ತುಮಕೂರು : ಗೊರವನಹಳ್ಳಿ ದೇವಾಲಯದ ಆಸ್ತಿ 16 ಕೋಟಿಗೂ ಹೆಚ್ಚು

ತುಮಕೂರು, ಮಾ.9 : ತುಮಕೂರು ಜಿಲ್ಲೆಯ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯವನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದು ಆಸ್ತಿಯ ದಾಖಲೀಕರಣವನ್ನು ನಡೆಸುತ್ತಿದೆ. ದೇವಾಲಯದ ಆಸ್ತಿ ಸುಮಾರು 16 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯಕ್ಕೆ ಮಧುಗಿರಿ ಉಪವಿಭಾಗಾಧಿಕಾರಿ ಅನಿತಾ ಲಕ್ಷ್ಮೀ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ದೇವಾಲಯದ ಟ್ರಸ್ಟ್‌ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಎಲ್ಲಾ ಸ್ಥಿರಾಸ್ತಿ ಹಾಗೂ ಚರಾಸ್ಥಿಗಳನ್ನು ವಶಕ್ಕೆ ಪಡೆದು ದಾಖಲೀಕರಣ ಮಾಡಲಾಗುತ್ತಿದೆ. [ಗೊರವನಹಳ್ಳಿ ದೇವಾಲಯ ಜಿಲ್ಲಾಡಳಿತದ ವಶಕ್ಕೆ]

Goravanahalli Mahalakshmi

ಒಟ್ಟು ಎಷ್ಟು ಆಸ್ತಿ : ಇಲ್ಲಿಯವರೆಗೆ ದೊರೆತ ಮಾಹಿತಿಯಂತೆ ಸುಮಾರು 16 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ದಾಖಲೀಕರಣ ಪ್ರಕ್ರಿಯೆ ಇನ್ನೂ ಮುಂದುರೆದಿದ್ದು, ದೇವಾಲಯದ ಆಸ್ತಿಯ ಮೌಲ್ಯ ಎಷ್ಟು? ಎಂಬ ಕುರಿತು ಅಧಿಕೃತವಾದ ಮಾಹಿತಿ ಲಭ್ಯವಾಗಿಲ್ಲ. [ಗೊರವನಹಳ್ಳಿ ದೇವಸ್ಥಾನ ಮುಜರಾಯಿ ಇಲಾಖೆಗೆ?]

ದೇವಾಲಯದ ಕಟ್ಟಡ, ಕಲ್ಯಾಣ ಮಂಟಪ, ಶಾಲೆ ಕಾಲೇಜು ಸೇರಿದಂತೆ ಸುಮಾರು 10 ಕೋಟಿ ರೂ. ಮೌಲ್ಯದ 12 ಕಟ್ಟಡಗಳಿವೆ. 1.57ಕೋಟಿ ಮೌಲ್ಯದ 7.5 ಕೆಜಿ ಚಿನ್ನ ಮತ್ತು 29.5 ಲಕ್ಷ ಮೌಲ್ಯದ 94 ಕೆಜಿ ಬೆಳ್ಳಿ ಇದುವರೆಗೂ ಸಿಕ್ಕಿದೆ.

2 ಕೋಟಿ ಹಣ : ದೇವಾಲಯದ ಆಡಳಿತ ಮಂಡಳಿ ಕರ್ನಾಟಕ, ಸ್ಟೇಟ್‌ ಬ್ಯಾಂಕ್ ಆಫ್ ಮೈಸೂರು, ಕಲ್ಪತರು ಗ್ರಾಮೀಣ ಬ್ಯಾಂಕ್, ಸೇರಿದಂತೆ 8 ಬ್ಯಾಂಕುಗಳಲ್ಲಿ 2 ಕೋಟಿ ರೂ. ಠೇವಣಿ ಇಟ್ಟಿದೆ. ಹುಂಡಿಯಲ್ಲಿ ಇದುವರೆಗೂ 28 ಲಕ್ಷ ರೂ. ದೊರಕಿದೆ.

ನಕಲಿ ಚಿನ್ನ? : ದೇವಾಲಯದ ಟ್ರಸ್ಟ್ ಅವ್ಯವಹಾರ ಮಾಡಿದೆ ಎಂದು ಆರೋಪಿಸುತ್ತಿರುವ ಸ್ಥಳೀಯರು, ಭಕ್ತರು ದೇಣಿಗೆ ರೂಪದಲ್ಲಿ ನೀಡಿರುವ ಅಸಲಿ ಚಿನ್ನ ತೆಗೆದುಕೊಂಡು ಅದರ ಬದಲು ನಕಲಿ ಚಿನ್ನ ಇಟ್ಟಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+