ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಹಿಂದೂ ವೈಭವ' ಪ್ರದರ್ಶನ ವೀಕ್ಷಿಸಲು ಹೊರಡಿಸಿದ್ದ ಸುತ್ತೋಲೆ ವಾಪಾಸ್

By Manjunatha
|
Google Oneindia Kannada News

ಉಡುಪಿ, ನವೆಂಬರ್ 24 : ವಿಶ್ವ ಹಿಂದೂ ಪರಿಷತ್ ಏರ್ಪಡಿಸಿರುವ 'ಹಿಂದೂ ವೈಭವ' ವಸ್ತು ಪ್ರದರ್ಶನವನ್ನು ಶಾಲಾ ವಿದ್ಯಾರ್ಥಿಗಳು ವೀಕ್ಷಿಸಲು ಅನುವು ಮಾಡಿಕೊಡಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹೊರಡಿಸಿದ್ದ ಸುತ್ತೋಲೆಯನ್ನು ವಿವಾದಗಳು ಎದುರಾದ ನಂತರ ವಾಪಸ್ ಪಡೆದಿದ್ದಾರೆ.

ಧರ್ಮ ಸಂಸದ್ ನಲ್ಲಿ ರಾಮಮಂದಿರ ನಿರ್ಮಾಣ ನಿರ್ಣಯ?ಧರ್ಮ ಸಂಸದ್ ನಲ್ಲಿ ರಾಮಮಂದಿರ ನಿರ್ಮಾಣ ನಿರ್ಣಯ?

ಏಕ ಸಿದ್ಧಾಂತವನ್ನು ಪ್ರತಿಪಾದಿಸುವ ಸಂಘಟನೆ ಒಂದು ಆಯೋಜಿಸಿರುವ ವಸ್ತು ಪ್ರದರ್ಶನಕ್ಕೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವುದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಲಾಗಿದೆ.

Circular to let students to watch 'Hindu Vaibhava' has been canceled

'ವಸ್ತು ಪ್ರದರ್ಶನ ಎಂಬ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳಿಗೆ ಹೋಗಲು ಅವಕಾಶ ಕಲ್ಪಿಸುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಅದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಯಿತು ಆದ್ದರಿಂದ ಸುತ್ತೋಲೆ ವಾಪಸ್ ಪಡೆಯಲಾಗಿದೆ' ಎಂದು ಡಿಡಿಪಿಐ ಶೇಷಶಯನ ಹೇಳಿದ್ದಾರೆ.

In Pics:ಉಡುಪಿಯಲ್ಲಿ ಜರುಗುತ್ತಿರುವ ಧರ್ಮ ಸಂಸದ್ ಸಮ್ಮೇಳನದ ಚಿತ್ರಸಂಪುಟ

'ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಏರ್ಪಡಿಸುವ ವಸ್ತು ಪ್ರದರ್ಶನಕ್ಕೂ ಶಾಲಾ ಮಕ್ಕಳನ್ನು ಕಳುಹಿಸಿತ್ತೀರ' ಎಂದು ಕೆಲವರು ಡಿಡಿಪಿಐ ಅವರನ್ನು ಪ್ರಶ್ನಿಸಿದರು. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಡಿಡಿಪಿಐ ಅವರು ಸುತ್ತೋಲೆ ವಾಪಾಸ್ ಪಡೆದಿದ್ದಾರೆ.

'ಪೇಜಾವರಶ್ರೀಗಳ ಕಣ್ಣ ಮುಂದೆಯೇ ರಾಮ ಮಂದಿರ ನಿರ್ಮಾಣ''ಪೇಜಾವರಶ್ರೀಗಳ ಕಣ್ಣ ಮುಂದೆಯೇ ರಾಮ ಮಂದಿರ ನಿರ್ಮಾಣ'

'ಶಾಲಾ ಮಕ್ಕಳಿಗೆ ವಸ್ತುಪ್ರದರ್ಶನ ವೀಕ್ಷಿಸಲು ಅವಕಾಶ ನೀಡಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸಹ ಹೇಳಿದ್ದರು, ಹಾಗಾಗಿಯೇ ಸುತ್ತೋಲೆ ಹೊರಡಿಸಲಾಗಿತ್ತು' ಎಂದು ಡಿಡಿಪಿಐ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಡರು.

English summary
Circular issued by DDPI to let students to attend 'Hindu Vaibhava' exhibition has been taken back. there is some opposition against circulation so DDPI took back the circulation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X