ತುಮಕೂರು: ಲಾರಿಗೆ ಕ್ಯಾಂಟರ್ ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು
ತುಮಕೂರು, ಜು.17: ಚಲಿಸುತ್ತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್‌ನಲ್ಲಿದ್ದ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರಿನ ಶಿರಾದ ದೊಡ್ಡ ಆಲದಮರ ಬಳಿ ಮಂಗಳವಾರ ನಡೆದಿದೆ.
ಚಾಲಕ ಲೋಕೇಶ್(34), ಹನುಮಂತರಾಜು(40) ಮತ್ತು ರಾಧಾ(35) ಮೃತ ದಂಪತಿ. ಚಲಿಸುತ್ತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಕ್ಯಾಂಟರ್ ನಲ್ಲಿ ಸಿಕ್ಕಿ ಶವಗಳು ನುಜ್ಜುಗುಜ್ಜಾಗಿದೆ. ಶವಗಳನ್ನು ವಾಹನದಿಂದ ಹೊರ ತೆಗೆಯಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ದಂಪತಿ ರಾಣಿಬೆನ್ನೂರಿನ ಕರೂರು ಗ್ರಾಮದವರು ಎಂದು ತಿಳಿದುಬಂದಿದೆ, ಕಳ್ಳಂಬೆಳ್ಳಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾಂಟರ್ ಅತಿವೇಗವಾಗಿ ಚಲಿಸುತ್ತಿತ್ತು, ಲಾರಿ ಬಳಿ ಬಂದಾಗ ಚಾಲಕನಿಗೆ ನಿಯಂತ್ರಣ ಸಿಗದೆ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.











Click it and Unblock the Notifications