'ತಮಿಳುನಾಡು ಅಥವಾ ಕೇರಳದಲ್ಲಿ ಸ್ಪರ್ಧಿಸುವ ಧೈರ್ಯ ಮೋದಿಗೆ ಇದೆಯಾ?'
Recommended Video

ತಿರುವನಂತಪುರಂ (ಕೇರಳ), ಏಪ್ರಿಲ್ 7: ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎರಡೂ ಕಡೆಯಿಂದ ಚುನಾವಣೆ ಗೆಲ್ಲಬಹುದು ಎಂಬ ನಂಬಿಕೆ ಇರುವುದರಿಂದ ರಾಹುಲ್ ಗಾಂಧಿ ಅವರು ವಯನಾಡ್ ನಿಂದಲೂ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಅದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇರಳ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವ ಧೈರ್ಯ ಇದೆಯಾ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಭಾನುವಾರ ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವುದರಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಉತ್ಸಾಹ ಮೂಡಿದೆ. ಭಾರತದ ಮುಂದಿನ ಪ್ರಧಾನಿ ಆಗುವವರು ಈ ಭಾಗದಿಂದ ಆಯ್ಕೆಯಾಗಲಿದ್ದರೆ ಎಂಬ ಉತ್ಸಾಹ ಅದು ಎಂದು ಶಶಿ ತರೂರ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜತೆಗೆ ದಕ್ಷಿಣ ಭಾರತದ ರಾಜ್ಯಗಳ ಸಂಬಂಧ ಸ್ಥಿರವಾಗಿ ಇಳಿಕೆ ಆಗುತ್ತಲೇ ಇದೆ. ಆರ್ಥಿಕ ಭದ್ರತೆಗೆ ಆತಂಕ ಹಾಗೂ ಭವಿಷ್ಯದ ರಾಜಕೀಯ ಪ್ರಾತಿನಿಧಿಕತೆಗೆ ಸವಾಲು ಎದುರಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಉತ್ತರ ಹಾಗೂ ದಕ್ಷಿಣ ಭಾರತ ಎರಡೂ ಕಡೆ ಗೆಲ್ಲುವ ವಿಶ್ವಾಸ ರಾಹುಲ್ ಗಾಂಧಿ ಅವರಿಗೆ ಇದೆ. ಅಂಥ ನಿರ್ಧಾರ ಮೋದಿ ಮಾಡಬಲ್ಲರೆ? ಕೇರಳ ಅಥವಾ ತಮಿಳುನಾಡಿನ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಧೈರ್ಯ ಅವರಿಗೆ ಇದೆಯಾ ಎಂದು ಶಶಿ ತರೂರ್ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications