ಉಡುಪಿ ನಗರದ ಪುರಾತನ ಕಟ್ಟಡ ಭಾಗಶಃ ಕುಸಿತ: ಕಟ್ಟಡದಲ್ಲಿದ್ದವರು ಪಾರು
ಉಡುಪಿ, ಸೆಪ್ಟೆಂಬರ್ 18: ಉಡುಪಿ ನಗರದ ಹೃದಯ ಭಾಗದಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ವರ್ಷ ಹಳೆಯದಾದ ಬಹು ಮಹಡಿ ಕಟ್ಟಡವೊಂದು ಭಾಗಶಃ ಕುಸಿದು ಬಿದ್ದಿದ್ದು, ಕಟ್ಟಡದಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಘಟನೆ ಇಂದು ಉಡುಪಿ ನಗರದ ಚಿತ್ತರಂಜನ್ ಸರ್ಕಲ್ ನಲ್ಲಿ ನಡೆದಿದ್ದು, ಉದ್ಯಮಿ ಸಾಯಿರಾಜ್ ಹೆಗ್ಡೆ ಎಂಬುವರಿಗೆ ಸೇರಿದ ರಾಯಲ್ ಮಹಲ್ ಬಹು ಮಹಡಿ ಕಟ್ಟಡ ಇದಾಗಿದೆ.

ಇಂದು ಮಧ್ಯಾಹ್ನ ವೇಳೆ ಇದ್ದಕ್ಕಿದ್ದಂತೆ ಕುಸಿತಗೊಂಡಿದ್ದು, ಈ ವೇಳೆ ಕಟ್ಟಡದ ಒಳಗಡೆ ಇದ್ದವರು ಹೊರಗಡೆ ಓಡಿ ಬಂದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ.

ಕಟ್ಟಡದ ಒಂದು ಭಾಗ ಸಂಪೂರ್ಣ ಕುಸಿದಿದ್ದು, ಕಟ್ಟಡದಲ್ಲಿ ಭಾರತೀಯ ಜನ ಔಷಧಿ ಕೇಂದ್ರ, ಹೋಟೆಲ್, ಬೇಕರಿ ಸೇರಿದಂತೆ ಐದಾರು ಅಂಗಡಿಗಳಿದ್ದವು. ಸದ್ಯ ಅಗ್ನಿಶಾಮಕ ದಳದವರು ಬಿದ್ದ ಕಟ್ಟಡದ ಮಣ್ಣು ತೆರವು ಕಾರ್ಯಚರಣೆ ನಡೆಸುತ್ತಿದ್ದು, ಪೂರ್ತಿ ಕಟ್ಟಡವನ್ನು ಕೂಡಲೇ ತೆರವುಗೊಳಿಸವಂತೆ ನಗರಸಭೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Recommended Video
Air ಇಂಡಿಯಾಗೆ ಗ್ರಾಹಕರಿಗೆ ದೊಡ್ಡ shock | Oneindia Kannada












Click it and Unblock the Notifications