• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಬಾರಿಗೆ ಗುರುವಾಯೂರು ದೇವಾಲಯದ ಆನೆ ಶಿಬಿರಕ್ಕೆ ಮಹಿಳಾ ಮ್ಯಾನೇಜರ್

|
Google Oneindia Kannada News

ತಿರುವನಂತಪುರ, ಜೂನ್ 23: 47 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಗುರುವಾಯೂರು ದೇವಾಲಯದ ಪ್ರಸಿದ್ಧ ಆನೆ ಶಿಬಿರದಲ್ಲಿ ಮಹಿಳೆಯೊಬ್ಬರು ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

44 ಆನೆಗಳನ್ನು ಹೊಂದಿರುವ ಮತ್ತು 150 ಕ್ಕೂ ಹೆಚ್ಚು ಜನರು ಕೆಲಸ ಮಾಡುವ ಪುನ್ನತುರ್ಕೋಟಾದ ಮ್ಯಾನೇಜರ್ ಆಗಿ ಮಮ್ಮಿಯೂರ್ ಮೂಲದ ಲೆಜುಮೋಲ್ ಅವರನ್ನು ನೇಮಿಸಲಾಗಿದೆ.

ಚಿನ್ನದ ಸ್ಮಗಲಿಂಗ್ ಕೇಸ್ ಸಿಬಿಐಗೆ ಒಪ್ಪಿಸಿ, ಪಿಎಂಗೆ ಸ್ವಪ್ನ ಸುರೇಶ್ ಪತ್ರಚಿನ್ನದ ಸ್ಮಗಲಿಂಗ್ ಕೇಸ್ ಸಿಬಿಐಗೆ ಒಪ್ಪಿಸಿ, ಪಿಎಂಗೆ ಸ್ವಪ್ನ ಸುರೇಶ್ ಪತ್ರ

ಲೆಜುಮೋಲ್ ತಂದೆ ರವೀಂದ್ರನ್ ನಾಯರ್ ಪುನ್ನತುರ್ಕೋಟದಲ್ಲಿ ಮಾವುತರಾಗಿದ್ದರು. ಆಕೆಯ ಮಾವ, ಶಂಕರನಾರಾಯಣನ್ ಅವರು ಇತ್ತೀಚೆಗೆ ಈ ಕೆಲಸದಿಂದ ನಿವೃತ್ತರಾದರು. ಹೋಟೆಲ್ ನಡೆಸುತ್ತಿರುವ ಅವರ ಪತಿ ಪ್ರಸಾದ್, ಪುನ್ನತುರ್ಕೊಟ್ಟಾದಲ್ಲಿ ಅಲ್ಪಾವಧಿಗೆ ಮಾವುತರಾಗಿ ಕೆಲಸ ಮಾಡಿದ್ದಾರೆ.

ಗುರುವಾಯೂರು ಶ್ರೀಕೃಷ್ಣನ ಭಕ್ತೆಯಾದ ಸಿಆರ್ ಲೆಜುಮೋಲ್ ದೇವಸ್ಥಾನದ ಆನೆಗಳಿಗೆ ಹೆದರುವುದಿಲ್ಲ. ಮಾವುತಗಳ ಕುಟುಂಬದಲ್ಲಿ ಜನಿಸಿದ ಅವರು ಆನೆಗಳ ಕುರಿತು ಪ್ರೀತಿ ಹೊಂದಿದ್ದಾರೆ. ಆನೆಗಳಿಗೆ ಆಹಾರ ನೀಡುವುದು ಅವರ ಇಷ್ಟದ ಕೆಲಸಗಳಲ್ಲೊಂದಾಗಿದೆ. ಇದು ಭಗವಂತನ ಆಶೀರ್ವಾದ ಎಂದು ಬುಧವಾರ ಗುರುವಾಯೂರ್ ದೇವಸ್ಥಾನದ ಪುನ್ನತ್ತೂರು ಕೊಟ್ಟಾ ಉಸ್ತುವಾರಿ ವಹಿಸಿಕೊಂಡ ಲೆಜುಮೋಲ್ ಹೇಳುತ್ತಾರೆ. ಆನೆ ಶಿಬಿರದ 47 ವರ್ಷಗಳ ಇತಿಹಾಸದಲ್ಲಿ ಅವರು ಮೊದಲ ಮಹಿಳಾ ನಿರ್ವಾಹಕರಾಗಿದ್ದಾರೆ.

ಬಂಡೀಪುರದಿಂದ ದುಬಾರೆಗೆ ಬಂದ 'ಕುಶ' ಆನೆ, ಏನಿದು ರಹಸ್ಯ?ಬಂಡೀಪುರದಿಂದ ದುಬಾರೆಗೆ ಬಂದ 'ಕುಶ' ಆನೆ, ಏನಿದು ರಹಸ್ಯ?

ಪುನ್ನತ್ತೂರು ಕೊಟ್ಟಾ 44 ಆನೆಗಳನ್ನು ಹೊಂದಿದೆ, ಇವುಗಳನ್ನು ಭಕ್ತರು ವಿವಿಧ ಕಾಲಗಳಲ್ಲಿ ದಾನವಾಗಿ ನೀಡಿದ್ದಾರೆ. ಲೆಜುಮೋಲ್ ಆನೆಗಳ ಪಾಲನೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಪುನ್ನತ್ತೂರು ಕೊಟ್ಟಾ ಸ್ಥಳೀಯ ಆಡಳಿತಗಾರರ ಒಡೆತನದಲ್ಲಿತ್ತು, ದೇವಾಲಯದ ಆನೆಗಳು ತಂಗಲು ಗುರುವಾಯೂರ್ ದೇವಸ್ವಂ 1975 ರಲ್ಲಿ ಈ ಸ್ಥಳವನ್ನು ಖರೀದಿಸಿತು. ಶಿಬಿರವು 10 ಎಕರೆಗಳಷ್ಟು ವಿಸ್ತಾರವಾದ ಹಸಿರು ಪ್ರದೇಶವನ್ನು ಒಳಗೊಂಡಿದೆ.

Meet Lejumol Who Took Charge Of Guruvayur Temple’s Punnathur Kotta

"ಮಾವುತರು ಸೇರಿದಂತೆ 150 ಸಿಬ್ಬಂದಿಯ ಮೇಲ್ವಿಚಾರಣೆ ನೋಡಿಕೊಳ್ಳಬೇಕು ಮತ್ತು ಆನೆಗಳ ಯೋಗಕ್ಷೇಮದ ಬಗ್ಗೆ ವಿಚಾರಿಸುತ್ತಿರಬೇಕು" ಎಂದು ದೇವಸ್ಥಾನದ ಆಡಳಿತಾಧಿಕಾರಿ ಕೆ ಪಿ ವಿನಯನ್ ಹೇಳಿದ್ದಾರೆ.

ಹೊಸ ಜವಾಬ್ದಾರಿಗೆ ಲೆಜುಮೋಲ್ ಸಂತಸ

1996ರಲ್ಲಿ ಗುರುವಾಯೂರು ದೇವಸ್ವಂನಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದ್ದ ಲೆಜುಮೋಲ್ ಕೋಟಾದ ಜವಾಬ್ದಾರಿ ವಹಿಸುವ ಮುನ್ನ ಕಾಮಗಾರಿ ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದರು. "ಗುರುವಾಯೂರಪ್ಪನವರ ಆನೆಗಳನ್ನು ನೋಡಿಕೊಳ್ಳುವುದು ಒಂದು ದೊಡ್ಡ ಸೌಭಾಗ್ಯ. ಆನೆಗಳಿಗೆ ತಾಳೆ ಎಲೆ, ಹುಲ್ಲು, ಬಾಳೆ ಕಾಂಡ ಪೂರೈಕೆಗೆ ದೇವಸ್ವಂ ಗುತ್ತಿಗೆ ನೀಡಿದೆ. ಪ್ರತಿ ಆನೆಗೆ ಆಹಾರದ ಪ್ರಮಾಣವನ್ನು ಪಶುವೈದ್ಯರು ನಿರ್ಧರಿಸುತ್ತಾರೆ. ಮುಂದಿನ ತಿಂಗಳು ಆನೆಗಳಿಗೆ ಆಯುರ್ವೇದ ನವ ಯೌವನ ಪಡೆಯುವ ಚಿಕಿತ್ಸೆ ನೀಡಲಾಗುವುದು" ಎಂದು ಲೆಜುಮೋಲ್ ತಿಳಿಸಿದರು.

"ದೇವಾಲಯದಲ್ಲಿ ದೈನಂದಿನ ಆಚರಣೆಗಳಿಗೆ ಆನೆಗಳನ್ನು ನಿಯೋಜಿಸುದು ನನ್ನ ಕರ್ತವ್ಯವಾಗಿದೆ. ಹಬ್ಬ ಹರಿದಿನಗಳಲ್ಲಿ ಸುಮಾರು 20 ಆನೆಗಳನ್ನು ಬೇರೆ ದೇವಸ್ಥಾನಗಳಿಗೆ ಕಳುಹಿಸುತ್ತೇವೆ. ಆನೆಗಳು ಮಸ್ತಿಯಲ್ಲಿದ್ದಾಗ, ಅವುಗಳಿಗೆ ವಿಶ್ರಾಂತಿ ನೀಡಬೇಕು ಮತ್ತು ವೈದ್ಯಕೀಯ ತಪಾಸಣೆ ನಡೆಸಿದ ನಂತರ ಇತರ ಆನೆಗಳನ್ನು ಆಯ್ಕೆ ಮಾಡಬೇಕು," ಎಂದು ಅವರು ಹೇಳಿದರು. ಲೆಜುಮೋಲ್ ಅವರ ಮಕ್ಕಳಾದ ಅಕ್ಷಯ್ ಕೃಷ್ಣನ್ ಮತ್ತು ಅನಂತಕೃಷ್ಣನ್ ಕೂಡ ತಮ್ಮ ತಾಯಿಯ ಹೊಸ ಕೆಲಸದ ಬಗ್ಗೆ ಥ್ರಿಲ್ ಆಗಿದ್ದಾರೆ.

Recommended Video

   ಪ್ರವಾಹದಲ್ಲಿ ಎಳೇಕಂದಮ್ಮನನ್ನು ತಲೆ‌ ಮೇಲೆ‌ ಹೊತ್ತೊಯ್ದ ತಂದೆ ವಿಡಿಯೋ ಸಖತ್ ಎಮೋಷನಲ್ | *Viral | OneIndia Kannada

   English summary
   For the first time in its 47-year history, the Guruvayur Devaswom's famous temple-elephant camp has a woman at the helm. Lejumol has been appointed as the manager of Punnathurkotta, which houses 44 elephants and employs over 150 persons.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X