• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂದರ್ಶನದಲ್ಲಿ ಮಹಿಳಾ ಪತ್ರಕರ್ತೆ ಮೇಲೆ ದೌರ್ಜನ್ಯ; ಮಲಯಾಳಂ ನಟ ಶ್ರೀನಾಥ್ ಭಾಸಿ ಬಂಧನ

|
Google Oneindia Kannada News

ತಿರುವನಂತಪುರಂ, ಸೆ. 26; ಆನ್‌ಲೈನ್ ಮಾಧ್ಯಮವೊಂದರಲ್ಲಿ ಕೆಲಸ ಮಾಡುವ ಮಹಿಳಾ ಪತ್ರಕರ್ತೆಗೆ ಕಳೆದ ವಾರ ನಡೆದ ಸಂದರ್ಶನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸೋಮವಾರ ಕೇರಳದ ಮರಡು ಪೊಲೀಸರು ಮಲಯಾಳಂ ನಟ ಶ್ರೀನಾಥ್ ಭಾಸಿ ಅವರನ್ನು ಬಂಧಿಸಿದ್ದಾರೆ.

ತನ್ನ ಇತ್ತೀಚಿನ ಚಲನಚಿತ್ರ ಚಟ್ಟಂಬಿಯ ಪ್ರಚಾರಕ್ಕಾಗಿ ಸಂದರ್ಶನವೊಂದರಲ್ಲಿ ನಟ ತನ್ನ ಮತ್ತು ಇತರ ತಂಡದ ಸದಸ್ಯರ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದಾರೆ ಎಂದು ಪತ್ರಕರ್ತೆ ನೀಡಿದ ದೂರಿನ ಆಧಾರದ ಮೇಲೆ ನಟ ಶ್ರೀನಾಥ್ ಭಾಸಿ ವಿರುದ್ಧ ಕಳೆದ ವಾರ ಪ್ರಕರಣ ದಾಖಲಿಸಲಾಗಿದೆ.

ದಾವಣಗೆರೆಯಲ್ಲಿ ಡಿ ಬಾಸ್; ಕ್ರಾಂತಿ ಸಿನಿಮಾ ಬೆಂಬಲಿಸಲು ಮನವಿ ಮಾಡಿದ ದರ್ಶನ್ದಾವಣಗೆರೆಯಲ್ಲಿ ಡಿ ಬಾಸ್; ಕ್ರಾಂತಿ ಸಿನಿಮಾ ಬೆಂಬಲಿಸಲು ಮನವಿ ಮಾಡಿದ ದರ್ಶನ್

ಪೊಲೀಸರು ದೂರುದಾರರು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಂದರ್ಶನ ನಡೆದ ಹೋಟೆಲ್‌ನ ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.

ಆರೋಪಗಳು ಜಾಮೀನು ಪಡೆಯಬಹುದಾದ ಕಾರಣ, ಶ್ಯೂರಿಟಿ ಸಲ್ಲಿಸಿದ ನಂತರ ನಟ ಮರಡು ಪೊಲೀಸ್ ಠಾಣೆಯಿಂದ ಹೊರನಡೆಯುವ ನಿರೀಕ್ಷೆಯಿದೆ. ಭಾಸಿ ಅವರ ಇತ್ತೀಚಿನ ಚಿತ್ರ ಚಟ್ಟಂಬಿ ಪ್ರಚಾರದ ಸಂದರ್ಭದಲ್ಲಿ ಮಾಡಿದ ಸಂದರ್ಶನದಲ್ಲಿ ಘಟನೆ ನಡೆದಿದೆ.

ಘಟನೆ ನಂತರ, ಅವರು ನಂತರ ಕ್ಷಮೆಯಾಚಿಸಿದ್ದು, ತಾನು ಯಾರನ್ನೂ ನಿಂದಿಸಿಲ್ಲ ಎಂದಿದ್ದಾರೆ. ಒಬ್ಬರಿಗೆ ಅವಮಾನಿಸಿದಾಗ ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿಕ್ರಿಯಿಸುವ ರೀತಿಯಲ್ಲಿಯೇ ತಾನು ಪ್ರತಿಕ್ರಿಯಿಸಿದ್ದು, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ದೃಢವಾಗಿ ಪ್ರತಿಕ್ರಿಯಿಸಿದ್ದಾರೆ.

ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಮ್ಮ ಮುಂದೆ ಹಾಜರಾಗುವಂತೆ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ, ಅವರು ತಮ್ಮ ಮುಂದೆ ಹಾಜರಾಗಲು ಒಂದು ದಿನದ ರಜೆಯನ್ನು ಕೋರಿದ್ದರು. ಆದರೆ, ನಂತರ ಮನಸ್ಸು ಬದಲಾಯಿಸಿ ಸೋಮವಾರವೇ ಪೊಲೀಸರ ಮುಂದೆ ಹಾಜರಾಗಿದ್ದರು, ಒಂದು ಗಂಟೆಯ ವಿಚಾರಣೆಯ ನಂತರ ಪೊಲೀಸರು ಯುವ ನಟನನ್ನು ಬಂಧಿಸಿದ್ದಾರೆ.

ನಟ ಶ್ರೀನಾಥ್ ಭಾಸಿ ಅವರು ರೇಡಿಯೊ ಜಾಕಿಯಾಗಿ ತಮ್ಮ ವೃತ್ತಿ ಆರಂಭಿಸಿ, ನಂತರ ವೀಡಿಯೊ ಜಾಕಿಯಾಗಿ ಕೆಲಸ ಮಾಡುತ್ತಿದ್ದರು. 2011 ರಲ್ಲಿ ಬ್ಲೆಸ್ಸಿ ನಿರ್ದೇಶನದ ಮತ್ತು ಮೋಹನ್‌ಲಾಲ್ ಮತ್ತು ಅನುಪಮ್ ಖೇರ್ ನಟಿಸಿದ ಬ್ಲಾಕ್‌ಬಸ್ಟರ್ ಚಲನಚಿತ್ರ ಪ್ರಾಣಾಯಂ ನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ, ಇಲ್ಲಿಯವರೆಗೆ ಸುಮಾರು 50 ಚಿತ್ರಗಳಲ್ಲಿ ನಟಿಸಿದ್ದಾರೆ.

English summary
Kerala; Maradu Police arrest Malayalam actor Sreenath Bhasi for 'abusing' female journalist during an interview. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X