ತುಮಕೂರಿನಲ್ಲಿ ಪೊಲೀಸ್ ದಾಳಿ; ಪಿಎಫ್‌ಐ ಜಿಲ್ಲಾಧ್ಯಕ್ಷ ರಿಹಾನ್ ಖಾನ್ ಬಂಧನ

ತುಮಕೂರು, ಸೆ.27 : ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಗಳ ಮೇಲೆ ಎನ್‌ಐಎ, ಇಡಿ ದಾಳಿಯಾದ ಐದು ದಿನಗಳ ಬಳಿಕ ಮಂಗಳವಾರ ರಾಜ್ಯದಲ್ಲಿ ಪೊಲೀಸ್ ಮತ್ತು ಎನ್‌ಐಎ ತಂಡಗಳು ಇನ್ನೊಂದು ಸುತ್ತಿನ ದಾಳಿ ನಡೆಸಿವೆ.

ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಮುಖಂಡರ ಮನೆ ಮೇಲಿನ ದಾಳಿ ಮುಂದುವರೆದಿದ್ದು, ಮಂಗಳವಾರ ತುಮಕೂರು ನಗರದಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ.

ಪಿಎಫ್ಐ ಸಂಘಟನೆಯ ತುಮಕೂರು ಜಿಲ್ಲಾಧ್ಯಕ್ಷ ರಿಹಾನ್ ಖಾನ್ ಮನೆ ಮೇಲೆ ತುಮಕೂರು ಪೊಲೀಸರು ಮಂಗಳವಾರ ದಾಳಿ ನಡೆಸಿದ್ದು, ಬಳಿಕ ಆತನನ್ನ ಬಂಧಿಸಲಾಗಿದೆ. ಬಂಧಿತ ರಿಹಾನ್ ಖಾನ್ ಅವರನ್ನು ತಹಸೀಲ್ದಾರ್ ಮುಂದೆ ಹಾಜರು ಪಡಿಸಿ ಸಿಆರ್‌ಪಿಸಿ 107, 151 ಅಡಿಯಲ್ಲಿ ಅಕ್ಟೋಬರ್ 2ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tumakuru PFI District President Rehan Khan Arrested

ತುಮಕೂರು ನಗರದ ಸದಾಶಿವನಗರದ ವಾಸಿ ರಿಹಾನ್ ಖಾನ್, ನಗರದಲ್ಲಿ ಹೋಮ್‌ ಅಪ್ಲೈಯನ್ಸ್‌ ವ್ಯವಹಾರ ನಡೆಸುತ್ತಿದ್ದರು, ಜೊತೆಗೆ ಪಿಎಫ್‌ಐ ಸಂಘಟನೆಯಲ್ಲಿ ಜಿಲ್ಲಾಧ್ಯಕ್ಷನಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪಿಎಫ್‌ಐ ಮುಖಂಡರ ಮನೆ ಮೇಲಿನ ಐಎನ್‌ಎ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ರಿಹಾನ್ ಖಾನ್ ಸಂಚು ಮಾಡುತ್ತಿದ್ದರು, ಶಾಂತಿ ಸುವವ್ಯಸ್ಥೆಗೆ ಭಂಗ ತರಲು ಯತ್ನಿಸಿದ್ದರು ಎನ್ನಲಾಗಿದೆ. ತುಮಕೂರು ತಿಲಕ್‌ ಪಾರ್ಕ್‌ ಸ್ಟೇಷನ್‌ ವ್ಯಾಪ್ತಿಯ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಇದರ ಜೊತೆಗೆ ಶಿವಮೊಗ್ಗ ವಿಚಾರವಾಗಿ ಈತನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ. ಸುಮಾರು 5 ಗಂಟೆಗಳ ಕಾಲ ಎಸ್ಪಿ ರಾಹುಲ್‌ ಕುಮಾರ್‌ ಶಹಪೂರ್ ವಾಡ್, ಆರೋಪಿ ರಿಹಾನ್ ಖಾನ್‌ರನ್ನು ವಿಚಾರಣೆ ನಡೆಸಿದ್ದಾರೆ.

ಮಂಗಳವಾರ ರಾಜ್ಯಾದ್ಯಂತ ಪಿಎಫ್‌ಐ ಮುಖಂಡರ ಮೇಲೆ ಬೆಳಗ್ಗೆಯೇ ಪೊಲೀಸ್ ದಾಳಿ ನಡೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+