ಫೇಸ್ ಬುಕ್ ನಲ್ಲಿ ಉಡುಪಿ ಕೃಷ್ಣ ಮಠದ ಬಗ್ಗೆ ಅವಹೇಳನಕಾರಿ ಪೋಸ್ಟ್

Posted By:
Subscribe to Oneindia Kannada

ಉಡುಪಿ, ಆಗಸ್ಟ್ 3 : ಉಡುಪಿ ಶ್ರೀಕೃಷ್ಣ ಮಠದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.3

ಪ್ರಧಾನಿ ಮೋದಿ ಕೊಲೆಯಾಗ್ತಾರೆ ಎಂದ ಮಹಿಳೆ ವಿರುದ್ಧ ಪೊಲೀಸರಿಗೆ ದೂರು

ಜು.29ರಂದು ಬೆಳಗ್ಗೆ 2:41ರ ಸುಮಾರಿಗೆ ಡಾ.ಸಂಪತ್ ಕುಮಾರ್ ಕೋಟೇಶ್ವರ ಎಂಬವರು ಫೇಸ್‌ಬುಕ್‌ನಲ್ಲಿ ಹಣಕ್ಕಾಗಿ ಎರಡೆರಡು ಅಷ್ಟಮಿ ಆಚರಿಸುವ ಉಡುಪಿಯ ಧರ್ಮ ಪಾಖಂಡಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂಬುದಾಗಿ ಫೋಸ್ಟ್ ಹಾಕಿದ್ದು, ಇದಕ್ಕೆ ಶ್ರೀಕೃಷ್ಣ ಮಠದ ಭಕ್ತವೃಂದ ಪ್ರತಿಕ್ರಿಯಿಸಿರುವುದಕ್ಕೆ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಫೇಸ್‌ಬುಕ್‌ನಲ್ಲಿ ಪ್ರಚಾರ ಮಾಡಿದ್ದಾರೆ.

Controversial statement on Srikrishna matha in Facebook

ಅಲ್ಲದೇ ಡಾ.ಸಂಪತ್ ಕುಮಾರ್‌ರ ಫಾಲೋವರ್ಸ್ ಐಶು ಭಟ್, ಐಶ್ವರ್ಯ ಶೆಟ್ಟಿ ಮತ್ತು ಲಕ್ಷ್ಮಿ ಕೆ.ರಾವ್ ಎಂಬವರು ಜು.29ರ ರಾತ್ರಿ 9:12ಕ್ಕೆ ಮತ್ತು ಜು.30ರಂದು ಶ್ರೀಕೃಷ್ಣ ಮಠದ ಬಗ್ಗೆ ಅವಹೇಳನಕಾರಿಯಾಗಿ ಫೇಸ್ ಬುಕ್‌ನಲ್ಲಿ ಪ್ರಚಾರ ಪಡಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಹಯಗ್ರೀವ ಭಕ್ತ ವೃಂದ ಸೋದೆ ಮಠದ ಪದಾಧಿಕಾರಿ ಡಾ.ಯು.ಯೋಗೀಶ್ ಶೇಟ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A complaint has registerd in Udupi police station against a man who has uploaded some controversial statements on Udupi Srikrishna matha in Facebook.
Please Wait while comments are loading...