• search
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

25 ಕೋಟಿ ಕಮಿಷನ್; ಎಂ.ಬಿ.ಪಾಟೀಲರನ್ನು ಮತ್ತೆ ತಡವಿಕೊಂಡ ಯಡಿಯೂರಪ್ಪ

By ಕುಮಾರಸ್ವಾಮಿ
|
   ಎಂ ಬಿ ಪಾಟೀಲ್ 25 ಕೋಟಿ ಕಮಿಷನ್ ಹೊಡೆದಿದ್ದಾರೆ ಎಂದು ಆರೋಪಿಸಿದ ಯಡಿಯೂರಪ್ಪ | Oneindia Kannada

   ತುಮಕೂರು, ಮಾರ್ಚ್ 23 : ರಾಜ್ಯಸಭಾ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ. ಹಾಗಾಗಿ ನಮ್ಮ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ಗೆಲುವು ಸಾಧಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

   ಸಚಿವ ಎಂ.ಬಿ.ಪಾಟೀಲ್ ವಿರುದ್ದ ಮತ್ತೆ ಹರಿಹಾಯ್ದ ಅವರು, ಎಂ.ಬಿ.ಪಾಟೀಲ್ ಗೆ ನೇರವಾಗಿ ಕೇಳಲು ಬಯಸುತ್ತೇನೆ. ಕಾಮಗಾರಿ ಗುತ್ತಿಗೆ ನೀಡಿರುವುದರಲ್ಲಿ ಅವ್ಯವಹಾರ ನಡೆದಿರುವುದು ಸತ್ಯ. ನಾನು ಕೊಟ್ಟಿರುವ ದಾಖಲೆಗಳಲ್ಲಿ ಸಣ್ಣ-ಪುಟ್ಟ ಲೋಪ, ದೋಷಗಳಿದ್ದರೆ ಅವರು ಹೇಳಿದಂತೆ ಕೇಳಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

   ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ರೂ.150 ಕೋಟಿ ಹಗರಣ: ಯಡಿಯೂರಪ್ಪ

   ಹೊರರಾಜ್ಯದಿಂದ ಖೊಟ್ಟಿ ಪ್ರಮಾಣಪತ್ರಗಳನ್ನು ತಂದು, ಕಾಮಗಾರಿ ಮಾಡಿದ್ದೇನೆ ಎಂದು ಏಜೆನ್ಸಿಯವರು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಅನುಮತಿ ನೀಡಲಾಗಿತ್ತು. ನಾವು ಅದಕ್ಕೆ ಆಕ್ಷೇಪ ಮಾಡಿದ ಮೇಲೆ ಎರಡು ದಿನದ ಹಿಂದೆ ವಾಪಸ್ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾಗಿ ಆರೋಪಿಸಿದರು.

   25 ಕೋಟಿ ಕಮಿಷನ್ ಹೊಡೆದು, ಕಾಮಗಾರಿ ಕೊಟ್ಟಿದ್ದಾರೆ. ಹೊರಗಡೆಯಿಂದ ಇಬ್ಬರನ್ನು ಕರೆದು, ಇಷ್ಟು ದೊಡ್ಡ ಕಾಮಗಾರಿ ಕೊಟ್ಟಿರುವ ಉದ್ದೇಶವೇನು? ಇದು ಅಕ್ಷಮ್ಯ ಅಪರಾಧ. ಕಮಿಷನ್ ತೆಗೆದುಕೊಂಡ ಮೇಲೆ ಕಾಮಗಾರಿ ಕೊಡಲಾಗಿತ್ತು. ಈಗ ದೊಂಬರಾಟ ಮಾಡಲಾಗುತ್ತಿದೆ. ಈಗ ನನ್ನ ವಿರುದ್ದ ಅವಾಚ್ಯ ಪದ ಬಳಸಿ ಮಾತನಾಡುತ್ತಿರುವುದು ಅವರ ಯೋಗ್ಯತೆ ತಿಳಿಸುತ್ತದೆ ಎಂದು ಹೇಳಿದರು.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

   ಲಿಂಗಾಯತ ಧರ್ಮ ಮಾನ್ಯತೆ ಕುರಿತಂತೆ ಸಿದ್ದಗಂಗಾ ಶ್ರೀಗಳ ಅಭಿಪ್ರಾಯಕ್ಕೆ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

   ಜ್ಯೋತಿ ಗಣೇಶ್ ಗೆ ತುಮಕೂರು ನಗರ ಟಿಕೆಟ್

   ಜ್ಯೋತಿ ಗಣೇಶ್ ಗೆ ತುಮಕೂರು ನಗರ ಟಿಕೆಟ್

   ಇದೇ ವೇಳೆ ಯಡಿಯೂರಪ್ಪನವರು ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಹಾಗೂ ಸೊಗಡು ಶಿವಣ್ಣ ಮಧ್ಯ ರಾಜೀ ಸೂತ್ರವನ್ನು ಇಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತುಮಕೂರು ನಗರದ ಬಿಜೆಪಿ ಟಿಕೆಟ್ ಜ್ಯೋತಿ ಗಣೇಶ್ ಗೆ ನೀಡಿ, ಸೊಗಡು ಶಿವಣ್ಣ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ನೀಡುವ ಭರವಸೆ ನೀಡಿದರು ಎಂಬ ಮಾತು ಹರಿದಾಡುತ್ತಿದೆ.

   ಹಿಂದುಳಿದ ವರ್ಗದವರಿಗೆ ಬಿಜೆಪಿ ನೀಡಿದ ಸವಲತ್ತು

   ಹಿಂದುಳಿದ ವರ್ಗದವರಿಗೆ ಬಿಜೆಪಿ ನೀಡಿದ ಸವಲತ್ತು

   ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಬೆಳೆಯುತ್ತಿರುವ ಪಕ್ಷ. ಇತಿಹಾಸದಲ್ಲಿ ಮೊದಲ ಬಾರಿಗೆ ಇಪ್ಪತ್ತೆರಡು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಏಕೈಕ ಪಕ್ಷ ಬಿಜೆಪಿ. ರಾಜ್ಯದಲ್ಲಿ ಐದು ವರ್ಷದಲ್ಲಿ ಹಿಂದುಳಿದ ವರ್ಗದವರಿಗೆ ನೀಡಿದ ಸವಲತ್ತು ಎಲ್ಲರಿಗೂ ನೆನಪಿದೆ ಎಂದರು

   ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸ್ತೀವಿ

   ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸ್ತೀವಿ

   ಇನ್ನೂ ಕೆಲ ಗ್ರಾಮಗಳಲ್ಲಿ ಹೆಣ್ಣುಮಕ್ಕಳನ್ನು ಹೊರಗಿಡುವ ದುಷ್ಟ ಪದ್ಧತಿ ಜೀವಂತವಾಗಿದೆ. ಕುಟುಂಬವನ್ನು ಪೊರೆಯುವ ಹೆಣ್ಣಿಗೆ ಸಮಾನತೆ ಕೊಡಬೇಕು. ತಲ್ವಾರ, ಪರಿವಾರ ಜನಾಂಗವನ್ನು ಕೇಂದ್ರ ಸರಕಾರ ಒಂದು ವಾರದಲ್ಲಿ ಪರಿಶ್ಸಿಷ್ಟ ಪಂಗಡಕ್ಕೆ ಸೇರಿಸಿತು. ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತದೆ ಎಂದರು.

   ಪ್ರತಿ ಗ್ರಾಮದಲ್ಲಿ ಕೃಷ್ಣ ಭವನ ನಿರ್ಮಾಣ

   ಪ್ರತಿ ಗ್ರಾಮದಲ್ಲಿ ಕೃಷ್ಣ ಭವನ ನಿರ್ಮಾಣ

   ಪ್ರತಿ ಗ್ರಾಮದಲ್ಲಿಯೂ ಕೃಷ್ಣಭವನ ನಿರ್ಮಾಣವನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ. ಗೊಲ್ಲರಹಟ್ಟಿಯನ್ನು ಕಂದಾಯ ಗ್ರಾಮಗಳಾಗಿ ಮಾಡುವ ಕೆಲಸ ಮುಂದೆ ಪೂರ್ಣ ಮಾಡುತ್ತೇವೆ. ಗೊಲ್ಲ ಸಮುದಾಯದಿಂದ ಮೂವರು ಶಾಸಕರು ಜಿಲ್ಲೆಯಲ್ಲಿ ಆಯ್ಕೆ ಆಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು ತುಮಕೂರು ಸುದ್ದಿಗಳುView All

   English summary
   BJP state president BS Yeddyurappa alleges 25 crore kickback against minister MB Patil in Tumakuru on Friday. And also express confidence of winning Rajeev Chandrasekhar in Rajya sabha election.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more