ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಒಂದೇ ದಿನ ಜೆಡಿಎಸ್‌ನ 100ಕ್ಕೂ ಹೆಚ್ಚು ಕಾರ್ಯಕರ್ತರ ರಾಜೀನಾಮೆ

|
Google Oneindia Kannada News

ತುಮಕೂರು, ಸೆಪ್ಟೆಂಬರ್ 25: ಗುಬ್ಬಿಯ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಮತ್ತು ಪಕ್ಷದ ವರಿಷ್ಠರ ನಡುವಿನ ಜಟಾಪಟಿ ಮುಂದುವರೆದಿದೆ. ಒಂದೇ ದಿನ ಪಕ್ಷದ 100ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ.

ಪಕ್ಷದಿಂದ ಎಸ್. ಆರ್. ಶ್ರೀನಿವಾಸ್‌ಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿದರು. ರಾಜೀನಾಮೆ ನೀಡಿದವರಲ್ಲಿ ಬಿದರೆ ಗ್ರಾಮ ಕಾರ್ಯಕರ್ತರೇ ಅಧಿಕವಾಗಿದ್ದಾರೆ.

ಗುಬ್ಬಿ ಶ್ರೀನಿವಾಸ್‌, ಶ್ರೀನಿವಾಸ್‌ ಗೌಡ ಅರ್ನಹಗೊಳಿಸಲು ಜೆಡಿಎಸ್‌ ಪತ್ರಗುಬ್ಬಿ ಶ್ರೀನಿವಾಸ್‌, ಶ್ರೀನಿವಾಸ್‌ ಗೌಡ ಅರ್ನಹಗೊಳಿಸಲು ಜೆಡಿಎಸ್‌ ಪತ್ರ

ರಾಜೀನಾಮೆ ನೀಡಿರುವ ಕಾರ್ಯಕರ್ತರು 'ವಾಸಣ್ಣ ಅಭಿಮಾನಿ ಬಳಗ' ಸೇರುತ್ತಿದ್ದಾರೆ. ಗುಬ್ಬಿಯಲ್ಲಿ 50 ಸಾವಿರಕ್ಕೂ ಅಧಿಕ ಪಕ್ಷದ ಕಾರ್ಯಕರ್ತರಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ ಎಂದು ಶಂಕಿಸಲಾಗಿದೆ.

ಮೋಸಕ್ಕೆ ಬೇಸತ್ತು ಜೆಡಿಎಸ್ ಗೂಡು ಬಿಡುವರೇ ಗುಬ್ಬಿ ವಾಸಣ್ಣ ! ಮೋಸಕ್ಕೆ ಬೇಸತ್ತು ಜೆಡಿಎಸ್ ಗೂಡು ಬಿಡುವರೇ ಗುಬ್ಬಿ ವಾಸಣ್ಣ !

ಎಸ್. ಆರ್. ಶ್ರೀನಿವಾಸ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಸಣ್ಣದಾಗಿ ಆರಂಭವಾದ ಅಸಮಾಧಾನ ಬಳಿಕ ದೊಡ್ಡದಾಯಿತು. ಗುಬ್ಬಿ ಕ್ಷೇತ್ರದಲ್ಲಿ ಎಸ್. ಆರ್. ಶ್ರೀನಿವಾಸ್ ಬದಲು ಬೇರೆ ಅಭ್ಯರ್ಥಿ ಕಣಕ್ಕಿಳಿಸುವ ಮಟ್ಟಿಗೆ ಅಸಮಾಧಾನ ಬೆಳೆದುನಿಂತಿದೆ.

Gubbi More Than 1000 JDS Workers Submitted Resignation

ಕೆಲವು ದಿನಗಳ ಹಿಂದೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಎಸ್. ಆರ್. ಶ್ರೀನಿವಾಸ್ ಅಡ್ಡ ಮತದಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆಗ ಎಸ್. ಆರ್.‌ ಶ್ರೀನಿವಾಸ್ ತಿಥಿ ಕಾರ್ಡ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

'ಏ ಗುಬ್ಬಿ ಶ್ರೀನಿವಾಸ್ ಬೆಂಗಳೂರಿಗೆ ಬಂದಿದ್ದೇನೆಂದು ಹೇಳು, ಸಾಕು''ಏ ಗುಬ್ಬಿ ಶ್ರೀನಿವಾಸ್ ಬೆಂಗಳೂರಿಗೆ ಬಂದಿದ್ದೇನೆಂದು ಹೇಳು, ಸಾಕು'

ಕಾಂಗ್ರೆಸ್‌ಗೆ ಸೇರ್ಪಡೆ; ಎಸ್. ಆರ್.‌ ಶ್ರೀನಿವಾಸ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಲವು ದಿನಗಳಿಂದ ಹಬ್ಬಿದೆ. ಕೆಲವು ದಿನಗಳ ಹಿಂದೆ ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬೃಹತ್ ಸಮಾವೇಶ ನಡೆದಿತ್ತು. ಈ ಸಮಾವೇಶಕ್ಕೆ ಎಸ್. ಆರ್. ಶ್ರೀನಿವಾಸ್ ಗೈರಾಗಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆಗೆ ಎಸ್. ಆರ್. ಶ್ರೀನಿವಾಸ್ ಪಕ್ಷ ಸೇರುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆದರೆ ಸ್ಥಳೀಯ ನಾಯಕರು ಒಪ್ಪಿಗೆ ನೀಡದ ಕಾರಣ ಇನ್ನೂ ಅವರು ತಮ್ಮ ತೀರ್ಮಾನ ಪ್ರಕಟಿಸಿಲ್ಲ.

English summary
More than 100 JD(S) workers of Tumakuru district Gubbi submitted resignation on one day. Huge set back for party where party has MLA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X