Fake Ticket: ಚಿನ್ನಿ ಅಕೌಂಟ್‌ಗೆ ಸರ್ಕಾರದ ಹಣ ಜಮಾ- ಕಳಸ ಅರಣ್ಯಾಧಿಕಾರಿ ಅಮಾನತು!

ಚಿಕ್ಕಮಗಳೂರು ಆಗಸ್ಟ್ 27: ಅರಣ್ಯಾಧಿಕಾರಿಯೊಬ್ಬ ಆನ್‌ಲೈನ್ ಟಿಕೆಟ್ ಫೋರ್ಜರಿ ಮಾಡಿ ಲವರ್ ಖಾತೆಗೆ ಸರ್ಕಾರದ ಹಣವನ್ನು ಜಮಾ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ. ಸರ್ಕಾರದ ಹಣವನ್ನು ಪ್ರೇಯಸಿ ಖಾತೆಗೆ ಜಮಾ ಮಾಡಿದ ಆರೋಪದಲ್ಲಿ ಕಳಸ ಅರಣ್ಯ ಇಲಾಖೆಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಫೋನ್ ಪೇ ಮೂಲಕ ಪ್ರಿಯತಮೆ ಖಾತೆಗೆ ಸರ್ಕಾರದ ಹಣವನ್ನು ವರ್ಗಾಯಿಸಲಾಗಿದೆ ಎಂದು ಕಳಸ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಚಂದನ್ ಗೌಡ ಅವರನ್ನು ಅಮಾನತುಗೊಳಿಸಲಾಗಿದೆ. ಮೋನಿಕಾ ಎಂಬ ಯುವತಿಗೆ ಚಂದನ್ ಗೌಡ ಸರ್ಕಾರದ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Government money deposit to lover account Kalasa forest department officer suspended in chikkamagaluru

ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಬಳಿ ಟಿಕೆಟ್ ಗೋಲ್‌ಮಾಲ್ ಮಾಡಿ ಸರ್ಕಾರದ 9 ಸಾವಿರ ಹಣ ಲವರ್ ಖಾತೆಗೆ ಜಮಾ ಮಾಡಲಾಗಿದೆ. ಈತ ಆನ್‌ಲೈನ್ ಟಿಕೆಟ್ ಫೋರ್ಜರಿ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ 9000 ಹಣವನ್ನ ಮೋಸ ಮಾಡಿರುವುದು ಸಾಬೀತಾಗಿದೆ. ಇನ್ನೂ ಇಲಾಖೆಯ ಲಕ್ಷಗಟ್ಟಲೇ ಹಣ ಮೋನಿಕಾ ಎಂಬ ಯುವತಿ ಖಾತೆಗೆ ಜಮಾವಾಗಿರೋ ಅನುಮಾನ ವ್ಯಕ್ತವಾಗಿದೆ.

ಬಂಡಾಜೆ ಫಾಲ್ಸ್ ಬಳಿ 200ಕ್ಕೂ ಅಧಿಕ ಜನರಿಗೆ ಟಿಕೆಟ್ ಇಲ್ಲದೆ ಪಾಲ್ಸ್‌ಗೆ ಅವಕಾಶ ನೀಡಿ ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಚೆಕ್ ಮಾಡಲು ಹೋಗಿದ್ದ ಪೊಲೀಸರು ಪ್ರವಾಸಿಗರ ಬಳಿ ಇದ್ದ ನಕಲಿ ಟಿಕೆಟ್ ಸೀಜ್ ಮಾಡಿದ್ದಾರೆ. ಜೊತೆಗೆ ಜೂನ್ ತಿಂಗಳ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಗೂ, ಪ್ರವಾಸಿಗರ ನೋಂದಣಿ ಪುಸ್ತಕಕ್ಕೂ ಸಂಬಂಧವೇ ಇಲ್ಲ. ಒಂದಕ್ಕೊಂದು ಹೊಂದಾಣಿಕೆ ಆಗದ ಬೆನ್ನಲ್ಲೆ ಅನುಮಾನ ಬಂದು ಪೊಲೀಸರು ಪ್ರವಾಸಿಗರ ತಾಣಕ್ಕೆ ಪರಿಶೀಲನೆಗೆಂದು ಭೇಟಿ ನೀಡಿದ್ದರು.

ಆ ವೇಳೆ ಪ್ರವಾಸಿಗರ ಬಳಿ ಇದ್ದ ಟಿಕೆಟ್ ಹಾಗೂ ಆನ್‌ಲೈನ್ ಟಿಕೆಟ್‌ಗೂ ಹೊಂದಾಣಿಕೆಯಾಗಿಲ್ಲ. ಜೊತೆಗೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಆಗದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂಡಾಜೆ ಫಾಲ್ಸ್ ಗೆ ಭೇಟಿ ನೀಡಿರುವುದು ಕಂಡು ಬಂದಿದೆ. ಪ್ರವಾಸಿಗರ ನೋಂದಣಿ ಪುಸ್ತಕದಲ್ಲಿ ಮಾತ್ರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಗೊತ್ತಾಗಿದೆ.

ಚಂದನ್ ಗೌಡ ನಕಲಿ ಆನ್‌ಲೈನ್ ಟಿಕೆಟ್ ಮುದ್ರಿಸಿ ಪ್ರವಾಸಿಗರಿಗೆ ಪ್ರವಾಸಿ ತಾಣಕ್ಕೆ ಆಗಮಿಸಲು ಅವಕಾಶ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಇದರಿಂದ ಬಂದ ಹಣವನ್ನು ಚಂದನ್ ಗೌಡ ತನ್ನ ಪ್ರೇಯಸಿ ಖಾತೆಗೆ ಜಮಾ ಮಾಡಿಸಿದ್ದಾನೆಂದು ತಿಳಿದು ಬಂದಿದೆ. ಹೀಗೆ ಸರ್ಕಾರಕ್ಕೆ ಚಂದನ್ ಗೌಡ ಹೆಚ್ಚಿನ ಹಣವನ್ನು ಮೋಸ ಮಾಡಿರೋ ಬಗ್ಗೆ ಇಲಾಖೆಗೆ ಅನುಮಾನ ಬಂದಿದೆ.

ಪ್ರವಾಸಿಗರ ಬಳಿ ವಿಚಾರಿಸಿದಾಗ ನಕಲಿ ಟಿಕೆಟ್ ಮಾರಾಟ ದಂಧೆ ವಿಚಾರ ಬಯಲಾಗಿದೆ. ಇದರಿಂದ ಕಳಸ ಡಿ.ಆರ್.ಎಫ್.ಓ. ಚಂದನ್ ಗೌಡ ಅಮಾನತು ಮಾಡಲಾಗಿದೆ. ಕೊಪ್ಪ ಡಿ.ಎಫ್.ಓ. ಉಪೇಂದ್ರ ಪ್ರತಾಪ್ ಸಿಂಗ್ ಅವರಿಂದ ಅಮಾನತು ಆದೇಶ ಕಳುಹಿಸಲಾಗಿದ್ದು ಎಲ್ಲಾ ಆಯಾಮಗಳಿಂದ ತನಿಖೆ ನಡೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+