ಬಿಗಿಭದ್ರತೆ ನಡುವೆ ಮತ್ತೆ ತೆರೆಯಲಿರುವ ಅಯ್ಯಪ್ಪ ದೇವಾಲಯ

Recommended Video

      Sabarimala Verdict : ಬಿಗಿ ಪೊಲೀಸ್ ಭಧ್ರತೆಯೊಂದಿಗೆ ಮತ್ತೆ ತೆರೆಯಲಿದೆ ಶಬರಿಮಲೈ ಅಯ್ಯಪ್ಪ ದೇವಸ್ಥಾನ

      ತಿರುವನಂತಪುರಂ, ನವೆಂಬರ್ 05: ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಎರಡನೇ ಬಾರಿಗೆ ಶಬರಿಮಲೆ ಅಯ್ಯಪ್ಪ ದೇವಾಲಯ ತೆರೆಯಲ್ಪಡುತ್ತಿದೆ.

      ದೀಪಾವಳಿ ವಿಶೇಷ ಪುರವಣಿ

      ಸೋಮವಾರ ದೇವಾಲಯದ ಬಾಗಿಲು ತೆರೆಯಲಿರುವುದರಿಂದ ಈ ಭಾಗದಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ. 20 ಕಮಾಂಡೋ ಸದಸ್ಯರು, 100 ಮಹಿಳಾ ಸಿಬ್ಬಂದಿ ಸೇರಿದಂತೆ 2300 ಭದ್ರತಾ ಸಿಬ್ಬಂದಿಯನ್ನು ದೇವಾಲಯದ ಆವರಣದಲ್ಲಿ ನಿಯೋಜಿಸಲಾಗಿದೆ.

      ಶನಿವಾರದಿಂದಲೇ ಈ ಭಾಗದ ಈ ಭಾಗದಲ್ಲಿ ಪೊಲೀಸರು ನಿಷೇಧಾಜ್ಞೆ ಹೊರಡಿಸಿದ್ದು, ಅಗತ್ಯವಿದ್ದರೆ ಸರ್ಕಲ್ ಇನ್ಸ್ ಪೆಕ್ಟರ್ ಮಟ್ಟದ 30 ಮಹಿಳಾ ಸಿಬ್ಬಂದಿಯನ್ನು ನೇಮಿಸಿ, 50 ವರ್ಷ ಮೀರಿದ ಮಹಿಳಾ ಸಿಬ್ಬಂದಿಯನ್ನು ದೇವಾಲಯದಾವರಣದೊಳಗೆ ಕಳಿಸಲು ನಿರ್ಧರಿಸಲಾಗಿದೆ.

      Sabarimala temple opens today: tight security deployed

      ಕಳೆದ ತಿಂಗಳಷ್ಟೇ ದೇವಾಲಯ ತೆರೆಲ್ಪಟ್ಟಿದ್ದಾಗ ದೇವಾಲಯ ಪ್ರವೇಶಿಸಲು ಯತ್ನಿಸಿಸದ ಹಲವು ಮಹಿಳೆಯರನ್ನು ತಡೆಯಲಾಗಿತ್ತು. ದೇವಸ್ಥಾನ ತೆರೆದಿದ್ದ ನಾಲ್ಕು ದಿನಗಳ ಕಾಲ ಶಬರಿಮಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ತಲೆದೋರಿತ್ತು. ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ, ಪ್ರತಿಭಟನೆ ನಡೆಸುತ್ತಿದ್ದ 2000 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿತ್ತು.

      10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವ ಕಾರಣ ಅವರು ದೇವಾಲಯ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಕಳೆದ 800 ವರ್ಷಗಳಿಂದ ದೇವಾಲಯ ಪ್ರವೇಶಕ್ಕೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ ಕಳೆದ ಸೆ.28 ರಂದು ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಈ ನಿರ್ಬಂಧವನ್ನು ತೆರವುಗೊಳಿಸಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+