ಕೊರೊನಾ ವೈರಸ್ ಹರಡಿಸಿದ ಮಹಿಳೆ ವಿರುದ್ಧ ಕ್ರಿಮಿನಲ್ ಕೇಸ್: ಉಡುಪಿ ಡಿಸಿ

ಉಡುಪಿ, ಜೂನ್ 24: ಉಡುಪಿಯಲ್ಲಿ ಆರು ಜನರಿಗೆ ಕೊರೊನಾ ವೈರಸ್ ಸೋಂಕು ಪಸರಿಸಿದ ಸೂಪರ್ ಸ್ಪ್ರೆಡರ್ ಮಹಿಳೆ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚನೆ ನೀಡಿರುವುದಾಗಿ ಉಡುಪಿ‌ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಲ್ಯಾಬ್ ಟೆಕ್ನೀಶಿಯನ್ ಆಗಿದ್ದ ಮಹಿಳೆಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಈ ಮಹಿಳೆ ಆರು ಮಂದಿಗೆ ಸೋಂಕು ಪಸರಿಸಿದ್ದಾರೆ. ಟ್ರಾವೆಲ್ ಹಿಸ್ಟರಿಯನ್ನು ಕೂಡ ಬಚ್ಚಿಟ್ಟಿದ್ದಾರೆ ಎಂದು ತಿಳಿಸಿದರು.

ಇಷ್ಟೇ ಅಲ್ಲದೆ ಈ ಮಹಿಳೆ ಮುಂಬೈ‌ನಿಂದ ಬಂದವರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇವರಿಂದಾಗಿ ಮಗ (5), ಅಪ್ಪ (63), ಮಾವ (61), ನಾದಿನಿ (23), ಗರ್ಭಿಣಿ ತಂಗಿ (22) ಸಂಬಂಧಿ (32) ಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದರು.

Criminal Case Against Woman Who Transmitted Coronavirus: Udupi DC

ಈ ಕಾರಣಕ್ಕಾಗಿ ಮಹಿಳೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇವೆ. ಸೋಂಕಿತರು ಯಾವುದೇ ವಿಚಾರವನ್ನು ಗೌಪ್ಯವಾಗಿ ಇಟ್ಟರೆ ಕೇಸ್ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+