ಕಾರ್ಕಳದ ಅಯ್ಯಪ್ಪ ನಗರದಲ್ಲಿ ಒಂಟಿ ಮಹಿಳೆ ಕೊಲೆ
ಉಡುಪಿ, ಜುಲೈ.09: ಕಾರ್ಕಳದ ಅಯ್ಯಪ್ಪ ನಗರದಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ಲೊರಿನ್ ಡಿಸೋಜ(54) ಕೊಲೆಯಾದ ಮಹಿಳೆ. ಪ್ಲೊರಿನ್ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಕೃತ್ಯ ನಡೆದ ದಿನ ಮನೆಯಲ್ಲಿ ಈ ಮಹಿಳೆ ಒಂಟಿಯಾಗಿದ್ದರು.
ದುಷ್ಕರ್ಮಿಗಳು ಮನೆಗೆ ನುಗ್ಗಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕುತ್ತಿಗೆಯ ಭಾಗದಲ್ಲಿ ಇರಿದ ಗಾಯಗಳಾಗಿದ್ದು ,ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೊಲೆಯಾದ ಮಹಿಳೆ ಬಡ್ಡಿ ವ್ಯವಹಾರ ಮತ್ತು ಜಿಮ್ ನಡೆಸುತ್ತಿದ್ದರು. ದುಷ್ಕರ್ಮಿಗಳು ಮನೆಯಲ್ಲಿ ದ್ವಿಚಕ್ರವಾಹನ ಮತ್ತು ಚಿನ್ನ ದೋಚಿ ಪರಾರಿಯಾಗಿದ್ದಾರೆ. ವ್ಯವಹಾರಿಕ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ಮೂಡಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ತಿಂಗಳು ಕನಕಪುರದಲ್ಲಿ ಅಪರಿಚಿತ ಮಹಿಳೆಯೊಬ್ಬರನ್ನು ಕೊಲೆ ಮಾಡಿ ಗುರುತು ಸಿಗದಂತೆ ಮುಖಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಘಟನೆ ರಾಯಸಂದ್ರ ಬಳಿಯ ಹೌಸಿಂಗ್ ಬೋರ್ಡ್ ನಲ್ಲಿ ನಡೆದಿತ್ತು. ಈ ಪ್ರದೇಶದಲ್ಲಿನ ಕುರಿಹಾಹಿಗಳಿಂದ ಈ ಘಟನೆ ಬೆಳಕಿಗೆ ಬಂದಿತ್ತು.












Click it and Unblock the Notifications