ಸಿಪಿಎಂ ಕಚೇರಿಯಲ್ಲಿ ಅತ್ಯಾಚಾರ: ಕೇರಳ ಮಹಿಳೆ ಆರೋಪ

ತಿರುವನಂತಪುರ, ಮಾರ್ಚ್ 21: ತನ್ನ ನವಜಾತ ಶಿಶುವನ್ನು ಕಳೆದ ವಾರ ರಸ್ತೆ ಬದಿಯಲ್ಲಿ ಬಿಟ್ಟುಹೋಗಿದ್ದ ಯುವತಿಯೊಬ್ಬರು, ಪಾಲಕ್ಕಾಡ್ ಜಿಲ್ಲೆಯ ಸಿಪಿಎಂ ಕಚೇರಿಯಲ್ಲಿ ತನ್ನ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ. ಆದರೆ, ಆಕೆ ನೀಡಿರುವ ದೂರು ಸುಳ್ಳಿನಿಂದ ಕೂಡಿದೆ ಎನ್ನುವುದು ತನಿಖೆಯಿಂದ ಸಾಬೀತಾಗಿದೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ.

ಪಾಲಕ್ಕಾಡ್‌ನ ಚೆರ್ಪುಲಸ್ಸರಿ ಗ್ರಾಮದಲ್ಲಿನ ಸ್ಥಳೀಯ ಸಿಪಿಎಂ ಕಚೇರಿಯಲ್ಲಿ ಕಳೆದ ವರ್ಷದ ಜೂನ್‌ನಲ್ಲಿ ವಿದ್ಯಾರ್ಥಿ ಕಾರ್ಯಕರ್ತನೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ 21 ವರ್ಷದ ಯುವತಿ ಆಸ್ಪತ್ರೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಾಲೇಜು ನಿಯತಕಾಲಿಕೆ ಸಿದ್ಧಪಡಿಸುವ ಸಲುವಾಗಿ ಸಿಪಿಎಂ ಕಚೇರಿಗೆ ತೆರಳಿದ್ದಾಗ ತನ್ನ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎಂದು ದೂರಿದ್ದರು.

kerala woman abandoning he newborn baby alleged rape at cpm office

ಪ್ರಾಥಮಿಕ ತನಿಖೆಯಲ್ಲಿ ಅವರ ಹೇಳಿಕೆಗಳಲ್ಲಿ ಗೊಂದಲಗಳು ಕಂಡುಬಂದಿದ್ದರಿಂದ ಪೊಲೀಸರು ತೀವ್ರ ತನಿಖೆ ನಡೆಸಿದ್ದರು.

'ಈ ಯುವತಿಗೆ ವಾಟ್ಸಾಪ್ ಅಥವಾ ಫೇಸ್‌ಬುಕ್‌ ಮೂಲಕ ಯುವಕ ಪರಿಚಯವಾಗಿದ್ದ. ಆಕೆ ಇದ್ದ ಬಾಡಿಗೆ ಮನೆಯಲ್ಲಿ ಆತನನ್ನು ಭೇಟಿಯಾಗಿದ್ದ ಆಕೆ ಅಲ್ಲಿಯೇ ಅತ್ಯಾಚಾರಕ್ಕೆ ಒಳಗಾಗಿದ್ದರು. ಈ ಘಟನೆಗೂ ಸಿಪಿಎಂ ಸಮಿತಿ ಕಚೇರಿಗೂ ಸಂಬಂಧವಿಲ್ಲ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಯುವಕ ಸಿಪಿಐ ಸಮಿತಿ ಕಚೇರಿ ಸಮೀಪವೇ ಗ್ಯಾರೇಜ್ ನಡೆಸುತ್ತಿದ್ದಾನೆ. ಆತನಿಗೂ ಸಿಪಿಎಂ ನಂಟು ಇಲ್ಲ. ಯುವತಿಯ ಕುಟುಂಬದವರು ಸಿಪಿಎಂ ನಂಟು ಹೊಂದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಹೆರಿಗೆಯಾಗುವ ಸಮಯದವರೆಗೂ ಗರ್ಭಿಣಿಯಾಗಿದ್ದು ತಿಳಿದೇ ಇರಲಿಲ್ಲ ಎಂದು ಯುವತಿ ಮತ್ತು ಆಕೆಯ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಅಕೆಯ ಹೆರಿಗೆ ಮನೆಯಲ್ಲಿಯೇ ನಡೆದಿತ್ತು. ಬಳಿಕ ಮಗುವನ್ನು ರಸ್ತೆಯ ಪಕ್ಕ ಇರಿಸಿ ಹೋಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+