• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಳಿಕ್ಕೋಡ್ ಗೆ ಬಂದ ವಿಮಾನದ ಪೈಲಟ್ ಆಗಿದ್ದವರು ಅನುಭವಿ ದೀಪಕ್ ಸಾಥೆ

By ಅನಿಲ್ ಆಚಾರ್
|

ಕೋಳಿಕ್ಕೋಡ್, ಆಗಸ್ಟ್ 7: ಕರಿಪುರ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅವಘಡದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಸಹ ಪೈಲಟ್ ಕೂಡ ಮೃತಪಟ್ಟು, ಮೃತರ ಸಂಖ್ಯೆ 10 ಆಗಿದೆ. ಒಟ್ಟು 191 ಮಂದಿ ಇದ್ದ ವಿಮಾನದಲ್ಲಿ ಗಾಯಾಳುಗಳು ಸಂಖ್ಯೆ ಹೆಚ್ಚಿದ್ದು, ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡವರ ಸಂಖ್ಯೆ ಹೆಚ್ಚಿರುವುದರಿಂದ ಸಾವಿನ ಪ್ರಮಾಣ ಕೂಡ ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

   Kerala Flight Crash ನಂತರ ಮತ್ತೆ ನೆನಪಾಯ್ತು Mangalore ದುರಂತ | Oneindia Kannada

   ಇನ್ನು ಮೃತಪಟ್ಟ ಪೈಲಟ್ ಅನ್ನು ಕಮ್ಯಾಂಡರ್ ಕ್ಯಾಪ್ಟನ್ ದೀಪಕ್ ಸಾಥೆ ಎಂದು ಗುರುತಿಸಲಾಗಿದೆ. ಅವರು ಅತ್ಯಂತ ಅನುಭವಿಗಳಾಗಿದ್ದರು. ಭಾರತೀಯ ವಾಯುಸೇನೆಯಲ್ಲಿ ಕಾರ್ಯ ನಿರ್ವಹಿಸಿದವರು. ವಿಮಾನ ನಿಲ್ದಾಣದಿಂದ ತುರ್ತು ಕಂಟ್ರೋಲ್ ರೂಮ್ 0483-2719493 ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾಡಳಿತದಿಂದ ಹೆಲ್ಪ್ ಲೈನ್ 0495-2376901 ಇದೆ.

   ಕರಿಪುರ್ ವಿಮಾನ ದುರಂತ: ಸಂತ್ರಸ್ತರಿಗೆ ಸಹಾಯವಾಣಿ ಪ್ರಕಟ

   ಈ ಅವಘಡಕ್ಕೆ ಮಳೆಯೇ ಮುಖ್ಯ ಕಾರಣವಾಯಿತೇ ಎಂಬ ಚರ್ಚೆಯೂ ಶುರುವಾಗಿದೆ. ಏಕೆಂದರೆ ರನ್ ವೇಯಲ್ಲಿ ಮಳೆಯಿಂದ ನೀರು ತುಂಬಿಕೊಂಡಿತ್ತು. ಆದ್ದರಿಂದ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ದೀಪಕ್ ಸಾಥೆಯಂಥ ಅನುಭವಿಗಳಿಂದಲೂ ತಪ್ಪಾಗಿರುವಂಥ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

   English summary
   Kozhikode Flight Accident: Pilot who died is DV Sathe, he is very experienced pilot and also worked for Indian Air Force. Here is the details about him.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X