ತುಮಕೂರಿನಲ್ಲಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ತುಮಕೂರು, ಆ.7 : ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ತುಮಕೂರಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿಯನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಸಿಪಾಯಿ (21) ಎಂದು ಗುರುತಿಸಲಾಗಿದೆ. ಹೆಗ್ಗೆರೆ ಗ್ರಾಮದ ನಿವಾಸಿಯಾದ ಈತ ಪಕ್ಕದ ಮನೆಯಲ್ಲಿದ್ದ ಬಾಲಕಿ ಮೇಲೆ ಗುರುವಾರ ಬೆಳಗ್ಗೆ ಅತ್ಯಾಚಾರ ನಡೆಸಿದ್ದಾನೆ.

rape

ಪೋಷಕರು ನೀಡಿದ ದೂರಿನ ಅನ್ವಯ ತುಮಕೂರು ಗ್ರಾಮಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಪಾಯಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮಂಡ್ಯ ವರದಿ : ಅತ್ಯಾಚಾರದಿಂದ ಮನನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಅಳ್ಳೂರು ವದ್ದನಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಬಾಲಕಿಯನ್ನು ಅಶ್ವಿನಿ (15) ಎಂದು ಗುರುತಿಸಲಾಗಿದೆ.

ಆ.5ರಂದು ಸಂಜೆ ಹಾಲು ತರಲು ಹೋದಾಗ ಅಶ್ವಿನಿ ಮೇಲೆ ಪವನ್ (23) ಎಂಬ ಯುವಕ ಅತ್ಯಾಚಾರ ನಡೆಸಿದ್ದ. ಆರೋಪಿ ಪವನ್ ಮಾಲಂಗಿ ಗ್ರಾಮ ಪಂಚಾಯಿತಿ ಸದಸ್ಯೆ ಮೀನಾಕ್ಷಿ ಅವರ ಪುತ್ರ. ಮನೆಗೆ ಬಂದ ಅಶ್ವಿನಿ ಅತ್ಯಾಚಾರ ನಡೆದ ಘಟನೆ ಬಗ್ಗೆ ತಾಯಿಗೆ ಮಾಹಿತಿ ನೀಡಿದ್ದಳು.

ಆಸ್ಪತ್ರೆಗೆ ಹೋಗೋಣ ಎಂದರು ಅಶ್ವಿನಿ ನಿರಾಕರಿಸಿದ್ದಳು. ಆ.6ರಂದು ಬೆಳಗ್ಗೆ 7.45ರ ಸುಮಾರಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಪವನ್ ವಿರುದ್ಧ ದೂರು ಪೋಷಕರು ದೂರು ನೀಡಿದ್ದಾರೆ. ಆರೋಪಿ ಪವನ್‌ ನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+