Copra: ಮಾರ್ಚ್ 4ರಿಂದ ಕೊಬ್ಬರಿ ಖರೀದಿಯ ನೋಂದಣಿ ಆರಂಭ
ತುಮಕೂರು, ಮಾರ್ಚ್ 02: ಕಲ್ಪತರು ನಾಡು ತುಮಕೂರಿನ ರೈತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಕೊಬ್ಬರಿ ಖರೀದಿ ವಿಚಾರದಲ್ಲಿನ ಬೆಳೆಗಾರರ ಗೊಂದಲ, ಆತಂಕಕ್ಕೆ ತೆರೆ ಬಿದ್ದಿದೆ. ಖರೀದಿ ಕೇಂದ್ರದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಯಾಗಲಿದೆ. ಈ ಸಂಬಂಧ ಇದೇ ಮಾರ್ಚ್ 04 ಸೋವಾರದಿಂದ ನೋಂದಣಿ ಆರಂಭವಾಗಲಿದೆ.
ಹೌದು, ಜಿಲ್ಲೆಯಲ್ಲಿ ಒಟ್ಟು 23 ಕೊಬ್ಬರಿ ಖರೀದಿ ಕೇಂದ್ರಗಳಿವೆ. ಇಲ್ಲಿ ಉತ್ತಮ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿ ನಡೆಯಲಿದೆ. ಇದಕ್ಕಾಗಿ ರೈತರು ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಮಾರ್ಚ್ 4ರಿಂದ ಒಟ್ಟು 45 ದಿನಗಳ ಕಾಲ ನೋಂದಣಿ ನಡೆಯಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ ಎಂದು ವಿಜಯವಾಣಿ ವರದಿ ಮಾಡಿದೆ.

ಕೊಬ್ಬರಿ ಖರೀದಿ ಮಿತಿ ಎಷ್ಟಿದೆ?
ಸರ್ಕಾರ ಕೊಬ್ಬರಿ ಖರೀದಿಗೆ ಮಿತಿ ನಿಗದಿ ಮಾಡಿದೆ. ಅಂದರೆ ಒಬ್ಬರು ರೈತರಿಂದ 15 ಕ್ವಿಂಟಾಲ್ (ಒಂದು ಎಕರೆಗೆ ಆರು ಕ್ವಿಂಟಾಲ್) ಕೊಬ್ಬರಿ ಖರೀದಿಸಬಹುದಾಗಿದೆ. ಈ ಸಂಬಂಧ ಕೃಷಿ ಮಾರಾಟ ಮಂಡಳಿಯು ಅಗತ್ಯ ತಯಾರಿಸಿ ನಡೆಸಿದೆ. ಅದಕ್ಕೂ ಮೊದಲು ನೋಂದಣಿ ಮಾಡಿಕೊಳ್ಳಲಿದೆ ಎಂದು ಕುರಿತು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದ್ದಾರೆ.
ಸೋಮವಾರದಿಂದ ರಜಾದಿನಗಳು ಸೇರಿದಂತೆ ಒಟ್ಟು ಒಂದೂವರೆ ತಿಂಗಳು ಕೊಬ್ಬರಿ ಬೆಳೆಗಾರ ರೈತರ ನೋಂದಣಿ ಪ್ರಕ್ರಿಯೆ ನಡೆಯಲಿದೆ. ನಂತರ ಖರೀದಿ ಪ್ರಕ್ರಿಯೆಗಳು ಶುರುವಾಗಲಿದೆ. ನಿತ್ಯ ಬೆಳಗ್ಗೆ 8ಗಂಟೆಯಿಂದ ಸಂಜೆ 6 ಗಂಟೆವರೆಗೆ ನೋಂದಣಿ ನಡೆಯಲಿದೆ.
ಕೊಬ್ಬರಿ ಖರೀದಿ ಕೇಂದ್ರಗಳ ಮಾಹಿತಿ
ತುಮಕೂರಿನ ಮುನಿಯೂರು, ದುಬ್ಬೆಘಟ್ಟ, ತುಮಕೂರು, ಕೆ.ಬಿ, ಕ್ರಾಸ್, ಚೇಳೂರು, ಕುಣಿಲ್, ಶಿರಾ, ತುರುವೇಕರೆಯಲ್ಲಿ ಎರಡು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹುಳಿಯಾರು, ಕೊನೆಹಳ್ಳಿ, ತಿಪಟೂರು, ಮಾಯಸಂದ್ರ ಒಳಗೊಂಡಂತೆ ಒಟ್ಟು 23ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ನಿಗದಿತ ಸಮಯಕ್ಕೆ ರೈತರು ತೆರಳಿ ನೋಂದಣಿ ಮಾಡಿಸಿಕೊಳ್ಳಬೇಕಿದೆ.
ರೈತರು ಹೆಚ್ಚಿನ ಮಾಹಿತಿಗೆ ತಾಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಂದ ಮಾಹಿತಿ ಪಡೆಯಬಹುದು. ನೀವು ಸಂಪರ್ಕಿಸಬಹುದಾದಿ ದೂರುವಾಣಿ ಸಂಖ್ಯೆಗಳ ಮಾಹಿತಿ ಹೀಗಿದೆ. ತುಮಕೂರು 9448253277, ಗುಬ್ಬಿ 9535781963, ಶಿರಾ 98440 42356, ಕುಣಿಗಲ್ 93429 59690, ಚಿಕ್ಕನಾಯಕನಹಳ್ಳಿ 9686056705, ಮಧುಗಿರಿ 9916378199, ಹಾಗೂ ಪಾವಗಡ 9448448970 ಸಂಪರ್ಕಿಸಬಹುದು, ತುರುವೇಕೆರೆ 9448416334, ತಿಪಟೂರು 9845014293 ಮತ್ತು ಕೊರಟಗೆರೆ 9448001644ಗೆ ಸಂಪರ್ಕಿಸಿ.












Click it and Unblock the Notifications