ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಣಕಣ LIVE: ವಯನಾಡಿನಲ್ಲಿಂದು ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

|
Google Oneindia Kannada News

ವಯನಾಡ್, ಏಪ್ರಿಲ್ 04: ಕೇರಳದ ವಯನಾಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ನಾಮಪತ್ರ ಸಲ್ಲಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬುಧವಾರ ಸಂಜೆಯೇ ಕೋಳಿಕ್ಕೊಡ್ ಗೆ ಆಗಮಿಸಿರುವ ರಾಹುಲ್ ಗಾಂಧಿ, ಇಂದು ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ನಂತರ ನಾಮಪತ್ರ ಸಲ್ಲಿಸಲಿದರು.

Rahul Gandhi to file his nomination in Wayanad, Kerala today

ನಾಮಪತ್ರಸಲ್ಲಿಕೆ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಮುಖಂಡರಾದ ರಮೇಶ್ ಚೆನ್ನಿತಾಲ, ಮುಕುಲ್ ವಾಸ್ನಿಕ್, ಕೆಸಿ ವೇಣುಗೋಪಾಲ್, ಓಮನ್ ಚಾಂಡಿ, ಮುಳ್ಳಪಲ್ಲಿ ರಾಮಚಂದ್ರನ್ ಮುಂತಾದವರು ಜೊತೆಯಾಗಿದ್ದರು.

ಈ ಚುನಾವಣೆ ಸಿದ್ಧಾಂತಗಳ ನಡುವಿನ ಯುದ್ಧ: ರಾಹುಲ್ ಗಾಂಧಿ ಈ ಚುನಾವಣೆ ಸಿದ್ಧಾಂತಗಳ ನಡುವಿನ ಯುದ್ಧ: ರಾಹುಲ್ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರೂ ಕೇರಳ ತಲುಪಿದ್ದು, ನಾಮಪತ್ರ ಸಲ್ಲಿಕೆ ವೇಳೆ ಅವರೂ ಸಹೋದರ ರಾಹುಲ್ ಗಾಂಧಿ ಅವರಿಗೆ ಜೊತೆಯಾಗಿದ್ದರು.

ವಯನಾಡ ಲೋಕಸಭಾ ಕ್ಷೇತ್ರದ ಸಮಗ್ರ ಚಿತ್ರಣ

ಉತ್ತರ ಪ್ರದೇಶದ ಅಮೇಥಿಯೊಂದಿಗೆ ಕೇರಳದ ವಯನಾಡಿನಲ್ಲೂ ರಾಹುಲ್ ಗಾಂಧಿ ಅವರು ಕಣಕ್ಕಿಳಿದಿದ್ದಾರೆ. ಇಂದು ಬೆಳಿಗ್ಗೆ 9:30 ಕ್ಕೆ ರೋಡ್ ಶೋ ಆರಂಭಿಸಿದ ರಾಹುಲ್ ಗಾಂಧಿ, ನಂತರ 11:30 ಕ್ಕೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest FirstOldest First
12:41 PM, 4 Apr

ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದ ನಂತರ ರೋಡ್ ಶೋನಲ್ಲಿ ಭಾಗಿಯಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ
11:49 AM, 4 Apr

ವಯನಾಡ್ ಕ್ಷೇತ್ರದಿಂದ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ
11:25 AM, 4 Apr

"ನಾವು ದಕ್ಷಿಣ ಭಾರತೀಯರನ್ನು ಕಡೆಗಣಿಸುತ್ತಿದ್ದೇವೆ ಎಂಬ ಭಾವನೆ ಅಲ್ಲಿನ ಜನರಲ್ಲಿದೆ. ಅಂಥ ಸನ್ನಿವೇಶವನ್ನು ಪ್ರಧಾನಿ ನರೇಂದ್ರ ಮೋದಿ ಸೃಷ್ಟಿಸಿದ್ದಾರೆ. ಈ ಭಾವನೆಯನ್ನು ಹೋಗಲಾಡಿಸಿ, ಅಲ್ಲಿನ ಜನರಲ್ಲಿ ಭದ್ರತೆಯ ಭಾವನೆ ಮೂಡಿಸಬೇಕಿದೆ. ಆದ್ದರಿಂದ ನಾನು ಅಲ್ಲಿಂದ ಚುನಾವಣೆಗೆ ನಿಂತಿದ್ದೇನೆ" ಎಂದಿದ್ದ ರಾಹುಲ್ ಗಾಂಧಿ
11:24 AM, 4 Apr

ರಾಹುಲ್ ಗಾಂಧಿ ಅವರ ಆಗಮನಕ್ಕಾಗಿ ಕಾದು ಕುಳಿತಿರುವ ಸಹಸ್ರಾರು ಅಭಿಮಾನಿಗಳು
11:14 AM, 4 Apr

ವಯನಾಡಿಗೆ ಆಗಮಿಸಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ
9:39 AM, 4 Apr

ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಿನ್ನೆಯೇ ಕೇರಳಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಸ್ವಾಗತಿಸಿದರು.
9:38 AM, 4 Apr

ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಕೋಞಕೊಡೆಯಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ.
Advertisement
9:35 AM, 4 Apr

ವಯಾನಾಡ್​ ನಲ್ಲಿ ರಾಹುಲ್​ ಗಾಂಧಿಗೆ ಪ್ರತಿಸ್ಪರ್ಧಿಯಾಗಿ ಎನ್​ಡಿಎ ಅಭ್ಯರ್ಥಿ ತುಷಾರ್​ವೆಳ್ಳಪಲ್ಲಿ ಅವರನು ಕಣಕ್ಕಿಳಿಸಲಾಗಿದೆ. ತುಷಾರ್​ಅವರು ಭಾರತ್​ ಧರ್ಮ ಜನ ಸೇನಾದ ಅಧ್ಯಕ್ಷರಾಗಿದ್ದಾರೆ.
9:28 AM, 4 Apr

11:30 ಕ್ಕೆ ರಾಹುಲ್ ಗಾಂಧಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
9:27 AM, 4 Apr

ನಾಮಪತ್ರ ಸಲ್ಲಿಕೆಗೂ ಮುನ್ನ ಬೆಳಿಗ್ಗೆ 9:30 ರಿಂದ ಬೃಹತ್ ರೋಡ್ ಶೋ ನಡೆಸಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ

English summary
Congress president Rahul Gandhi to file his nomination from Wayanad, Kerala today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X