ಸಿಪಿಐ ಕಾರ್ಯದರ್ಶಿ ಬಾಲಕೃಷ್ಣನ್ ಪುತ್ರನ ವಿರುದ್ಧ ಚಾರ್ಜ್‌ಶೀಟ್
ಮುಂಬೈ, ಡಿ. 15: ಕೇರಳದ ರಾಜ್ಯ ಸಿಪಿಐ ಕಾರ್ಯದರ್ಶಿ, ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರರ ಕ್ರಿಮಿನಲ್ ಪುರಾಣ ಮುಂದುವರೆದಿದೆ. ಕಿರಿಯ ಪುತ್ರ ಬಿನೀಶ್ ಕೊಡಿಯೇರಿಗೆ ಮನಿಲಾಂಡ್ರಿಂಗ್ ಕೇಸಿನಲ್ಲಿ ಬೆಂಗಳೂರಿನ ನ್ಯಾಯಾಲಯವೊಂದು ಜಾಮೀನು ನಿರಾಕರಿಸಿದೆ. ಇನ್ನೊಂದೆಡೆ ಹಿರಿಯ ಪುತ್ರ ಬಿನಾಯ್ ಕೊಡಿಯೇರಿ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ದುಬೈನಲ್ಲಿ ಬಾರ್ ಡ್ಯಾನ್ಸರ್ ಆಗಿದ್ದ ಬಿಹಾರ ಮೂಲದ ಮಹಿಳೆಯರೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಬಿನಾಯ್ ಕೊಡಿಯೇರಿ ಹೊತ್ತುಕೊಂಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದು, ಇಬ್ಬರಿಗೂ ಒಂದು ಮಗುವಿದೆ ಎಂದು ಅಂಧೇರಿ ಕೋರ್ಟಿಗೆ ಸಲ್ಲಿಸುವ 678 ಪುಟಗಳ ದೋಷರೋಪಣ ಪಟ್ಟಿಯಲ್ಲಿ ಹೇಳಲಾಗಿದೆ.
ಪ್ರಕರಣ ದಾಖಲಾಗಿ ಒಂದೂವರೆ ವರ್ಷದ ಬಳಿಕ ಹೆಚ್ಚುವರಿ ದೋಷರೋಪಣ ಪಟ್ಟಿಯನ್ನು ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆ 2021ರ ಜೂನ್ ತಿಂಗಳಿಗೆ ಮುಂದೂಡಿಕೆಯಾಗಿದೆ.

33 ವರ್ಷ ವಯಸ್ಸಿನ ಮಹಿಳೆ ಮಾಡಿರುವ ಅರೋಪ ಸಾಬೀತುಪಡಿಸಲು ಡಿಎನ್ಎ ಪರೀಕ್ಷೆಗೂ ತನಿಖಾಧಿಕಾರಿಗಳು ಮುಂದಾಗಿದ್ದು, ಪರೀಕ್ಷೆ ವರದಿ ಇನ್ನೂ ಬಂದಿಲ್ಲ.












Click it and Unblock the Notifications