ತುಮಕೂರು-ಚಿತ್ರದುರ್ಗ-ದಾವಣಗೆರೆ ಹಾಗೂ ತುಮಕೂರು-ರಾಯದುರ್ಗ ನೂತನ ರೈಲು ಮಾರ್ಗ ಉದ್ಘಾಟನೆ ಬಗ್ಗೆ ಬಿಗ್ ಅಪ್ಡೇಟ್
New Railway Line: ರಾಜ್ಯದಲ್ಲಿ ರೈಲ್ವೆ ಜಾಲ ವಿಸ್ತರಣೆ ಆಗುತ್ತಲೇ ಇದೆ. ಇನ್ನು ಇದೀಗ ಬಹುನಿರೀಕ್ಷಿತ ತುಮಕೂರು - ಚಿತ್ರದುರ್ಗ - ದಾವಣಗೆರೆ ಹಾಗೂ ತುಮಕೂರು - ರಾಯದುರ್ಗ ನೂತನ ರೈಲು ಮಾರ್ಗ ಯಾವಾಗ ಉದ್ಘಾಟನೆ ಆಗಲಿದೆ ಎನ್ನುವ ಪ್ರಶ್ನೆ ಬಹುತೇಕ ಮಂದಿ ತಲೆಯಲ್ಲಿದೆ. ಈ ಬಗ್ಗೆ ಸಚಿವ ವಿ.ಸೋಮಣ್ಣ ಅವರು ಮಹತ್ವದ ಅಪ್ಡೇಟ್‌ವೊಂದನ್ನು ನೀಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಇದೀಗ ರಾಜ್ಯದಲ್ಲಿ ರೈಲ್ವೆ ಮಾರ್ಗ ವಿಸ್ತರಣೆಯಲ್ಲಿ ಬಹುದೊಡ್ಡ ಕ್ರಾಂತಿಯೇ ಆಗುತ್ತಿದೆ. ಇನ್ನು ಬಹುನಿರೀಕ್ಷಿತ ನೂತನ ತುಮಕೂರು - ಚಿತ್ರದುರ್ಗ - ದಾವಣಗೆರೆ ನೂತನ ರೈಲು ಮಾರ್ಗದ ತಿಮ್ಮರಾಜನಹಳ್ಳಿ-ಊರುಕೆರೆ ಭಾಗದ ಕಾಮಗಾರಿಯನ್ನ ವಿ.ಸೋಮಣ್ಣ ಅವರು ಪರಿಶೀಲನೆ ನಡೆಸಿದರು. ಟ್ರಾಲಿಯಲ್ಲಿ ಕುಳಿತುಕೊಂಡು ಈ ಮಾರ್ಗದ ಹಳಿಗಳನ್ನು ತಪಾಸಣೆ ನಡೆಸಿದರು. ಬಳಿಕ ಈ ಮಾರ್ಗ ಯಾವಾಗ ಪೂರ್ಣಗೊಂಡು ಉದ್ಘಾಟನೆ ಆಗಲಿದೆ ಎನ್ನುವ ಮಹತ್ವದ ಅಪ್ಡೇಟ್ ನೀಡಿದ್ದಾರೆ.

ಈ ಬಗ್ಗೆ ಮಾತನಡಿದ ಅವರು ತುಮಕೂರು-ದಾವಣಗೆರೆ ಹಾಗೂ ತುಮಕೂರು - ರಾಯದುರ್ಗ ಯೋಜನೆಗಳು 2027ರ ವೇಳೆಗೆ ಲೋಕಾರ್ಪಣೆ ಆಗಲಿದೆ ಎಂದು ತಿಳಿಸಿದರು. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಈ ಮೂಲಕ ರೈಲ್ವೆ ಯೋಜನೆಗಳನ್ನು ಬೇಗನೇ ಪೂರ್ಣಗೊಳಿಸಲು ಕಾಮಗಾರಿಗೆ ವೇಗ ನೀಡಿರುವುದಾಗಿ ಹೇಳಿದರು.
ಈ ನೂತನ ರೈಲು ಮಾರ್ಗ ಯೋಜನೆಗಳು ಹಿಂದೆ ಹಳ್ಳ ಹಿಡಿದಿದ್ದವು. ಆದರೆ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭ ಮಾಡಲಾಗಿದೆ. ತಿಮ್ಮರಾಜನಹಳ್ಳಿ - ಊರುಕೆರೆ 13 ಕಿಲೋ ಮೀಟರ್ ಮಾರ್ಗದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಇದಕ್ಕೆ 120 ಕೋಟಿ ರೂಪಾಯಿ ವೆಚ್ಚ ಆಗಿದೆ. 193 ಹೆಕ್ಟೇರ್ ಭೂಸ್ವಾಧೀನವನ್ನ ಪೂರ್ಣಗೊಳಿಸಿ ಶೀಘ್ರದಲ್ಲೇ ಕಾಮಗಾರಿಯನ್ನು ಮುಕ್ತಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿ.ಸೋಮಣ್ಣ ಅವರು ರೈಲ್ವೆ ಖಾತೆ ಅಲಂಕರಿದಾಗಿನಿಂದ ರಾಜ್ಯದ ರೈಲ್ವೆ ವಿಭಾಗದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಅದರಲ್ಲೂ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಮಾರ್ಗದ ಕಾಮಗಾರಿ ಯಾವಾಗ ಪೂರ್ಣಗೊಂಡು ಸೇವೆಗೆ ಲಭ್ಯವಾಗಲಿದೆ ಎಂದು ಜನರು ಕಾದು ಕುಳಿತಿದ್ದರು.
ಈ ಹಿಂದೆ ಈ ಮಾರ್ಗದ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಆದರೆ, ವಿ.ಸೋಮಣ್ಣ ಇದರ ಬಗ್ಗೆ ಹೆಚ್ಚು ಗಮನಹರಿಸಿ ಕಾಮಗಾರಿಗೆ ವೇಗ ನೀಡಿದ್ದಾರೆ. ಅಲ್ಲದೆ, 2027ರ ವೇಳೆಗೆ ಲೋಕಾರ್ಪಣೆ ಆಗಲಿದೆ ಅಂತಲೂ ಭರವಸೆ ನೀಡಿದ್ದಾರೆ. ಒಂದು ವೇಳೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭ ಆದರೆ, ತುಂಬಾ ಜನರಿಗೆ ಭಾರೀ ಅನುಕೂಲ ಆದಂತಾಗಲಿದೆ.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದಿಂದ ತುಂಬಾ ಪ್ರಯೋಜನೆಗಳಿವೆ. ಪ್ರಯಾಣ ಅವಧಿ ಕಡಿಮೆ ಆಗಲಿದ್ದು, ಇದರಿಂದ ಪ್ರಯಾಣಿಕರಿಗೆ ಸಮಯ ಉಳಿದಂತಾಗಲಿದೆ. ಆದ್ದರಿಂದ ಈ ರೈಲು ಮಾರ್ಗ ಯಾವಾಗ ಪೂರ್ಣಗೊಂಡು ಪ್ರಯಾಣಕ್ಕೆ ಮುಕ್ತ ಆಗಲಿದೆಯೋ ಎಂದು ಪ್ರಯಾಣಿಕರು ಕಾತರದಲ್ಲಿದ್ದಾರೆ.
ಈ ರೈಲು ಮಾರ್ಗದ ಬಗ್ಗೆ ವಿ.ಸೋಮಣ್ಣ ಅವರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದರು. 18 ವರ್ಷಗಳಿಂದ ಬಾಕಿ ಉಳಿದಿದ್ದ ಬಹುನಿರೀಕ್ಷಿತ ತುಮಕೂರು-ದಾವಣಗೆರೆ ರೈಲು ಮಾರ್ಗ ಯೋಜನೆ ಕಾಮಗಾರಿಗೆ ಇದೀಗ ವೇಗ ಸಿಕ್ಕಿದೆ. ಭೂಮಿ ಸ್ವಾಧೀನ ಪ್ರಕ್ರಿಯೆ ಮುಗಿಯುತ್ತಾ ಬಂದಿದೆ ಎಂದು ಮಾಹಿತಿ ನೀಡಿದ್ದರು.












Click it and Unblock the Notifications