Major Railway Projects: ತುಮಕೂರು ಜಿಲ್ಲೆಯ 5 ಪ್ರಮುಖ ರೈಲ್ವೆ ಯೋಜನೆಗಳ ಬಗ್ಗೆ ಮಹತ್ವದ ಮಾಹಿತಿ

Major Railway Projects: ರೈಲ್ವೆ ಇಲಾಖೆಯು ಆಗಾಗ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿರುತ್ತದೆ. ಅದರಲ್ಲೂ ವಿ.ಸೋಮಣ್ಣ ಅವರು ರಾಜ್ಯ ರೈಲ್ವೆ ಸಚಿವರಾದ ಬಳಿಕ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಇದೀಗ ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ 5 ಪ್ರಮುಖ ರೈಲ್ವೆ ಯೋಜನೆಗಳ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ತುಮಕೂರು ಜಿಲ್ಲೆಯಲ್ಲಿ ರೈಲ್ವೆ ಅಭಿವೃದ್ಧಿ ಕ್ರಾಂತ್ರಿ ಆಗುತ್ತಿದೆ. ಇದು ಭವಿಷ್ಯದ ಉದ್ಯಮ ಮತ್ತು ಉದ್ಯೋಗ ನಗರಿಗೆ ಪೂರಕ ಆಗಿದೆ. ವಿಮಾನ ನಿಲ್ದಾಣದ ಮಾದರಿಯಲ್ಲಿ ತುಮಕೂರು ರೈಲ್ವೆ ನಿಲ್ದಾಣದ ಕನಸನ್ನು ಸಚಿವ ವಿ.ಸೋಮಣ್ಣ ತಮ್ಮ ಅಧಿಕಾರದ ಅವಧಿಯಲ್ಲೇ ಅದನ್ನು ನನಸು ಮಾಡುವ ಭರವಸೆ ನೀಡಿದ್ದಾರೆ.

Important Details About Tumakuru District s 5 Major Railway Projects

ರೈಲ್ವೆ ನಿಲ್ದಾಣಗಳಲ್ಲಿ ಪಾರ್ಕಿಂಗ್‌, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಹಲವು ಬಾರು ಟೀಕೆಗಳು ವ್ಯಕ್ತವಾಗುತ್ತಿದ್ದವು. ಈ ಬಗ್ಗೆ ವಿ.ಸೋಮಣ್ಣ ಪ್ರತಿಕ್ರಿಯಿಸಿ, ಭರವಸೆ ನೀಡಿರುವ ಯೋಜನೆಗಳು ಮಹತ್ವದ್ದಾಗಿವೆ. ತುಮಕೂರು, ತಿಪಟೂರು, ಗುಬ್ಬಿ ರೈಲು ನಿಲ್ದಾಣಗಳು ಮೇಲ್ದರ್ಜೆಗೇರಲಿವೆ ಎಂದು ತಿಳಿಸಿದ್ದಾರೆ.

ಈಗಾಗಲೇ ತಿಪಟೂರು ಮತ್ತು ಗುಬ್ಬಿ ನಿಲ್ದಾಣಗಳ ಕಾಮಗಾರಿ ಆರಂಭ ಆಗಿದೆ. 2025ರ ಹೊಸ ವರ್ಷದ ಆರಂಭದಲ್ಲೇ ತುಮಕೂರು ರೈಲು ನಿಲ್ದಾಣದ ಅಭಿವೃದ್ಧಿಗೆ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ತುಮಕೂರು ರೈಲು ನಿಲ್ದಾಣ ವಿಮಾನ ನಿಲ್ದಾಣದ ಮಾದರಿಯಲ್ಲಿ ಅಭಿವೃದ್ಧಿ ಆಗಲಿದೆ ಎಂದು ವಿ.ಸೋಮಣ್ಣ ಎಂದು ಭರವಸೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ಹೊಸ ಮಾರ್ಗದ ಕಾಮಗಾರಿಗಳು ಚುರುಕುಗೊಂಡಿದ್ದು, 2027ಕ್ಕೆ ಎರಡೂ ಯೋಜನೆಗಳು ಲೋಕಾರ್ಪಣೆ ಆಗುವ ಭರವಸೆ ಸಿಕ್ಕಿದೆ. ಈಗಾಗಲೇ ಕೆಲವು ರೈಲುಗಳಿಗೆ ಹೊಸದಾಗಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ನಿಲುಗಡೆ ಅವಕಾಶ ಕಲ್ಪಿಸಿಕೊಟ್ಟಿರುವ ವಿ.ಸೋಮಣ್ಣ ಜನವರಿ 4ರಿಂದ ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16239/40) ನಿಲ್ಲಿಸಲು ಆದೇಶ ಹೊರಡಿಸಿರುವುದಾಗಿ ಭರವಸೆ ಕೊಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಪ್ರಮುಖ ರೈಲ್ವೆ ಯೋಜನೆಗಳು

1. 206 ಕಿಲೋ ಮೀಟರ್‌ ಉದ್ದದ ತುಮಕೂರು-ರಾಯದುರ್ಗ ಹೊಸ ಮಾರ್ಗದ ಸಂಬಂಧಿಸಿದಂತೆ ಶೇಕಡ 90ರಷ್ಟು ಭೂಸ್ವಾದೀನ ಮುಕ್ತಾಯವಾಗಿದೆ. ದೊಡ್ಡಹಳ್ಳಿ-ರಾಯದುರ್ಗ (83ಕಿ.ಮೀ) ಪೂರ್ಣಗೊಂಡಿದ್ದು, 123 ಕಿಲೋ ಮೀಟರ್‌ ಕಾಮಗಾರಿ ಬಾಕಿ ಇದೆ. 2027ರ ವೇಳೆಗೆ ಪೂರ್ಣ ಆಗಲಿದೆ.

2. 191 ಕಿಲೋ ಮೀಟರ್ ಉದ್ದದ ತುಮಕೂರು-ದಾವಣಗೆರೆ ಹೊಸ ಮಾರ್ಗಕ್ಕೆ ಸಂಬಂಧಿಸದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 190 ಹೆಕ್ಟೇರ್ ಭೂಮಿ ಹಸ್ತಾಂತರ ಬಾಕಿ ಇದ್ದು, ಅದಕ್ಕೆ ಕ್ರಮಹಿಸಿದೆ. ಈ ಯೋಜನೆಯನ್ನು 2027ಕ್ಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

3. ವಿಮಾನ ನಿಲ್ದಾಣ ಮಾದರಿಯಲ್ಲಿ ತುಮಕೂರು ವಿಮಾನ ನಿಲ್ದಾಣ ಅಭಿವೃದ್ಧಿಪಡಿಸ ಮಾಡಲಾಗುತ್ತಿದ್ದು, ಜನವರಿ 2025ರಲ್ಲಿ ಟೆಂಡರ್‌ ಕರೆಯಲಾಗುತ್ತದೆ.

4. ಅಮೃತ್‌ ಭಾರತ್‌ ಯೋಜನೆಯಡಿ ಗುಬ್ಬಿ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿ 2027ಕ್ಕೆ ಪೂರ್ಣಗೊಳ್ಳಲಿದೆ.

5. ಅಮೃತ್‌ ಭಾರತ್‌ ಯೋಜನೆಯಡಿ ತಿಪಟೂರು ರೈಲು ನಿಲ್ದಾಣ ಕಾಮಗಾರಿಗೆ ವೇಗ ನೀಡಲಾಗಿದ್ದು, 2025ರಲ್ಲೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಪ್ರಮುಖ ರೈಲ್ವೆ ಯೋಜನೆಗಳು, ವಚ್ಚದ ವಿವರ

1. ತುಮಕೂರು-ರಾಯದುರ್ಗ ಹೊಸ ಮಾರ್ಗ: 2500 ಕೋಟಿ ರೂಪಾಯಿ
2. ತುಮಕೂರು -ದಾವಣೆಗೆರೆ ಹೊಸ ಮಾರ್ಗ: 1,800 ಕೋಟಿ ರೂಪಾಯಿ
3. ತುಮಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿ: 88.4 ಕೋಟಿ ರೂಪಾಯಿ
4. ಅಮೃತ್‌ ಭಾರತ್‌ ಯೋಜನೆಯಡಿ ಗುಬ್ಬಿ ರೈಲ್ವೆ ನಿಲ್ದಾಣ: 16.6 ಕೋಟಿ ರೂಪಾಯಿ
5. ಅಮೃತ್‌ ಭಾರತ್‌ ಯೋಜನೆಯಡಿ ತಿಪಟೂರು ರೈಲ್ವೆ ನಿಲ್ದಾಣ ಕಾಮಗಾರಿ: 23.4 ಕೋಟಿ ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+