂ ತನ್ನ ಕನಸುಗಳಿಗೆ ಸಾಕಾರ ರೂಪ ನೀಡುವ ನಿಟ್ಟಿನಲ್ಲಿ ದಾಪುಗಾಲಿಟ್ಟು, ಈಗ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ಯುನಿವರ್ಸಲ್ ಗೆ ಆಯ್ಕೆಯಾಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ

ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ

ಇಂದ್ರಾಳಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಂಜಿಎಂ ಕಾಲೇಜಿನಲ್ಲಿ ಪಿಯುಸಿ, ದಂತ ವೈದ್ಯಕೀಯ ಶಿಕ್ಷಣವನ್ನು ಮಂಗಳೂರಿನ ಯೇನೆಪೋಯ ವಿಶ್ವವಿದ್ಯಾಲಯದಲ್ಲಿ ಪಡೆದಿರುವ ಡಾ.ಪದ್ಮಾ ದಂತ ವೈದ್ಯೆಯಾಗಿದ್ದು, ಪತಿ ಡಾ.ಸನಯ್ ಗಡಿಯಾರ್ ಕೂಡ ವೈದ್ಯರು. ಪುತ್ರಿ ಸಮಾ, ಪುತ್ರ ಶಯನ್ ಜತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.

ತವರು ಮನೆಯಿಂದಲೂ ಪ್ರೋತ್ಸಾಹ

ತವರು ಮನೆಯಿಂದಲೂ ಪ್ರೋತ್ಸಾಹ

ಮದುವೆಯಾದ ಹೊತ್ತಿಗೆ ದಢೂತಿಯಾಗಿದ್ದ ಪದ್ಮ ಸಾಕಷ್ಟು ವರ್ಕೌಟ್ ಮಾಡಿ ರೆಡಿಯಾಗ್ತಿದ್ದಾರೆ. "ನನ್ನ ಸಾಧನೆಗೆ ಗಂಡನ ಮನೆಯವರು ಪ್ರೋತ್ಸಾಹ ನೀಡಿದ್ದು,ಇವಾಗ ತವರು ಮನೆಯಿಂದಲೂ ಪ್ರೋತ್ಸಾಹ ದೊರೆಯುತ್ತಿದೆ" ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಪದ್ಮಾ.

ವೈದ್ಯರಾಗಿ ಕರ್ತವ್ಯ ನಿರ್ವಹಣೆ

ವೈದ್ಯರಾಗಿ ಕರ್ತವ್ಯ ನಿರ್ವಹಣೆ

ಕಳೆದ 11ವರ್ಷದಿಂದ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪದ್ಮ ಗಡಿಯಾರ್, ಬಾಲ್ಯದಲ್ಲಿ ಕಂಡ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. "ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿ ಆಗಬಾರದು. ಮನಸ್ಸಲ್ಲಿ ದೃಢ ನಿರ್ಧಾರ ಇರಬೇಕಷ್ಟೆ ಎನ್ನುತ್ತಾರೆ ಪದ್ಮಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+