ಜ.3ರಂದು ತುಮಕೂರಿಗೆ ಭೇಟಿ ನೀಡಲಿದ್ದಾರೆ ಮೋದಿ

By: ಡಾ. ಅನಂತಕೃಷ್ಣನ್
Subscribe to Oneindia Kannada

ತುಮಕೂರು, ಡಿಸೆಂಬರ್ 28 : ಹಿಂದೂಸ್ತಾನ್‌ ಏರೋನಾ­ಟಿ­ಕಲ್‌ ಲಿಮಿಟೆಡ್‌ (ಎಚ್ಎಎಲ್‌) ತುಮಕೂರಿನಲ್ಲಿ ಲಘು ಹೆಲಿಕಾಪ್ಟರ್ ಘಟಕವನ್ನು ಸ್ಥಾಪಿಸಲಿದೆ. ಜನವರಿ 3ರಂದು ಘಟಕ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ.

ಜನವರಿ 3ರ ಭಾನುವಾರ ಕರ್ನಾಟಕಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ಸಂಶೋಧನಾ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಮೈಸೂರಿನಲ್ಲಿ 103 ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಲಿದ್ದಾರೆ ಮತ್ತು ಎಚ್‌ಎಎಲ್ ಹೆಲಿಕಾಪ್ಟರ್ ಘಟಕಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. [ಗುಬ್ಬಿಯ helicopter ಘಟಕದ ಬಗ್ಗೆ ಓದಿ]

hal

ಯುಪಿಎ ಸರ್ಕಾರದ 2ನೇ ಅವಧಿಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಎಚ್‌ಎಎಲ್ ಲಘು ಹೆಲಿ­ಕಾಪ್ಟ­ರ್‌­ ಘಟಕವನ್ನು ನಿರ್ಮಾಣ ಮಾಡಲು ಒಪ್ಪಿಗೆ ದೊರಕಿತ್ತು. ರಾಜ್ಯ ಸರ್ಕಾರ 610 ಎಕರೆ ಜಾಗವನ್ನು ಘಟಕ ನಿರ್ಮಾಣಕ್ಕಾಗಿ ನೀಡಿದೆ. [ಜನವರಿ 3ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ]

ಎಚ್‌ಎಎಲ್ ಈ ಘಟಕ ನಿರ್ಮಾಣಕ್ಕಾಗಿ ಸುಮಾರು 4000 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಈ ಘಟಕದಲ್ಲಿ 3000 ಕೆ.ಜಿ.ತೂಕದ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ನಿರ್ಮಾಣ ಮಾಡಲು ಎಚ್‌ಎಎಲ್ ಉದ್ದೇಶಿಸಿದೆ. 5 ರಿಂದ 6 ಜನರು ಪ್ರಯಾಣಿಸಬಹುದಾದದ ಈ ಹೆಲಿಕಾಪ್ಟರ್‌ ಅನ್ನು ಭೂ ಸೇನೆ ಮತ್ತು ವಾಯುಸೇನೆ ಬಳಸಲಿವೆ.

ಭವಿಷ್ಯದಲ್ಲಿ ಈ ಘಟಕದಲ್ಲಿ 10 ರಿಂದ 12 ಸಾವಿರ ಟನ್ ತೂಕದ ಹೆಲಿಕಾಪ್ಟರ್ ನಿರ್ಮಾಣ ಮಾಡುವ ಗುರಿಯನ್ನು ಎಚ್‌ಎಎಲ್ ಹೊಂದಿದೆ. 2019ರ ವೇಳೆಗೆ ಈ ಘಟಕದಿಂದ ಮೊದಲ ಹೆಲಿಕಾಪ್ಟರ್ ತಯಾರಾಗಲಿದೆ. ಘಟಕ ನಿರ್ಮಾಣದಿಂದ 3 ರಿಂದ 4 ಸಾವಿರ ನೇರ ಉದ್ಯೋಗ ಸೃಷ್ಟಿ­ಯಾ­ಗ­ಲಿದೆ ಎಂದು ಅಂದಾಜಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi will lay the foundation stone for Hindustan Aeronautics Ltd's (HAL) chopper facility at Gubbi taluk in Tumakuru during the first week of January. The Karnataka Government has allotted 610 acres of land for Light Utility Helicopter (LUH) unit.
Please Wait while comments are loading...