ನಾನು ಮುಖ್ಯಮಂತ್ರಿ ಆಗಿದ್ದರೆ ಮೂರೇ ದಿನಕ್ಕೆ ನೀರು ಬಿಡ್ತಿದ್ದೆ!

ಬೆಂಗಳೂರು, ಅ. 31: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಗ ವಿಜಯೇಂದ್ರನನ್ನು ಹೊಗಳುತ್ತಾರೆ. ಮಗ ಬಂದಿದ್ದಕ್ಕೆ ಶಿರಾದಲ್ಲಿ ಬಿಜೆಪಿಗೆ ನೆಲೆ ಬಂದಿದೆ ಅಂತಾರೆ. ಹಾಗಾದರೆ ಡಿಸಿಎಂ ಗೋವಿಂದ್ ಕಾರಜೋಳ, ಸಚಿವರಾದ ಶ್ರೀರಾಮುಲು, ಆರ್. ಅಶೋಕ್ ಅವರಿಗೆ ಕಿಮ್ಮತ್ತೇ ಇಲ್ಲವಾ? ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಲೇವಡಿ ಮಾಡಿದ್ದಾರೆ.

ತುಮಕೂರು ಜಿಲ್ಲಾ ಶಿರಾ ಪಟ್ಟಣದಲ್ಲಿ ಜಂಟಿ ಸುದ್ದಿಗೋಷ್ಟೀಯಲ್ಲಿ ಅವರು ಮಾತನಾಡಿದರು. ತಳಸಮುದಾಯಗಳನ್ನು ಕಡೆಗಣಿಸುವುದೇ ಸಿಎಂ ಯಡಿಯೂರಪ್ಪ‌ ಅವರ ಕೆಲಸ. ಮಾಜಿ ಶಾಸಕ ಸುರೇಶ್ ಗೌಡ ಇಲ್ಲಿಯೇ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಡಿಸಿಎಂ ಗೋವಿಂದ್ ಕಾರಜೋಳ ಅವರು ತಳಸಮುದಾಯದ ಮುಖಂಡ, ಎಂಎಲ್‌ಸಿ ರವಿಕುಮಾರ್ ಅವರೂ ತಳಸಮುದಾಯದ ಮುಖಂಡ. ಪಾಪ ಇವರೆಲ್ಲರೂ ಉಪ ಚುನಾವಣೆಯಲ್ಲಿ ಓಡಾಡ್ತಿದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ಮಗನನನು ಹೊಗಳುತ್ತಾರೆ. ಮಗ ಬಂದಿದ್ದಕ್ಕೆ ಇಲ್ಲಿ (ಶಿರಾದಲ್ಲಿ) ಬಿಜೆಪಿಗೆ ನೆಲೆ ಬಂತಂತೆ. ಅವರಿಗೆ ಮಾನ ಮರ್ಯಾದೆ ಇದೆಯಾ? ಎಂದು ರಾಜಣ್ಣ ಅವರು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದರು.

ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೊಗಳುತ್ತಿದ್ದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ಇದೀಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಯಡಿಯೂರಪ್ಪ ಅವರಿಂದ ಅವಹೇಳನ

ಯಡಿಯೂರಪ್ಪ ಅವರಿಂದ ಅವಹೇಳನ

ಬಿಜೆಪಿಯ ತಳ ಸಮುದಾಯದ ಮುಖಂಡರಿಗಾದರೂ ಮಾನ-ಮರ್ಯಾದೆ ಇದೆಯಾ ಎಂದು ಪ್ರಶ್ನೆ ಮಾಡಿರುವ ರಾಜಣ್ಣ ಅವರು, ಮರ್ಯಾದೆ ಇದ್ದರೆ ಮೊದಲು ಎಲ್ಲರೂ ಶಿರಾ ಪಟ್ಟಣದಿಂದ ಹೊರಡಲಿ ಎಂದು ಆಗ್ರಹಿಸಿದರು. ಬಿಜೆಪಿಯ ತಳಸಮುದಾಯದ ನಾಯಕರನ್ನೇ ಸಿಎಂ ಯಡಿಯೂರಪ್ಪ ಅವರು ಅವಹೇಳನ ಮಾಡುತ್ತಾರೆ ಎಂದು ಸಿಎಂ ಅವರ ಮಗನ ಪರ ಹೇಳಿಕೆಗೆ ರಾಜಣ್ಣ ವ್ಯಂಗ್ಯವಾಡಿದ್ದಾರೆ.

ಎಲ್ಲ ಅಭಿವೃದ್ಧಿ ನಾವೇ ಮಾಡಿದ್ದು!

ಎಲ್ಲ ಅಭಿವೃದ್ಧಿ ನಾವೇ ಮಾಡಿದ್ದು!

ತುಮಕೂರಿನಲ್ಲಿ ವಿಶ್ವವಿದ್ಯಾಲಯ ಆಗಿರುವುದಕ್ಕೆ ಎಸ್.ಎಂ. ಕೃಷ್ಣ, ಡಾ. ಜಿ. ಪರಮೇಶ್ವರ್ ಅವರು ಕಾರಣ. ನಮ್ಮ ಅಭ್ಯರ್ಥಿ, ಮಾಜಿ ಸಚಿವ ಟಿಬಿ ಜಯಚಂದ್ರ ಹಲವು ಕೊಡುಗೆಗಳನ್ನು ಕೊಟ್ಟಿದ್ದಾರೆ. ಕ್ಷೇತ್ರದ ಬ್ಯಾರೇಜ್‌ಗಳನ್ನು ನೋಡಿದ್ರೆ ಸಾಕು ಅರ್ಥವಾಗುತ್ತದೆ. ಕುರಿ ಸತ್ತರೆ 5 ಸಾವಿರ ರೂ. ಘೋಷಣೆ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಆದರೆ ಅದನ್ನ ರದ್ಧುಮಾಡಿದ್ದು ಬಿಜೆಪಿ ಸರ್ಕಾರ ಎಂದು ರಾಜಣ್ಣ ವಾಗ್ದಾಳಿ ನಡೆಸಿದರು.

ಮೂರೇ ದಿನಕ್ಕೆ ನೀರು ಬಿಡ್ತಿದ್ದೆ

ಮೂರೇ ದಿನಕ್ಕೆ ನೀರು ಬಿಡ್ತಿದ್ದೆ

ಸಿಎಂ ಯಡಿಯೂರಪ್ಪ ಅವರು ಭಾಷಣ ಮಾಡಿ ಹೋಗುತ್ತಾರೆ. ಆರು ತಿಂಗಳೊಳಗೆ ನೀರು ಬಿಡುತ್ತೇನೆ ಎಂದು ಹೇಳಿ ಹೋಗಿದ್ದಾರೆ. ನೀರು ಬಿಡುವುದಕ್ಕೆ ಆರು ತಿಂಗಳು ಬೇಕಾ? ನಾನು ಸಿಎಂ ಆಗಿದ್ದರೆ ಮೂರೇ ದಿನಕ್ಕೆ ನೀರು ಬಿಡ್ತಿದ್ದೆ. ನಾಲೆ ಇದೆ, ನೀರು ಬಿಟ್ಟರೆ ಸಾಕು ನೀರು ಬರುತ್ತದೆ ಎಂದು ಸಿಎಂ ಯಡಿಯೂರಪ್ಪ ಅವರ ಹೇಳಿಕೆಗೆ ಕೆ. ಎನ್. ರಾಜಣ್ಣ ಟಾಂಗ್ ಕೊಟ್ಟಿದ್ದಾರೆ.

ಕ್ಷೇತ್ರದವರಲ್ಲದವರು ಇಲ್ಲಿರಬಾರದು

ಕ್ಷೇತ್ರದವರಲ್ಲದವರು ಇಲ್ಲಿರಬಾರದು

ಕ್ಷೇತ್ರದವರಲ್ಲದವರು ಇಲ್ಲಿರಬಾರದು ಎಂದು ಕೆ.ಎನ್. ರಾಜಣ್ಣ ಒತ್ತಾಯಿಸಿದ್ದಾರೆ. ಚುನಾವಣಾ ಆಯೋಗ ಆ ಕೆಲಸವನ್ನು ಮಾಡಬೇಕು. ಹಾಗೆ ಮಾಡದಿದ್ದರೆ ನಮ್ಮ‌ಹಳ್ಳಿಯವರೇ ಹೊರಗಿನವರನ್ನು ಹೊರ ಹಾಕುತ್ತಾರೆ ಎಂದು ಎಚ್ಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+