ಮುದ್ದಹನುಮೇಗೌಡ್ರು 'ಬಂಡಾಯ' ನಾಮಪತ್ರವೇನೋ ಸಲ್ಲಿಸಿದ್ರು, ಆದ್ರೆ

ಇತ್ತೀಚಿನ ವರ್ಷಗಳಲ್ಲಿ ಲೋಕಸಭಾ ಚುನಾವಣೆಗೆ ಈ ಮಟ್ಟಿನ ಕಾವು ಕರ್ನಾಟಕದಲ್ಲಿ ಏರಿದ ಉದಾಹರಣೆಗಳು ಕಮ್ಮಿ. ಅದಕ್ಕೆ ಮೋದಿ ವಿರುದ್ದ ಎಲ್ಲರೂ ಒಂದಾಗಿರುವುದು ಒಂದು ಕಡೆ, ಇನ್ನೊಂದೆಡೆ ಜೆಡಿಎಸ್ ಮತ್ತು ಕಾಂಗ್ರೆಸ್ ಮಾಡಿಕೊಂಡ ಮೈತ್ರಿಯಿಂದಾದ ಒಂದಲ್ಲಾ ಒಂದು ರಗಳೆಗಳು.

ತಿಳಿಯಾಗಿದ್ದ ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟ ನಂತರ ಅಲ್ಲಿನ ಪರಿಸ್ಥಿತಿ ಕದಡಿದೆ. ಅದರಲ್ಲೂ ಕ್ಷೇತ್ರದ ಹಾಲೀ ಸಂಸದ ಮುದ್ದಹನುಮೇಗೌಡ್ರು, ಮೈತ್ರಿಧರ್ಮವನ್ನು ಧಿಕ್ಕರಿಸಿ, ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೇಲಾಟ ಆರಂಭವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇತ್ತ ಜೆಡಿಎಸ್-ಕಾಂಗ್ರೆಸ್ಸಿನ ಜಂಟಿ ಅಭ್ಯರ್ಥಿಯಾಗಿ ದೇವೇಗೌಡ್ರು ನಾಮಪತ್ರ ಸಲ್ಲಿಸಿದ್ದಾರೆ. ಒಂದು ಕಡೆ, ದೇವೇಗೌಡ್ರು ಇನ್ನೊಂದು ಕಡೆ ಮುದ್ದಹನುಮೇಗೌಡ್ರು ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಎರಡೂ ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದು ವಿಶೇಷ. ಎರಡು ಪಕ್ಷಗಳ ಬೆಳವಣಿಗೆಗಳನ್ನು ನೋಡುತ್ತಾ, ಬಿಜೆಪಿ ಮುಸಿಮುಸಿ ನಗುತ್ತಿದ್ದರೂ ನಗುತ್ತಿರಬಹುದು..

ಮುದ್ದಹನುಮೇಗೌಡ್ರು ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಸಲು ಹೋದಾಗ ದೇವೇಗೌಡರ ವಿರುದ್ದ ಧಿಕ್ಕಾರ, ಗೋಬ್ಯಾಕ್ ಎನ್ನುವ ಘೋಷಣೆ ಮೊಳಗಿದೆ. ಇವೆಲ್ಲದರ ನಡುವೆ ಮುದ್ಧಹನುಮೇಗೌಡ್ರು, ಕಾಂಗ್ರೆಸ್ ವರಿಷ್ಠರ ಯಾವ ಮನವಿ, ಎಚ್ಚರಿಕೆಗೂ ಬಗ್ಗದೇ ನಾಮಪತ್ರ ಸಲ್ಲಿಸಿದ್ದಾರೆ. ಅದು ಕೂಡಾ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ..

ಅಧ್ಯಕ್ಷರೋ ಅಥವಾ ಅನುದಾನಿತ ವ್ಯಕ್ತಿ 'ಬಿಫಾರಂ' ಕೊಡಬೇಕಾಗುತ್ತದೆ

ಅಧ್ಯಕ್ಷರೋ ಅಥವಾ ಅನುದಾನಿತ ವ್ಯಕ್ತಿ 'ಬಿಫಾರಂ' ಕೊಡಬೇಕಾಗುತ್ತದೆ

ಯಾವುದೇ ಒಂದು ಪಕ್ಷದ ಚಿಹ್ನೆಯಡಿಯಲಿ ನಾಮಪತ್ರ ಸಲ್ಲಿಸಬೇಕಾದರೆ, ಆಯಾಯ ಪಕ್ಷದ ಅಧ್ಯಕ್ಷರೋ ಅಥವಾ ಅನುದಾನಿತ ವ್ಯಕ್ತಿ 'ಬಿಫಾರಂ' ಕೊಡಬೇಕಾಗುತ್ತದೆ. ದೇವೇಗೌಡರು ಜೆಡಿಎಸ್ ಬಿಫಾರಂನೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಮುದ್ದಹನುಮೇಗೌಡ್ರ ಕಥೆ?

ಮುದ್ದಹನುಮೇಗೌಡರಿಗೆ ಬಿಫಾರಂ ಕೊಡುವ ಸಾಧ್ಯತೆಯಿಲ್ಲ

ಮುದ್ದಹನುಮೇಗೌಡರಿಗೆ ಬಿಫಾರಂ ಕೊಡುವ ಸಾಧ್ಯತೆಯಿಲ್ಲ

ಕಾಂಗ್ರೆಸ್ ಯಾವ ಕಾರಣಕ್ಕೂ ಮುದ್ದಹನುಮೇಗೌಡರಿಗೆ ಬಿಫಾರಂ ಕೊಡುವ ಸಾಧ್ಯತೆಯಿಲ್ಲ. ಒಂದೋ, ಕಣದಿಂದ ಹಿಂದಕ್ಕೆ ಸರಿಯುವಂತೆ ಎಚ್ಚರಿಕೆ ನೀಡಬಹುದು, ಬೇರೆ ಏನಾದರೂ ಉನ್ನತ ಹುದ್ದೆಯ ಆಮಿಷವನ್ನು ಒಡ್ಡಬಹುದು, ಅದ್ಯಾವುದಕ್ಕೂ ಬಗ್ಗದಿದ್ದರೆ ಪಕ್ಷದಿಂದ ಅವರನ್ನು ಉಚ್ಚಾಟಿಸಬಹುದು.

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

ಬಿಫಾರಂ ಕೊಟ್ಟ ನಂತರವಷ್ಟೇ ಅದು ಆಯಾಯ ಪಕ್ಷಗಳ ಅಧಿಕೃತ ಅಭ್ಯರ್ಥಿ

ಬಿಫಾರಂ ಕೊಟ್ಟ ನಂತರವಷ್ಟೇ ಅದು ಆಯಾಯ ಪಕ್ಷಗಳ ಅಧಿಕೃತ ಅಭ್ಯರ್ಥಿ

ಯಾವುದೇ ಅಭ್ಯರ್ಥಿ, ಒಂದು ಪಕ್ಷದ ಹೆಸರಿನಲ್ಲಿ ಬಿಫಾರಂ ಇಲ್ಲದೇ ನಾಮಪತ್ರ ಸಲ್ಲಿಸಿದರೆ ಅದು ಪಕ್ಷೇತರ ಅಭ್ಯರ್ಥಿಗಳು ಸಲ್ಲಿಸುವ ನಾಮಪತ್ರದಂತಿರುತ್ತದೆ. ಬಿಫಾರಂ ಕೊಟ್ಟ ನಂತರವಷ್ಟೇ ಅದು ಆಯಾಯ ಪಕ್ಷಗಳ ಅಧಿಕೃತ ಅಭ್ಯರ್ಥಿ ಎಂದು ಚುನಾವಣಾ ಆಯೋಗ ಮುದ್ರೆ ಒತ್ತುತ್ತದೆ.

ಪಕ್ಷೇತರ ಅಭ್ಯರ್ಥಿಯಾಗಿ ಪರಿಗಣಿಸಲಾಗುವುದು

ಪಕ್ಷೇತರ ಅಭ್ಯರ್ಥಿಯಾಗಿ ಪರಿಗಣಿಸಲಾಗುವುದು

ಒಂದು ಪಕ್ಷದ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿ, ಹಿಂದಕ್ಕೆ ಪಡೆಯುವ ದಿನದ ವರೆಗೂ ಬಿಫಾರಂ ಸಲ್ಲಿಸದೇ, ನಾಮಪತ್ರ ವಾಪಸ್ ಪಡೆದುಕೊಳ್ಳದೇ ಕಣದಲ್ಲಿ ಮುಂದುವರಿದ ಪಕ್ಷದಲ್ಲಿ ಅಂತಹ ನಾಮಪತ್ರವನ್ನು ಪಕ್ಷೇತರ ಅಭ್ಯರ್ಥಿಯ ನಾಮಪತ್ರವಾಗಿ ಪರಿಗಣಿಸಲಾಗುವುದು. (ನಾಮಪತ್ರದಲ್ಲಿ ಬಿಫಾರಂ ಹೊರತಾಗಿ ಬೇರೆ ಏನಾದರೂ ತಪ್ಪಿದ್ದಲ್ಲಿ, ಇದು ಅನ್ವಯವಾಗುವುದಿಲ್ಲ)

ಮುದ್ದಹನುಮೇಗೌಡ್ರು ವರ್ಸಸ್ ದೇವೇಗೌಡ್ರು

ಮುದ್ದಹನುಮೇಗೌಡ್ರು ವರ್ಸಸ್ ದೇವೇಗೌಡ್ರು

ಹಾಗಾಗಿ, ಮುದ್ದಹನುಮೇಗೌಡ್ರು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದಕ್ಕೆ ಸರಿಯದೇ ಇದ್ದಲ್ಲಿ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಕಳೆದ ಬಾರಿ ಮುದ್ದಹನುಮೇಗೌಡರಿಗೆ 429,868, ಬಿಜೆಪಿಯ, ಈಗಿನ ಅಭ್ಯರ್ಥಿಯೂ ಆಗಿರುವ ಜಿ ಎಸ್ ಬಸವರಾಜು ಅವರಿಗೆ 355, 827 ಮತ್ತು ಜೆಡಿಎಸ್ ನಿಂದ ಸ್ಪ್ರಧಿಸಿದ್ದ ಎ ಕೃಷ್ಣಪ್ಪ ಅವರಿಗೆ 258,683 ಮತಗಳು ಬಂದಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+