ಕೆಲಸ ಅರಸಿ ಬಂದವಳ ಮೇಲೆ ಸಂಬಂಧಿಯಿಂದ ಅತ್ಯಾಚಾರ

ಬೆಂಗಳೂರು, ಅ. 17 : ನಗರದ ಹೊರವಲಯದ ಅಂಚೆಪಾಳ್ಯದಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಯುವತಿಯ ಪಾಲಕರು ಗುರುವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದು ಆರೋಪಿ ಧರ್ಮಪ್ಪ(45) ಎಂಬಾತನನ್ನು ಬಂಧಿಸಲಾಗಿದೆ.

19 ವರ್ಷದ ಯುವತಿಯ ಮೇಲೆ ಆಕೆಯ ದೂರದ ಸಂಬಂಧಿಯಾಗಿರುವ ಧರ್ಮಪ್ಪ ನಾಲ್ಕು ದಿನಗಳ ಹಿಂದೆ ಅತ್ಯಾಚಾರ ಎಸಗಿದ್ದ. ವೈದ್ಯಕೀಯ ತಪಾಸಣೆಗೆ ನಂತರ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.[ನಿರ್ಮಾಪಕ ಗೋವರ್ಧನಮೂರ್ತಿ ಮೇಲೆ ಅತ್ಯಾಚಾರ ಪ್ರಕರಣ]

rape

ಅತ್ಯಾಚಾರಕ್ಕೆ ಒಳಗಾದ ಯುವತಿ ಮೂಲತಃ ತುಮಕೂರು ಜಿಲ್ಲೆ ತುರುವೆಕೇರೆ ತಾಲೂಕಿನವಳು. ಕೆಲಸ ಅರಸಿ ಆಕೆ ಅಂಚೆಪಾಳ್ಯದದ ದೊಡ್ಡಕ್ಕನ ಮನೆಗೆ ಕೆಲ ದಿನಗಳ ಹಿಂದೆ ಆಗಮಿಸಿದ್ದಳು. ಅಕ್ಟೋಬರ್ 14 ರಂದು ಯುವತಿ ಒಬ್ಬಳೇ ಮನೆಯಲ್ಲಿದ್ದಾಗ ಆರೋಪಿ ಧರ್ಮಪ್ಪ ಕೃತ್ಯ ಎಸಗಿದ್ದಾನೆ.[ರಾಜಸ್ಥಾನದಲ್ಲಿ ಅತ್ಯಾಚಾರ, ಮುಂದೇನಾಯ್ತೆಂದರೆ..]

ಯುವತಿಯ ಅಕ್ಕ ಮನೆಗೆ ಹಿಂದಿರುಗಿದಾಗ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ. ಆದರೆ ಯುವತಿಯ ಪಾಲಕರು ತುರುವೆಕೆರೆಯಿಂದ ಆಗಮಿಸಿ ಗುರುವಾರ ದೂರು ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+