National Highway: ತುಮಕೂರು-ಶಿವಮೊಗ್ಗ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ವಾಹನ ಸವಾರರಿಗೆ ನೆಮ್ಮದಿಯ ಸುದ್ದಿ
National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಲಿದೆ. ಇದೀಗ ತುಮಕೂರು- ಶಿವಮೊಗ್ಗ - ಹೊನ್ನಾವರ ಮಾರ್ಗದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 206 ವಾಹನ ಸವಾರರಿಗೆ ನೆಮ್ಮದಿ ಸುದ್ದಿಯೊಂದು ಲಭ್ಯವಾಗಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಜ್ಯದ ಹಲವೆಡೆ ಹೆದ್ದಾರಿಗಳು ದುರಸ್ತಿ ಹಂತ ತಲುಪಿದರೂ ಸಹ ಅಧಿಕಾರಿಗಳು ಕ್ಯಾರೆ ಅನ್ನದೇ ತಮ್ಮ ಪಾಡಿಗೆ ತಾವು ಇರುತ್ತಿದ್ದು, ಈ ಕುರಿತು ಆಕ್ರೋಶಗಳು ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡು ಕಾಮಗಾರಿ ಕೈಗೊಂಡಿರುವ ಉದಾಹರಣೆಗಳಿವೆ. ಈ ನಡುವೆಯೇ ಇದೀಗ ತುಮಕೂರು ನಗರದ ವಾಹನ ಸವಾರರಿಗೆ ಬಹುಕಾಲದ ನಿರೀಕ್ಷೆಯಾದ ರಾಷ್ಟ್ರೀಯ ಹೆದ್ದಾರಿ 206 ಅಗಲೀಕರಣ ಕಾಮಗಾರಿ ಕೊನೆಗೂ ಆರಂಭ ಆಗಿದೆ.

ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಅನುಮೋದನೆ: ನಗರ ವ್ಯಾಪ್ತಿಯಲ್ಲಿ ಬಟವಾಡಿ-ಮಲ್ಲಸಂದ್ರ ನಡುವಿನ ಸುಮಾರು 12 ಕಿಲೋ ಮೀಟರ್ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಸರ್ಕಾರ ಅಧಿಕೃತ ಅನುಮೋದನೆ ನೀಡಿದ್ದು, ಕಾಮಗಾರಿಗೆ ಚಾಲನೆ ದೊರೆತಿದೆ. ಹಲವು ವರ್ಷಗಳಿಂದಲೂ ರಸ್ತೆ ಇಕ್ಕಟ್ಟಿನಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಭಾರೀ ತೊಂದರೆಯನ್ನು ಅನುಭವಿಸುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ಅಗಲೀಕರಣ ಆಗದೇ ಉಳಿದಿದ್ದ ಕಾರಣ ಪ್ರತಿನಿತ್ಯ ಸಂಚಾರದಲ್ಲಿ ವಿಳಂಬ, ಟ್ರಾಫಿಕ್ ಸಮಸ್ಯೆ ಹೆಚ್ಚಾಗಿತ್ತು. ಇದೀಗ ರಸ್ತೆ ಅಗಲೀಕರಣದೊಂದಿಗೆ ಈ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆ ಮೂಡಿದೆ. ಇತ್ತೀಚೆಗಷ್ಟೇ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು.
ಸುಮಾರು 86 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ನಾಲ್ಕು ಲೇನ್ ವ್ಯವಸ್ಥೆ ನಿರ್ಮಾಣ ಆಗಲಿದೆ. ಜೊತೆಗೆ ಸಂಚಾರ ಹೆಚ್ಚು ಸುರಕ್ಷಿತ ಹಾಗೂ ವೇಗವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹೆದ್ದಾರಿ ಅಗಲೀಕರಣ ಯೋಜನೆಯಿಂದ ತುಮಕೂರು ನಗರದ ಒಟ್ಟಾರೆ ಅಭಿವೃದ್ಧಿಗೂ ಉತ್ತೇಜನ ಸಿಗಲಿದೆ. ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು, ಸಾರಿಗೆ ವ್ಯವಸ್ಥೆ ಹಾಗೂ ಸಾರ್ವಜನಿಕ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು, ಸ್ಥಳೀಯರು ಹಾಗೂ ವಾಹನ ಸವಾರರು ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 206 ಭಾರತದಲ್ಲಿನ ಕರ್ನಾಟಕ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾಗಿದೆ. ಇದು ತುಮಕೂರಿನಿಂದ ಆರಂಭವಾಗಿ ಶಿವಮೊಗ್ಗ ಮತ್ತು ಹೊನ್ನಾವರದವರೆಗೂ ವ್ಯಾಪಿಸಿದೆ ಹಾಗೂ ಒಟ್ಟಾರೆ ಸುಮಾರು 363 ಕಿಲೋ ಮೀಟರ್ ಉದ್ದವಿದೆ. ಮೊದಲು ಇದು ರಾಜ್ಯ ಹೆದ್ದಾರಿ 68 ಆಗಿತ್ತು. ನಂತರ ರಾಷ್ಟ್ರೀಯ ಹೆದ್ದಾರಿಗೆ ಪರಿವರ್ತಿಸಲ್ಪಟ್ಟಿತು ಮತ್ತು ಬಟವಾಡಿ-ಮಲ್ಲಸಂದ್ರ ಸೇರಿದಂತೆ ಅನೇಕರಿಗೆ ಸಂಚಾರಕ್ಕೆ ಮುಖ್ಯ ಮಾರ್ಗವಾಗಿ ಸೇವೆ ನೀಡುತ್ತಿದೆ.
ಯಾವ ಜಿಲ್ಲೆಗಳ ಮೇಲೆ ಹಾದುಹೋಗಲಿದೆ?: ಈ ರಾಷ್ಟ್ರೀಯ ಹೆದ್ದಾರಿಯೂ ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಮೇಲೆ ಹಾದುಹೋಗಿದೆ. ಈ ಹೆದ್ದಾರಿ ತುಮಕೂರಿನಿಂದ ಆರಂಭವಾಗಿ, ತಿಪಟೂರು, ಅರಸೀಕೆರೆ, ಕಡೂರು, ಶಿವಮೊಗ್ಗ, ಸಾಗರ ಮಾರ್ಗವಾಗಿ ಸಾಗುತ್ತಾ ಹೊನ್ನಾವರದಲ್ಲಿ ಅಂತ್ಯಗೊಳ್ಳುತ್ತದೆ.
ತುಮಕೂರು ಭಾಗದಲ್ಲಿ ಬಟವಾಡಿ-ಮಲ್ಲಸಂದ್ರ ನಡುವಿನ ಸುಮಾರು 12 ಕಿಲೋ ಮೀಟರ್ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಇಷ್ಟು ಈ ಭಾಗದಲ್ಲಿ ತುಂಬಾ ಇಕ್ಕಟ್ಟಾಗಿ ವಾಹನ ಸವಾರರು ಪರದಾಡುತ್ತಲಿದ್ದು, ಈ ಬಗ್ಗೆ ಎಚ್ಚೆತ್ತ ಸರ್ಕಾರ ಇದನ್ನು ನಾಲ್ಕು ಲೇನ್‌ಗಳನ್ನಾಗಿ ಮಾಡಲು ನಿರ್ಧರಿಸಿದೆ. ಒಂದು ವೇಳೆ ಈ ಕಾಮಗಾರಿ ಪೂರ್ಣಗೊಂಡರೆ ಈ ಭಾಗದಲ್ಲಿ ಸಂಚಾರ ಮಾಡು ವಾಹನ ಸವಾರರಿಗೆ ನೆಮ್ಮದಿ ಸಿಕ್ಕಂತಾಗಲಿದೆ.












Click it and Unblock the Notifications