ಕೊರೊನಾಗೆ ಉಡುಪಿಯಲ್ಲಿ ಅಸ್ತಮಾದಿಂದ ಬಳಲುತ್ತಿದ್ದ ಮಹಿಳೆ ಸಾವು

ಉಡುಪಿ, ಜುಲೈ 23: ಮಾರಕ ಕೊರೊನಾ ಸೋಂಕಿಗೆ ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದೆ. ಬ್ರಹ್ಮಾವರ ತಾಲೂಕಿನ ಚಾಂತಾರುವಿನ 70 ವರ್ಷದ ಮಹಿಳೆ ಸಾವನ್ನಪ್ಪಿದವರು. ಈ ಮಹಿಳೆ ಕೆಲವು ಸಮಯದಿಂದ ಅಸ್ತಮಾ, ಶೀತ-ಜ್ವರದಿಂದ ಬಳಲುತ್ತಿದ್ದರು. ಇವರ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ನಿನ್ನೆ ರಾತ್ರಿಯಷ್ಟೇ ಪಾಸಿಟಿವ್ ಇದೆ ಎಂದು ದೃಢಪಟ್ಟಿತ್ತು.

ಆಸ್ಪತ್ರೆಗೆ ಸೇರಿಸಲು ಸಿದ್ಧತೆ ನಡೆಯುತ್ತಿದ್ದಂತೆ ಮನೆಯಲ್ಲೇ ಮಹಿಳೆ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ ಹನ್ನೆರಡಕ್ಕೆ ಏರಿಕೆ ಆದಂತಾಗಿದೆ.

 Coronavirus Death Cases Increased To Twelve In Udupi

ಪಿಎಫ್ ಐ ನೆರವು: ಕೊರೊನಾ ವೈರಸ್ ನಿಂದಾಗಿ ಮೃತಪಟ್ಟ ಈ ಮಹಿಳೆಯನ್ನು ಮುಟ್ಟಲು ಕುಟುಂಬದವರಾರೂ ಮುಂದೆ ಬಂದಿರಲಿಲ್ಲ. ಆರೋಗ್ಯ ಇಲಾಖೆಯ ಕೋರಿಕೆಯ ಮೇರೆಗೆ, ಉಡುಪಿಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಯುವಕರು ಪಿಪಿಇ ಕಿಟ್‌ಗಳನ್ನು ಧರಿಸಿ ಮೃತದೇಹವನ್ನು ಕೊರೊನಾ ಕವಚದೊಂದಿಗೆ ಆಂಬುಲೆನ್ಸ್‌ ನಲ್ಲಿ ರುದ್ರಭೂಮಿಗೆ ಸಾಗಿಸಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+