ತುಮಕೂರು-ಶಿವಮೊಗ್ಗ 4 ಪಥದ ರಸ್ತೆ ಕಾಮಗಾರಿಗೆ ಸಿಗಲಿದೆ ವೇಗ

ತಮಕೂರು, ಏಪ್ರಿಲ್ 5; ಬಹುನಿರೀಕ್ಷಿತ ತುಮಕೂರು- ಶಿವಮೊಗ್ಗ ನಡುವಿನ ಚತುಷ್ಪಥ ರಸ್ತೆ ಕಾಮಗಾರಿ ವೇಗ ಪಡೆದುಕೊಳ್ಳಲಿದೆ. ಕೆಲವು ವರ್ಷಗಳ ಹಿಂದೆ ಆರಂಭವಾದ ನಾಲ್ಕು ಪಥದ ರಸ್ತೆ ಕಾಮಗಾರಿ ಭೂ ಸ್ವಾಧೀನದ ಕಾರಣದಿಂದ ಕುಂಟುತ್ತಾ ಸಾಗಿದೆ.

ರಾಷ್ಟ್ರೀಯ ಹೆದ್ದಾರಿ 206ರ ತುಮಕೂರು-ಶಿವಮೊಗ್ಗ ನಡುವಿನ ರಸ್ತೆ ಯೋಜನೆ ಕಾಮಗಾರಿಯನ್ನು ಭಾರತ್ ಮಾಲಾ ಯೋಜನೆಯಡಿಯಲ್ಲಿ ಕೈಗೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಒಟ್ಟು 6397.47 ಕೋಟಿ ವೆಚ್ಚದ ಈ ಯೋಜನೆಯಿಂದಾಗಿ ಬೆಂಗಳೂರು ಮತ್ತು ಮಲೆನಾಡು ಭಾಗದ ಸಂಪರ್ಕ ಇನ್ನಷ್ಟು ಸುಗಮವಾಗಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕುರಿತು ಟ್ವೀಟ್ ಮಾಡಿದ್ದಾರೆ.

ನಾಲ್ಕು ಪಥರ ರಸ್ತೆ ಯೋಜನೆಗೆ ಭೂ ಸ್ವಾಧೀನ ಮಾಡಿಕೊಂಡು ಪರಿಹಾರ ಕೊಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಆದರೆ, ಪರಿಹಾರದ ಮೊತ್ತ ಹೆಚ್ಚಾದ ಕಾರಣದಿಂದಾಗಿ ಆರ್ಥಿಕ ಸಮಸ್ಯೆ ಎದುರಾಯಿತು. ಇದರಿಂದಾಗಿ ಯೋಜನೆ ಕುಂಟುತ್ತಾ ಸಾಗಿದೆ.

ತುಮಕೂರು- ಶಿವಮೊಗ್ಗ ಹೇಗಿದೆ ಯೋಜನೆ?

ತುಮಕೂರು- ಶಿವಮೊಗ್ಗ ಹೇಗಿದೆ ಯೋಜನೆ?

ಪ್ರಸ್ತುತ ಬೆಂಗಳೂರು-ನೆಲಮಂಗಲ ತನಕ 6 ಪಥದ ರಸ್ತೆ ಇದೆ. ನೆಲಮಂಗಲದಿಂದ ತುಮಕೂರು ಬೈಪಾಸ್ ತನಕ 4 ಪಥದ ರಸ್ತೆ ಇದೆ. ತುಮಕೂರು ಬೈಪಾಸ್‌ನಿಂದ ಶಿವಮೊಗ್ಗ ತನಕ ಎರಡು ಪಥದ ರಸ್ತೆ ಮಾತ್ರವಿದೆ. ಹೆಚ್ಚು ವಾಹನ ಸಂಚಾರ ಇರುವುದರಿಂದ ಈ ರಸ್ತೆ ಅಪಾಯಕಾರಿಯೂ ಹೌದು.

ರಸ್ತೆ ಕಾಮಗಾರಿಗೆ ವೇಗ

ರಸ್ತೆ ಕಾಮಗಾರಿಗೆ ವೇಗ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ತುಮಕೂರು-ಶಿವಮೊಗ್ಗ 4 ಪಥದ ರಸ್ತೆ ಯೋಜನೆಯನ್ನು ಹೈಬ್ರಿಡ್ ಆನ್ಯುಟಿ ಮಾಡೆಲ್ ಅನ್ವಯ ಭಾರತ್ ಮಾಲಾ ಯೋಜನೆಯಡಿ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಒಟ್ಟು 4 ಭಾಗವಾಗಿ ಯೋಜನೆಯನ್ನು ವಿಂಗಡಣೆ ಮಾಡಿ ಕಾಮಗಾರಿ ನಡೆಸಲಾಗುತ್ತದೆ.

ನಾಲ್ಕು ಭಾಗವಾಗಿ ಕಾಮಗಾರಿ

ನಾಲ್ಕು ಭಾಗವಾಗಿ ಕಾಮಗಾರಿ

ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವಂತೆ ಮಲ್ಲಸಂದ್ರ-ಕರಾಡಿ (54 ಕಿ. ಮೀ.) ಯೋಜನೆಗೆ 1364 ಕೋಟಿ, ಕರಾಡಿ-ಬಾಣಾವರ (57 ಕಿ. ಮೀ.) ಯೋಜನೆಗೆ 1,505 ಕೋಟಿ, ಬಾಣಾವರ-ಬೆಟ್ಟದಹಳ್ಳಿ (48 ಕಿ. ಮೀ.) 1,444 ಕೋಟಿ ಮತ್ತು ಬೆಟ್ಟದಹಳ್ಳಿ-ಶಿವಮೊಗ್ಗ (57 ಕಿ. ಮೀ.) ಯೋಜನೆಗೆ 2082 ಕೋಟಿ ವೆಚ್ಚ ಮಾಡಲಾಗುತ್ತದೆ.

ಬಹಳ ವರ್ಷದ ಬೇಡಿಕೆ

ಬಹಳ ವರ್ಷದ ಬೇಡಿಕೆ

ಶಿವಮೊಗ್ಗ-ತುಮಕೂರು ನಡುವಿನ ರಸ್ತೆ ಅಗಲೀಕರಣ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ರಸ್ತೆ ಬೆಂಗಳೂರು-ಶಿವಮೊಗ್ಗಕ್ಕೆ ಮಾತ್ರ ಸಂಪರ್ಕ ಕಲ್ಪಿಸುವುದಿಲ್ಲ. ಶಿವಮೊಗ್ಗದ ಪ್ರವಾಸೋದ್ಯಮ ಅಭಿವೃದ್ಧಿ, ಹೊನ್ನಾವರ ಮತ್ತು ಗೋವಾ ತನಕ ಸಂಚಾರ ನಡೆಸಲು ಅನುಕೂಲವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+