ಶಿವಕುಮಾರ ಸ್ವಾಮೀಜಿ ಡಿಸ್ಚಾರ್ಜ್ :1 ವಾರ ಭಕ್ತರಿಗೆ ದರ್ಶನವಿಲ್ಲ
ತುಮಕೂರು, ಡಿಸೆಂಬರ್ 3: ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಗಳ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದು ಬಿಜಿಎಸ್ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆ ಮಾಡಲಾಗಿದೆ.
ಕಳೆದ ಎರಡು ದಿನಗಳ ಹಿಂದೆ 111 ವರ್ಷದ ಶಿವಕುಮಾರ ಸ್ವಾಮೀಜಿಯವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಹೊಸದಾಗಿ ಎರಡು ಸ್ಟೆಂಟ್‌ಗಳನ್ನು ಅಳವಡಿಸಲಾಗಿತ್ತು.
ಪಿತ್ತಕೋಶ ಮತ್ತು ಪಿತ್ತನಾಳದಲ್ಲಿ ಸೋಂಕು ಉಂಟಾದ ಹಿನ್ನೆಲೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಭಾನುವಾರ ಸ್ಟಂಟ್ ಅಳವಡಿಕೆ ವೇಳೆ ಶ್ರೀಗಳಿಗೆ ಅನಸ್ತೇಶಿಯ ನೀಡಲಾಗಿತ್ತು. ಸೋಮವಾರ ಅದರ ರಿಪೋರ್ಟ್ ಬಂದ ಬಳಿಕ ಯಾವುದೇ ತೊಂದರೆ ಇಲ್ಲ ಎಂದು ತಿಳಿದ ಮೇಲೆ ಡಿಸ್ಚಾರ್ಜ್ ಮಾಡಿದ್ದಾರೆ.

ಮುಂದಿನ ಒಂದು ವಾರಗಳ ಕಾಲ ಶ್ರೀಗಳು ಹಳೆ ಮಠದಲ್ಲೇ ವಿಶ್ರಾಂತಿ ಪಡೆಯಲಿದ್ದು, ಭಕ್ತರಿಗೆ ದರ್ಶನ ಸಿಗುವುದಿಲ್ಲ ಎಂದು ಶ್ರೀಗಳ ಉಸ್ತುವಾರಿ ವೈದ್ಯ ಡಾ.ಪರಮೇಶ್ ಮಾಹಿತಿ ನೀಡಿದ್ದಾರೆ.












Click it and Unblock the Notifications