ಉಡುಪಿಯಲ್ಲಿ ಲಾಕ್ ಡೌನ್ ನಡುವೆ ಮದುವೆ; 11 ಮಂದಿ ವಿರುದ್ಧ ಕೇಸ್

ಉಡುಪಿ, ಏಪ್ರಿಲ್ 20: ಲಾಕ್ ಡೌನ್ ಆದೇಶ ಉಲ್ಲಂಘಿಸಿ, ಅನುಮತಿ ಇಲ್ಲದೇ ಮದುವೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಹನ್ನೊಂದು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯಲ್ಲಿನ ಅಲೆವೂರು ಗ್ರಾಮದ ದುಗ್ಲಿಪದವು ಎಂಬಲ್ಲಿ ನಿನ್ನೆ ಲಾಕ್ ಡೌನ್ ಆದೇಶ ಉಲ್ಲಂಘಿಸಿ, ಯಾವುದೇ ಅನುಮತಿಯನ್ನೂ ತೆಗೆದುಕೊಳ್ಳದೇ ಮದುವೆ ಕಾರ್ಯಕ್ರಮವನ್ನು ನಡೆಸಲಾಗಿದೆ. ಮದುವೆಯಲ್ಲಿ ಭಾಗಿಯಾದ 11 ಮಂದಿ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

ಮಂಚಿಯ ಯುವಕ ಮತ್ತು ಮಂಗಳೂರು ಬೋರುಗುಡ್ಡೆಯ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಅನುಮತಿ ಪಡೆಯದೆ ದ.ಕ.ಜಿಲ್ಲೆಯಿಂದ ಯುವತಿಯ ಕುಟುಂಬದವರು ಉಡುಪಿ ಜಿಲ್ಲೆಗೆ ಬಂದಿದ್ದರು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮದುವೆಯಲ್ಲಿ ಜನ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

Case Against 11 For Conducting Marriage Between Lockdown Without Permission In Duglipadavu

ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮದುವೆಗೆ ಬಂದಿದ್ದ ಇತರರು ಪರಾರಿಯಾಗಿದ್ದಾರೆ. ವರ, ವಧು ವಿರುದ್ಧವೂ ದೂರು ದಾಖಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+