ತುಮಕೂರಿನಲ್ಲಿ ನ.18ರಿಂದ ಸೇನಾ ನೇಮಕಾತಿ
ತುಮಕೂರು, ನ.4 : ಬೆಂಗಳೂರಿನ ಆರ್ಮಿ ರಿಕ್ರೂಟಿಂಗ್ ಝೋನ್ ನ.18ರಿಂದ 22ರವರೆಗೆ ತುಮಕೂರಿನಲ್ಲಿ ಸೇನಾ ನೇಮಕಾತಿ ನಡೆಸಲಿದೆ. ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಮೂಲ ಪ್ರಮಾಣ ಪತ್ರಗಳು, ಪಾಸ್‌ಪೋರ್ಟ್ ಅಳತೆಯ ಬಹುವರ್ಣದ ಭಾವಚಿತ್ರ ಮುಂತಾದ ದಾಖಲೆಗಳೊಂದಿಗೆ ಹಾಜರಾಗಬಹುದು.
ಸೋಲ್ಜರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್, ಸೋಲ್ಜರ್ ಟ್ರೇಡ್‌ಮನ್, ಸೋಲ್ಜರ್ (ಜನರಲ್ ಡ್ಯೂಟಿ) ಹಾಗೂ ಡಿ.ಎಸ್.ಸಿ. (ಮಾಜಿ ಸೈನಿಕರಿಗೆ ಮಾತ್ರ) ಹುದ್ದೆಗಳ ಭರ್ತಿಗಾಗಿ ನವೆಂಬರ್ 18 ರಿಂದ 22ರವರೆಗೆ ನಗರದ ಮಹಾತ್ಮ ಗಾಂಧಿ ಮೈದಾನದಲ್ಲಿ ನೇಮಕಾತಿ ನಡೆಯಲಿದೆ. [ಮೆಸ್ಕಾಂನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ]

ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ ನೇಮಕಾತಿ ಬಯಸುವವರು ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳಲ್ಲಿ ಕನಿಷ್ಠ 50 ಅಂಕಗಳೊಂದಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. 10/12ನೇ ತರಗತಿಯಲ್ಲಿ ಇಂಗ್ಲೀಷ್, ಗಣಿತ ಮತ್ತು ಅಕೌಂಟ್ಸ್ ವ್ಯಾಸಂಗ ಮಾಡಿ ಶೇ.40 ಅಂಕ ಪಡೆದಿರಬೇಕು.
ಸೋಲ್ಜರ್ ಟೆಕ್ನಿಕಲ್ ಹುದ್ದೆಗೆ ನೇಮಕಾತಿ ಬಯಸುವವರು ದ್ವಿತೀಯ ಪಿಯುಸಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಶೇ.40 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಸೋಲ್ಜರ್ ಟ್ರೇಡ್‌ಮನ್ ಹುದ್ದೆಗೆ ಎಸ್ಎಸ್ಎಲ್‌ಸಿ ಅಥವಾ 8ನೇ ತರಗತಿ ಉತ್ತೀರ್ಣ ಹಾಗೂ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಶೇ.45 ಅಂಕಗಳೊಂದಿಗೆ ಉತ್ತೀರ್ಣರಾದವರು ಆಗಮಿಸಬಹುದು.
ನವೆಂಬರ್ 18ರಂದು ಸಿಪಾಯಿ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗಳಿಗೆ, ನವೆಂಬರ್ 19ರಂದು ಸಿಪಾಯಿ ಟ್ರೇಡ್ಸ್‌ಮನ್, ನವೆಂಬರ್ 21ರಂದು ಸಿಪಾಯಿ ಜನರಲ್ ಡ್ಯೂಟಿ, ಸಿಪಾಯಿ ಟೆಕ್ನಿಕಲ್ ಹುದ್ದೆಗಳಿಗೆ ಹಾಗೂ 48 ವರ್ಷದೊಳಗಿನ ಮಾಜಿ ಸೈನಿಕರಿಗೆ ನವೆಂಬರ್ 22ರಂದು ಡಿ.ಎಸ್.ಸಿ. ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ನೇಮಕಾತಿಯಲ್ಲಿ ಭಾಗವಹಿಸಲಿಚ್ಚಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಮೂಲ ಪ್ರಮಾಣ ಪತ್ರಗಳು, ಪಾಸ್‌ಪೋರ್ಟ್ ಅಳತೆಯ ಬಹುವರ್ಣದ ಭಾವಚಿತ್ರ, ತಹಶೀಲ್ದಾರರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ, ಗುಣ-ನಡತೆಯ ಪ್ರಮಾಣ ಪತ್ರ, ಎನ್‌ಸಿಸಿ, ಆಟೋಟದ ಪ್ರಮಾಣ ಪತ್ರಗಳು ಹಾಗೂ ಇತರೆ ಅಗತ್ಯ ದಾಖಲಾತಿಗಳನ್ನು ದ್ವಿ ಪ್ರತಿಗಳಲ್ಲಿ ಸಿದ್ಧ ಪಡಿಸಿಕೊಂಡು ಹಾಜರಾಗಬಹುದು.
ವಿವರಗಳಿಗಾಗಿ 080-25599290, 25596517, 08182-220925 ದೂರವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications