ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಿದ ಮಾಜಿ ಸಚಿವೆ ಶೈಲಜಾ; ಕಾರಣ?

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 4: ಕೇರಳದ ಮಾಜಿ ಆರೋಗ್ಯ ಸಚಿವೆ ಹಾಗೂ ಸಿಪಿಐಎಂ ನಾಯಕಿ ಕೆಕೆ ಶೈಲಜಾ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೇ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದೊಳಗೆ ನಡೆದ ಸಮಾಲೋಚನೆ ಬಳಿಕ ಅವರು ಪ್ರಶಸ್ತಿ ತಿರಸ್ಕರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ರಾಮೋನ್ ಮ್ಯಾಗ್ಸೆಸೇ ಪ್ರಶಸ್ತಿ ಸಮಿತಿಯಿಂದ ತಮಗೆ ಪತ್ರ ಸಿಕ್ಕಿದ್ದು, ಹಾಗೂ ಈ ಪ್ರಶಸ್ತಿಯನ್ನು ತಿರಸ್ಕರಿಸುವಂತೆ ಪಕ್ಷದೊಳಗೆ ಒಮ್ಮತದ ನಿರ್ಧಾರ ಆಗಿದ್ದನ್ನು ತಿಳಿಸಿದ್ದಾರೆ.

"ಮ್ಯಾಗ್ಸೆಸೇ ಪ್ರಶಸ್ತಿ ಸಮಿತಿಯಿಂದ ನನಗೆ ಪತ್ರ ಬಂದಿತು. ಸಿಪಿಐಎಂ ಕೇಂದ್ರೀಯ ಸಮಿತಿಯ ಒಬ್ಬ ಸದಸ್ಯೆಯಾಗಿ ನಾನು ಪಕ್ಷದ ಜೊತೆ ಈ ಬಗ್ಗೆ ಚರ್ಚೆ ನಡೆಸಿದೆ. ಈ ಪ್ರಶಸ್ತಿಯನ್ನು ಸ್ವೀಕರಿಸಬಾರದು ಎಂದು ಒಮ್ಮತವಾಗಿ ತೀರ್ಮಾನ ಮಾಡಿದೆವು" ಎಂದು ಕೆ ಕೆ ಶೈಲಜಾ ಹೇಳಿದ್ದಾರೆ.

Know Why Kerala Former Minister KK Shailaja Rejected Ramon Magsaysay Award

ಏನಿದು ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ?
ರಾಮೋನ್ ಮ್ಯಾಗ್ಸೆಸೆ ಅವರು ಫಿಲಿಪ್ಪೈನ್ಸ್ ದೇಶದ ಏಳನೇ ಅಧ್ಯಕ್ಷರಾಗಿದ್ದರು. ಆ ಹುದ್ದೆಯಲ್ಲಿರುವಾಗಲೇ 1957 ಮಾರ್ಚ್ 17ರಂದು ವಿಮಾನಾಪಘಾತ ದುರಂತದಲ್ಲಿ ಸಾವನ್ನಪ್ಪಿದರು. ಅವರು ಪ್ರಜಾತಂತ್ರ ಆಡಳಿತದ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಆದರ್ಶಕ್ಕೆ ಪ್ರತೀಕವಾಗಿದ್ದರು. ಅವರ ಹೆಸರಿನಲ್ಲಿ 1957 ಏಪ್ರಿಲ್ ತಿಂಗಳಿಂದ ಪ್ರಶಸ್ತಿ ನೀಡಲು ಆರಂಭಿಸಲಾಯಿತು. ಫಿಲಿಪ್ಪೈನ್ಸ್ ಸರಕಾರದ ಜೊತೆ ಸೇರಿ ಅಮೆರಿಕದ ರಾಕ್‌ಫೆಲ್ಲರ್ ಬ್ರದರ್ಸ್ ಫಂಡ್ ಎಂಬ ಸರಕಾರೇತರ ಸಂಸ್ಥೆ ಈ ಪ್ರಶಸ್ತಿಯನ್ನು ನೀಡುತ್ತದೆ.

ಆರು ಪ್ರಮುಖ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಏಷ್ಯನ್ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಸರಕಾರಿ ಸೇವೆ, ಸಾರ್ವಜನಿಕ ಸೇವೆ, ಸಾಮುದಾಯಿಕ ನಾಯಕತ್ವ, ಪತ್ರಿಕೋದ್ಯಮ ಸಾಹಿತ್ಯ ಕ್ರಿಯಾಶೀಲ ಸಂವಹನ ಕಲೆ, ಶಾಂತಿ ಮತ್ತು ಅಂತಾರಾಷ್ಟ್ರೀಯ ಅರಿವು, ಉದಯೋನ್ಮುಖ ನಾಯಕತ್ವ ಹೀಗೆ ಈ ಆರು ವಿಭಾಗಗಳಲ್ಲಿ ಪ್ರಶಸ್ತಿ ಕೊಡಲಾಗುತ್ತದೆ.

ಶೈಲಜಾಗೆ ಯಾಕೆ ಪ್ರಶಸ್ತಿ?
ಸಾರ್ವಜನಿಕ ಸೇವೆ ವಿಭಾಗದಲ್ಲಿ ಕೆಕೆ ಶೈಲಜಾ ಅವರನ್ನು ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕ್ಷಮತೆಯನ್ನು ಹೆಚ್ಚಿಸಿದ್ದು, ಮತ್ತು ಕೇರಳದಲ್ಲಿ ನಿಪಾ ವೈರಸ್ ಮತ್ತು ಕೋವಿಡ್ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಅವರು ಕೈಗೊಂಡ ಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲು ಮುಂದಾಗಲಾಗಿತ್ತು.

ಪ್ರಶಸ್ತಿ ಯಾಕೆ ತಿರಸ್ಕಾರ?
ರಾಮೋನ್ ಮ್ಯಾಗ್ಸೆಸೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಈ ವ್ಯಕ್ತಿ ಕಮ್ಯೂನಿಸ್ಟ್ ವಿರೋಧಿ ಎನ್ನುವ ಕಾರಣಕ್ಕೆ ಪ್ರಶಸ್ತಿ ತಿರಸ್ಕರಿಸಲಾಗಿರುವುದು ತಿಳಿದುಬಂದಿದೆ.

"ರಾಮೋನ್ ಮ್ಯಾಗ್ಸೆಸೆ ಕಮ್ಯೂನಿಸ್ಟ್ ವಿರೋಧಿಯಾಗಿದ್ದರು. ಅವರ ಹೆಸರಿನಲ್ಲಿ ಗೌರವ ಸ್ವೀಕರಿಸಲು ನಮಗೆ ಆಗುವುದಿಲ್ಲ. ಅವರನ್ನು ವೈಯಕ್ತಿಕ ಪರಿಧಿಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆದರೆ, ಪಕ್ಷದಲ್ಲಿ ಯಾವಾಗಲೂ ಸಾಂಘಿಕ ನಾಯಕತ್ವವೇ ಇರುವುದು. ಹಾಗಾಗಿ ನಾವೆಲ್ಲರೂ ಸೇರಿ ಈ ಪ್ರಶಸ್ತಿ ಸ್ವೀಕರಿಸಬಾರದು ಎಂದು ನಿರ್ಧರಿಸಿದೆವು" ಎಂದು ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಹೇಳಿದ್ದಾರೆ.

Know Why Kerala Former Minister KK Shailaja Rejected Ramon Magsaysay Award

ಮಾಜಿ ಸಚಿವೆ ಕೆಕೆ ಶೈಲಜಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಪಕ್ಷದ ಕೇಂದ್ರೀಯ ಸಮಿತಿ ಸದಸ್ಯರಾದ ನನ್ನಂಥವರಿಗೆ ಪಕ್ಷವೇ ಸರ್ವಸ್ವ" ಎಂದು ತಿಳಿಸಿದ್ದಾರೆ. ಹಾಗೆಯೇ, ಪ್ರಶಸ್ತಿಗೆ ತನ್ನನ್ನು ಆರಿಸಿದ್ದರ ಔಚಿತ್ಯವನ್ನು ಅವರು ಪರೋಕ್ಷವಾಗಿ ಸಂದೇಹಿಸಿದ್ಧಾರೆ.

"ಕೇರಳದಲ್ಲಿ ಆರೋಗ್ಯ ವಲಯ ಬಲಿಷ್ಠಗೊಳ್ಳಲು ಸಾಂಘಿಕ ನಾಯಕತ್ವ ಕಾರಣವಾಯಿತೇ ಹೊರತು, ಅದು ವೈಯಕ್ತಿಕವಾಗಿ ಮಾಡಿದ ಸಾಧನೆ ಅಲ್ಲ," ಎಂದ ಅವರು, ರಾಜಕಾರಣಿಗಳಿಗೆ ಮ್ಯಾಗ್ಸೆಸೆ ಪ್ರಶಸ್ತಿ ಕೊಡಲಾಗುವುದಿಲ್ಲ. ತಾನು ರಾಜಕಾರಣಿಯಾದರೂ ಅವರು ಯಾಕೆ ಪ್ರಶಸ್ತಿಗೆ ಆಯ್ಕೆ ಮಾಡಿದರು ಎಂದು ಪ್ರಶ್ನೆ ಮಾಡಿದ್ದಾರೆ.

ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರು
ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಅನೇಕ ಭಾರತೀಯರು ಇದ್ದಾರೆ. ವಿನೋಬಾ ಭಾವೆ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯರು. ಮದರ್ ಥೆರೆಸಾ, ವರ್ಗೀಸ್ ಕುರಿಯನ್, ಜಯಪ್ರಕಾಶ್ ನಾರಾಯಣ್, ಸತ್ಯಜಿತ್ ರೇ, ಎಂಎಸ್ ಸ್ವಾಮಿನಾಥನ್, ಎಂಎಸ್ ಸುಬ್ಬುಲಕ್ಷ್ಮಿ, ಕೆವಿ ಸುಬ್ಬಣ್ಣ, ಕಿರಣ್ ಬೇಡಿ, ಅರವಿಂದ್ ಕೇಜ್ರಿವಾಲ್, ರವೀಶ್ ಕುಮಾರ್ ಈ ಪ್ರಶಸ್ತಿ ಪಡೆದವರಲ್ಲಿ ಇದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Kerala's ex minister and CPIM leader KK Shailaja has rejected Ramon Magsaysay award after consultation with ther party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X