ಶೀರೂರು ಮಠದ ಬಾವಿಯಲ್ಲಿ ಸಿಕ್ಕಿತು ಮದ್ಯದ ಬಾಟಲಿ!

Recommended Video

      Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳ ಅಸಹಜ ಸಾವು ಪ್ರಕರಣ : ಬಾವಿಯಲ್ಲಿ ಸಿಕ್ತು ಮದ್ಯದ ಬಾಟಲಿಗಳು

      ಉಡುಪಿ, ಜುಲೈ.24: ಶೀರೂರು ಶ್ರೀಗಳ ಸಾವಿನ ತನಿಖೆ ಚುರುಕುಗೊಂಡಿದ್ದು, ಪೊಲೀಸ್ ಮಠವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಎಲ್ಲಾ ಕಡೆ ಪರಿಶೀಲನೆ ನಡೆಸುತ್ತಿದ್ದಾರೆ. ಶೀರೂರು ಮಠದಲ್ಲಿ ಒಟ್ಟು 8 ಸಿಸಿ ಕ್ಯಾಮರಗಳಿದ್ದು, ಅವುಗಳನ್ನು ಒಟ್ಟು ಮೂರು ಡಿವಿಆರ್ ಗಳಲ್ಲಿ ಸ್ಟೋರ್ ಮಾಡಲಾಗಿತ್ತು.

      ಪೊಲೀಸ್ ತನಿಖೆ ವೇಳೆ ಡಿವಿಆರ್ ಗಳು ನಾಪತ್ತೆಯಾಗಿತ್ತು. ಆದರೆ ಇದೀಗ ಸಿಸಿ ಕ್ಯಾಮರದ ಡಿವಿಆರ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಪೊಲೀಸ್ ಯಾವುದೇ ಮಾಹಿತಿ ಹೊರಹಾಕಿಲ್ಲ. ತನಿಖೆ ಚುರುಕುಗೊಳಿಸಿದ ಪೊಲೀಸರು, ಶೀರೂರು ಮಠದ ಬಾವಿಯಲ್ಲೂ ಹುಡುಕಾಟ ನಡೆಸಿದ್ದಾರೆ.

      ಜಿಲ್ಲಾ ಪೊಲೀಸ್ ವಿಶೇಷ ತಂಡವನ್ನು ರಚಿಸಿದ್ದು, ಬೇರೆ ಬೇರೆ ದಿಕ್ಕುಗಳಲ್ಲಿ ತನಿಖೆ ಮುಂದುವರೆಯುತ್ತಿದೆ. ಶಾಖ ಮಠವಾದ ಶೀರೂರು ಮಠ ಹಾಗೂ ಕೃಷ್ಣ ಮಠದ ಪಕ್ಕದಲ್ಲಿರುವ ಬಾವಿಯಲ್ಲಿ ಶೋಧ ನಡೆಸಿದ ಪೊಲೀಸರು, ಬಾವಿಯಲ್ಲಿದ್ದ ಕೆಲವು ವಸ್ತುಗಳನ್ನು ಮೇಲಕ್ಕೆತ್ತಿದ್ದಾರೆ.

      Bottle of liquor has been found in well of the Shirur Mutt

      ಕೊಕ್ಕೆಯೊಂದರಿಂದ ಮೇಲೆತ್ತಿ ಕೊಂಡೆಯ್ದು, ಸಿಕ್ಕಿದ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಭದ್ರತೆಗೊಳಿಸಿದ್ದಾರೆ. ಈ ಮಧ್ಯೆ ಬಾವಿಯಲ್ಲಿ ಮದ್ಯದ ಬಾಟಲಿ ಕೂಡ ಲಭ್ಯವಾಗಿದ್ದು, ಹೆಚ್ಚಿನ ಶಂಕೆ ವ್ಯಕ್ತವಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+