• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಪರೇಷನ್ ಟ್ವಿನ್ಸ್: ಕೇರಳದ 140 ಕ್ಷೇತ್ರಗಳ ಬೋಗಸ್ ಮತದಾನ ಕುರಿತು ಮಾಹಿತಿ ನೀಡಿದ ಯುಡಿಎಫ್

|

ತಿರುವನಂತಪುರಂ, ಏಪ್ರಿಲ್ 1: ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿರುವ ನಕಲಿ ಮತದಾರರ ಕುರಿತು ವಿರೋಧ ಪಕ್ಷದ ನಾಯಕರು ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಆಪರೇಷನ್ ಟ್ವಿನ್ ವೆಬ್‌ಸೈಟ್ ಮೂಲಕ 140 ಕ್ಷೇತ್ರಗಳಲ್ಲಿರುವ ನಕಲಿ ಮತದಾರರು, ನಕಲಿ ಮತದ ಕುರಿತು ಮಾಹಿತಿ ನೀಡಿದ್ದಾರೆ.ಯುಡಿಎಫ್ ಹೊಸದಾಗಿ ಎನ್ನುವ ವೆಬ್‌ಸೈಟ್‌ ಬಿಡುಗಡೆ ಮಾಡಿದೆ. ಅದರಲ್ಲಿ 140 ಕ್ಷೇತ್ರಗಳಲ್ಲಿರುವ ಡಬಲ್ ವೋಟ್‌ಗಳ ಕುರಿತು ವಿವರಿಸಿದ್ದಾರೆ.

ಕೇರಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ

ವೆಬ್‌ಸೈಟ್‌ನಲ್ಲಿ ಪ್ರತಿ ಕ್ಷೇತ್ರದ ವಿವಿಧ ಮತಕೇಂದ್ರಗಳಲ್ಲಿ ಪೋಸ್ಟ್‌ ಮಾಡಿದ ಡಬಲ್ ಮತದಾರರ ಹೆಸರುಗಳು ಹಾಗೂ ಒಂದೇ ಮತದಾರರ ಫೋಟೊ ಬಳಸಿ ಮತದಾನ ಮಾಡಿದವರು ಕುರಿತು ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಈ ವೆಬ್‌ಸೈಟ್‌ನಲ್ಲಿ ಕ್ಷೇತ್ರದ ಸಂಖ್ಯೆ, ಬೂತ್ ಸಂಖ್ಯೆ, ಆ ಬೂತ್‌ನಲ್ಲಿ ಮತದಾರರ ಹೆಸರು, ಅದೇ ವ್ಯಕ್ತಿಗೆ ಇತರೆ ಬೂತ್‌ಗಳಲ್ಲಿ ಮತದಾರರ ಗುರುತಿನ ಸಂಖ್ಯೆ, ಅವರ ಹೆಸರು ಮತ್ತು ವಿಳಾಸ, ಮುಂದಿನ ಕ್ಷೇತ್ರದಲ್ಲಿ ಐಡಿ ಸಂಖ್ಯೆ ಮತ್ತು ವಿಳಾಸದಲ್ಲಿ ಅದೇ ವ್ಯಕ್ತಿಯ ಹೆಸರು ಇರುವುದನ್ನು ಪತ್ತೆ ಹಚ್ಚಲಾಗಿದೆ.

ಕೇರಳದ 14 ಜಿಲ್ಲೆಗಳಲ್ಲಿನ 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲೇ ಚುನಾವಣೆ ನಡೆಯಲಿದೆ. ಮಾರ್ಚ್ 12ರಂದು ಅಧಿಸೂಚನೆ ಪ್ರಕಟ, ಮಾರ್ಚ್ 20ರಂದು ನಾಮಪತ್ರ ಪರಿಶೀಲನೆ, ಮಾರ್ಚ್ 22ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ, ಏಪ್ರಿಲ್ 6 ರಂದು ಮತದಾನ, ಮೇ 2 ರಂದು ಮತ ಎಣಿಕೆ, ಫಲಿತಾಂಶ ಪ್ರಕಟ.

ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ. 2016ರಲ್ಲಿ ಯುಡಿಎಫ್ 47 ಸ್ಥಾನ ಗಳಿಸಿತ್ತು.

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಲಿತಾಂಶ ನೀಡಿದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುಡಿಎಫ್ ಸಾಧನೆ ಕಳಪೆಯಾಗಿತ್ತು. ಕಳೆದ ಬಾರಿ 87 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 22 ಸ್ಥಾನ ಗೆದ್ದಿತ್ತು. ಮುಸ್ಲಿಂ ಲೀಗ್ 24 ಕ್ಷೇತ್ರಗಳಲ್ಲಿ 18 ಕ್ಷೇತ್ರ ತನ್ನದಾಗಿಸಿಕೊಂಡಿತ್ತು. ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ.

   ಇವರ ಕೆಟ್ಟ ಆಡಳಿತದ ವಿರುದ್ಧ ನಾವು ಹೋರಾಟ ಮಾಡ್ತೀವಿ ! | DK Shivakumar | Oneindia Kannada

   ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

   English summary
   The UDF's website(operation twins) has been launched with the information of bogus votes in the state.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X