ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿನ ಸಲ್ಮಾ ಹೊಟ್ಟೆಯಲ್ಲಿದ್ದದ್ದು 99 ಕಲ್ಲುಗಳು!

By ಕುಮಾರಸ್ವಾಮಿ, ತುಮಕೂರು
|
Google Oneindia Kannada News

ತುಮಕೂರು, ಮಾರ್ಚ್ 01 : ಜಿಲ್ಲಾ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಅದೇ ಜಿಲ್ಲಾಸ್ಪತ್ರೆಯ ವೈದ್ಯರು ವೈದ್ಯ ಲೋಕಕ್ಕೆ ಸವಾಲಾಗಿದ್ದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಆ ಮಹಿಳೆಯ ಹೊಟ್ಟೆಯಲ್ಲಿದದ್ದು ಒಂದಲ್ಲ ಎರಡಲ್ಲ ಬರೊಬ್ಬರಿ 99 ಕಲ್ಲುಗಳು. ಮೊದಲೇ ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಿ ಕಲ್ಲುಗಳನ್ನು ಹೊರ ತೆಗೆಯುವುದೇ ವೈದ್ಯರಿಗೆ ಒಂದು ದೊಡ್ಡ ಸವಾಲಾಗಿತ್ತು.

ಆದರೂ ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯ ಡಾ.ವಾಸೀಮ್ ನೇತೃತ್ವದ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆಯ ಬಳಿಕ ಕಲ್ಲುಗಳನ್ನು ಹೊರ ತೆಗೆದಿದೆ. 45 ವರ್ಷದ ಸಲ್ಮಾ ಎಂಬ ಈ ಮಹಿಳೆಯೆ ಶಸ್ತ್ರ ಚಿಕಿತ್ಸೆಗೊಳಗಾದವರು, ಕಳೆದ 6 ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು.

Government doctors remove 99 stones from a woman in Tumakuru

ಇದಕ್ಕೂ ಮುನ್ನ ಸಲ್ಮಾ ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಮಾಡುವುದೇ ಸವಾಲಾಗಿತ್ತು. ಆದರೂ ಹೊಟ್ಟೆ ನೋವಿನ ಕಾರಣ ಸ್ಕ್ಯಾನ್ ಮಾಡಿದಾಗ ಪಿತ್ತಜನಕಾಂಗದಲ್ಲಿ ಕಲ್ಲುಗಳಿರುವುದು ಪತ್ತೆಯಾಗಿದೆ.

ಬಳಿಕ ಶಸ್ತ್ರ ಚಿಕಿತ್ಸೆ ಮಾಡಿದಾಗ, ಹೊಟ್ಟೆಯಲ್ಲಿ 99 ಕಲ್ಲುಗಳು ಪತ್ತೆಯಾಗಿವೆ. ಇಷ್ಟೊಂದು ಪ್ರಮಾಣದಲ್ಲಿ ಕಲ್ಲುಗಳಿರುವ ರೋಗಿಯನ್ನು ನೋಡಿದ್ದು ಇದೇ ಮೊದಲು ಎಂದು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯ ಡಾ. ವಾಸೀಮ್ ತಿಳಿಸಿದರು.

ತುಮಕೂರು ಜಿಲ್ಲಾಸ್ಪತ್ರೆಯ ಡಾ. ವಾಸೀಮ್ ನೇತೃತ್ವದ 8 ಜನ ವೈದ್ಯರ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದೆ. ಈ ಮೂಲಕ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡುವುದಿಲ್ಲ ಎಂಬ ಅಪಖ್ಯಾತಿಯೂ ದೂರವಾದಂತಾಗಿದೆ.

ಹಾಸನದಲ್ಲಿ ಶಿಶುಗಳಿಗಾಗಿ ಅತಿ ದೊಡ್ಡ ಐಸಿಯು : ರೋಹಿಣಿಹಾಸನದಲ್ಲಿ ಶಿಶುಗಳಿಗಾಗಿ ಅತಿ ದೊಡ್ಡ ಐಸಿಯು : ರೋಹಿಣಿ

English summary
A group of government doctors has successfully removed 99 stones from a woman in Tumakuru. It was challenge for the doctors, as the woman, Salma was suffering from diabetes and heart related ailment. The doctors have shown that such critical operations can be done in govt hospitals too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X