ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲೋರೋಸಿಸ್: ಕುಡಿಯುವ ನೀರಿನ ಬಗ್ಗೆ ಎಚ್ಚರವಿರಲಿ

By * ಮಾಹಿತಿ ಕೃಪೆ : ವಾರ್ತಾ ಇಲಾಖೆ
|
Google Oneindia Kannada News

ಮನುಷ್ಯನ ದೇಹವು ಪಂಚಭೂತ (ವಾಯು, ಜಲ, ಅಗ್ನಿ, ಆಕಾಶ ಮತ್ತು ಭೂಮಿ) ಗಳಿಂದ ಮಾಡಲ್ಪಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಪಂಚಭೂತಗಳಲ್ಲಿ ವಾಯುವಿಗೆ ಮೊದಲ ಸ್ಥಾನ, ಅಷ್ಟೇ ಪ್ರಮುಖವಾಗಿ 'ಜಲ' ಅಂದರೆ 'ನೀರು' ಎರಡನೇ ಸ್ಥಾನದಲ್ಲಿದ್ದು, ದೇಹದ ಉತ್ತಮ ಆರೋಗ್ಯ ಸ್ಥಿತಿ ಕಾಪಾಡಿಕೊಳ್ಳಲು ಶುದ್ದವಾದ ನೀರು ಅತ್ಯಂತ ಅವಶ್ಯಕವಿರುತ್ತದೆ.

ಭೂಮಂಡಲದಲ್ಲಿ 'ನೀರು' ನಾನಾ ಮೂಲಗಳಿಂದ (ಕೊಳವೆ ಬಾವಿ, ಹಳ್ಳ, ಕೊಳ್ಳ, ಕೆರೆ, ಬಾವಿ, ನದಿ, ಸಮುದ್ರ) ಲಭ್ಯವಿರುತ್ತದೆ. ಹೀಗೆ ನಾನಾ ಮೂಲಗಳಿಂದ ಲಭ್ಯವಿರುವ ನೀರಿನಲ್ಲಿ ಪ್ಲೋರೈಡ್,ಆರ್ಸನಿಕ್, ನೈಟ್ರೇಟ್, ಕ್ಲೋರೈಡ್ ಹಾಗೂ ಐರನ್‌ನಂತಹ ನಾನಾ ರೀತಿಯ ರಾಸಾಯನಿಕ ವಸ್ತುಗಳು ಕರಗಿರುತ್ತವೆ. ದಿನ ನಿತ್ಯ ಅವಶ್ಯಕವಿರುವ ನೀರಿನಲ್ಲಿ ಈ ರೀತಿಯ ರಾಸಾಯನಿಕ ಪದಾರ್ಥಗಳು ಪ್ರತಿದಿನ ನಮ್ಮ ದೇಹಕ್ಕೆ ನಿಗದಿತ ಪ್ರಮಾಣದಲ್ಲಿ ಅವಶ್ಯಕವಿರುತ್ತದೆ.

ಬೇಸಿಗೆಯ ತಾಪ ದಿನೇ ದಿನೇ ಹೆಚ್ಚುತ್ತಲೇ ಇದೆ. ಶುದ್ಧವಾದ ಕುಡಿಯುವ ನೀರಿನ ಅಭಾವ ತಲೆ ದೋರುತ್ತಿದೆ. ಮರಗಿಡಗಳು ಕಡಿಮೆ ಆಗಿ ಮಳೆಯ ಕೊರತೆಯಿಂದಾಗಿ ನೀರಿಗಾಗಿ ಬರಗಾಲ ಬಂದೊದಗಿದೆ. ಶುದ್ಧವಾದ ಕುಡಿಯುವ ನೀರಿಲ್ಲದೆ ದನಕರುಗಳು, ಜಾನುವಾರುಗಳು, ಜನರಿಗೂ ಎಲ್ಲರಲ್ಲೂ ನೀರಿನ ಅಭಾವ ಬಂದೊದಗಿದೆ.

Fluorosis: Symptoms, Causes

ತುಮಕೂರು ಜಿಲ್ಲೆಯಲ್ಲೂ ಬರಗಾಲದ ಪ್ರಭಾವ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದ್ದು, ಜನರು ಶುದ್ಧ ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. ಪ್ರಮುಖವಾಗಿ ಜಿಲ್ಲೆಯ ಮಧುಗಿರಿ ವಿಭಾಗದಲ್ಲಿನ ಪಾವಗಡ, ಮಧುಗಿರಿ, ಕೊರಟಗೆರೆ ಹಾಗೂ ಶಿರಾ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಆ ಭಾಗದ ಜನರು ಬೋರ್‌ವೆಲ್, ಬಾವಿ, ಕೆರೆಗಳ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ. ಆದರೆ ಇಂತಹ ನೀರಿನಿಂದ ಆಗಬಹುದಾದ ದುಷ್ಪರಿಣಾಮಗಳ ಅರಿವಿಲ್ಲದೆ ದಶಕಗಳಿಂದ ಇದೇ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ.

ಇಂತಹ ನೀರಿನಲ್ಲಿ ವಿಷಪೂರಿತ ರಾಸಾಯನಿಕ ವಸ್ತುಗಳು ಕರಗಿರುತ್ತವೆ. ಇಂತಹ ನೀರನ್ನು ಸೇವಿಸಿದಾಗ ದೇಹದ ಆರೋಗ್ಯ ಹದಗೆಟ್ಟು ನಾನಾ ದುಷ್ಪರಿಣಾಮಗಳಾಗಿ ಕೆಲವೊಮ್ಮೆ ಗುಣಪಡಿಸಲು ಆಗದಂತಹ ಖಾಯಿಲೆಗಳು ಬರುತ್ತವೆ. ಅಂತಹ ಖಾಯಿಲೆಯಲ್ಲಿ ಒಂದು ಪ್ಲೋರೋಸಿಸ್ .

ಪ್ಲೋರೋಸಿಸ್ ಎಂದರೆ ಪ್ಲೋರೈಡ್ ಅಂಶದಿಂದ ದೇಹದಲ್ಲಿ ಉಂಟಾಗುವ ಒಂದು ಅನಾರೋಗ್ಯದ ಬೆಳವಣಿಗೆ.

* ಫ್ಲೂರೈಡ್‌ನ್ನು ಹೆಚ್ಚು ಸೇವನೆಯಿಂದ ಫ್ಲೂರಾಸಿಸ್ ಕಾಯಿಲೆ ಬರುತ್ತದೆ. ಇದರಿಂದ ದೇಹದ ಅನೇಕ ಭಾಗಗಳಿಗೆ ದುಷ್ಪರಿಣಾಮಗಳು ಆಗುತ್ತದೆ.

* ಸಾಮಾನ್ಯವಾಗಿ ಕುಡಿಯುವ ನೀರು, ಆಹಾರ, ಕೆಲವು ಔಷಧಿಗಳ ಸೇವನೆ ಹಾಗೂ ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳು, ಹಾಗೂ ಮುಂತಾದವುಗಳಿಂದ ಫ್ಲೂರೈಡ್ ದೇಹದೊಳಗೆ ಪ್ರವೇಶಿಸುತ್ತದೆ.

* ಪ್ಲೊರೋಸಿಸ್ ಹಲ್ಲು, ಎಲುಬಿನ ಹಂದರ, ಕೀಲುಗಳಿಗೆ ಹಾನಿ ಹಾಗೂ ನೋವು ಉಂಟು ಮಾಡುತ್ತದೆ. ಕುಡಿಯುವ ನೀರಿನಲ್ಲಿ ಫ್ಲೂರೈಡ್ ಅಂಶ ಹೆಚ್ಚಾಗಿದ್ದರೆ ಪ್ಲೊರೋಸಿಸ್ ಕಾಯಿಲೆ ಬರುತ್ತದೆ.

* ಬಾವಿಗಳು ಆಥವಾ ಕೈ ಪಂಪುಗಳ ನೀರು ಕುಡಿಯುವರು ಈ ಖಾಯಿಲೆಗೆ ತುತ್ತಾಗುವ ಸಂಭವ ಹೆಚ್ಚು.

ಪ್ಲೊರೋಸಿಸ್‌ನ ವಿಧಗಳು:-

1) ದಂತ ಪ್ಲೊರೋಸಿಸ್

2) ಮೂಳೆ ಪ್ಲೊರೋಸಿಸ್

3) ದೇಹದ ಇತರೆ ಭಾಗದ ಪ್ಲೊರೋಸಿಸ್

ದಂತ ಪ್ಲೊರೋಸಿಸ್ ಲಕ್ಷಣಗಳು:-

1) ಹಲ್ಲಿನ ಮೇಲೆ ಹಳದಿ ಬಣ್ಣ ಅಥವಾ ಕಂದು ಬಣ್ಣ ಉಂಟಾಗುತ್ತದೆ, ಹಲ್ಲುಗಳ ಮೇಲೆ ಹಳದಿ ಬಣ್ಣದ ಅಡ್ಡಗೆರೆಗಳು ಉಂಟಾಗುತ್ತದೆ.

2) ಹಲ್ಲಿನ ಒಳ ಹಾಗೂ ಹೊರಭಾಗಗಳೆರಡಕ್ಕೂ ತೊಂದರೆಯಾಗುತ್ತದೆ.

3) ಹಲ್ಲಿನ ಮೇಲಿನ ಕಂದು ಬಣ್ಣದ ಗುರುತು ಪ್ಲೊರೋಸಿಸ್ ಸೂಚನೆ.

ಪರಿಣಾಮ:-

ದಂತ ಫ್ಲೂರಾಸಿಸ್‌ಗೆ ಮಕ್ಕಳು ಸುಲಭವಾಗಿ ತುತ್ತಾಗುತ್ತಾರೆ. (ಮಕ್ಕಳ ಹಲ್ಲುಗಳ ಬೆಳವಣಿಗೆಯ ಸಮಯದಲ್ಲಿ ಹೆಚ್ಚು ಫ್ಲೂರೈಡ್ ಅಂಶವಿರುವ ನೀರು, ಕೆಲವು ಆಹಾರ ಪದಾರ್ಥಗಳು ಹಾಗೂ ಡಬ್ಬಿಗಳಲ್ಲಿನ ತಿನಿಸುಗಳು ಮತ್ತು ಫ್ಲೂರೈಡ್ ಹೆಚ್ಚಾಗಿರುವ ಟೂತಪೇಸ್ಟಗಳು ಮುಂತಾದವುಗಳನ್ನು ಬಳಸುವುದರಿಂದ ದಂತ ಪ್ಲೊರೋಸಿಸ್ ಬರುತ್ತದೆ ).

English summary
Fluorosis is a cosmetic condition that affects the teeth. It’s caused by overexposure to fluoride during the first eight years of life. This is the time when most permanent teeth are being formed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X