ಶಬರಿಮಲೆ ಯಾತ್ರಿಕರಿಕೆ ಖುಷಿ ಸುದ್ದಿ: ನಿಯಮ ಸಡಿಲಿಕೆ

ತಿರುವನಂತಪುರಂ, ಡಿಸೆಂಬರ್ 11: ಕೇರಳದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ನಿಯಮಗಳ ಸಡಿಲಿಕೆ ಮಾಡಿದೆ.

ಶಬರಿಮಲೆ ಯಾತ್ರೆಗೆ ವಿಧಿಸಲಾಗಿದ್ದ ನಿರ್ಬಂಧಗಳಲ್ಲಿ ಹೆಚ್ಚಿನ ಸಡಿಲಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ದೇವಸ್ವ ಸಚಿವ ಕೆ ರಾಧಾಕೃಷ್ಣನ್ ಅವರ ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮುಖ್ಯಮಂತ್ರಿ ಕಚೇರಿ ಪ್ರಕಾರ, ಪಂಪಾದಿಂದ ನೀಲಿಮಲೆ, ಅಪಾಚೆ ಮೇಡಂ ಮತ್ತು ಮರಕೂಟಂ ಮೂಲಕ ಶಬರಿಮಲೆಗೆ ಸಂಪ್ರದಾಯಿಕ ಮಾರ್ಗವನ್ನು ಭಕ್ತರಿಗೆ ತೆರೆಯಲು ನಿರ್ಧರಿಸಲಾಗಿದೆ.

Kerala Govt To Reopen Traditional Route To Sabarimala

ನೀಲಿಮಲೆ ಮತ್ತು ಅಪಾಚೆ ಮೇಡುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ, ಸನ್ನಿಧಾನದಲ್ಲಿ ರಾತ್ರಿ ತಂಗಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಕೋವಿಡ್ ಪ್ರೋಟೊಕಾಲ್‌ಗಳಿಗೆ ಅನುಗುಣವಾಗಿ 500 ಕೊಠಡಿಗಳನ್ನು ಸ್ಥಾಪಿಸಲಾಗಿದೆ.

ಪಂಪಾ ನದಿಯಲ್ಲಿ ಸ್ನಾನ ಹಾಗೂ ಬಲಿತರ್ಪಣ ಆಚರಣೆಗಳನ್ನು ಅನುಮತಿಸಲಾಗುವುದು, ಆದರೆ ಪಂಪಾ ನದಿಯಲ್ಲಿನ ನೀರಿನ ಮಟ್ಟವನ್ನು ನಿರ್ಣಯಿಸಿದ ಬಳಿಕ ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ವರದಿ ತಿಳಿಸಿದೆ.

ಕಳೆವ ವರ್ಷ ಶಬಮರಿಮಲೆಗೆ ಹೋಗಲು ಸಾಧ್ಯವಾಗದ ಕಾರಣ ಭಕ್ತರು ಅನ್ಯ ಮಾರ್ಗವನ್ನು ಕಂಡುಕೊಂಡಿದ್ದರು. ಕೋಟೆನಾಡು ಚಿತ್ರದುರ್ಗ ಸುಕ್ಷೇತ್ರದತ್ತ ಭಕ್ತರು ಹೆಜ್ಜೆ ಹಾಕುತ್ತಿದ್ದರು. ಇರುಮುಡಿ ಹೊತ್ತು ಮಾಲಾಧಾರಿಗಳು ಕೋಟೆನಾಡಿಗೆ ಆಗಮಿಸುತ್ತಿದ್ದರು. ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಶಬರಿಮಲೆ ಮಾದರಿಯಲ್ಲಿಯೇ 18 ಮೆಟ್ಟಿಲುಗಳನ್ನು ಏರಿ ದೇವರ ಆಶೀರ್ವಾದ ಪಡೆಯುತ್ತಿದ್ದರು.

ಕೇರಳದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾದ ಹಿನ್ನೆಲೆ ಅಯ್ಯಪ್ಪಸ್ವಾಮಿ ಸನ್ನಿಧಿಗೆ ತೆರಳುವುದಕ್ಕೆ ಮಾರ್ಗ ಓಪನ್ ಆಗಿದೆ. ಪಂಪಾದಿಂದ ನೀಲಿಮಲ ಮಾರ್ಗದಲ್ಲಿ ತೆರಳಲು ಅವಕಾಶ ನೀಡಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಮಾರ್ಗ ಮಧ್ಯೆ ಆರೋಗ್ಯ ತಪಾಸಣೆಗೆ ಕೇಂದ್ರಗಳನ್ನ ತೆರೆಯಲಾಗಿದೆ ಅಂತ ಕೇರಳ ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಓಮಿಕ್ರಾನ್‌ ಭೀತಿಯ ನಡುವೆಯೇ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಪ್ರತಿನಿತ್ಯ ಭೇಟಿ ನೀಡುವ ಭಕ್ತರ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದೆ. ಡಿಸೆಂಬರ್‌ 04ರಂದು ಒಂದೇ ದಿನ 42,354 ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಆನ್‌ಲೈನ್‌ ವರ್ಚುವಲ್ ಬುಕ್ಕಿಂಗ್‌ ಮಾಡಿರುವ ಸುಮಾರು 27, 840 ಭಕ್ತರು ಡಿ.03 ರಂದು ಭೇಟಿ ನೀಡಿದ್ದರು.

ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆಯುವಂತಾಗಲು ರಾಜ್ಯ ಸರಕಾರ ಮತ್ತು ಟ್ರಾವಂಕೂರ್‌ ದೇವಸ್ವಂ ಮಂಡಳಿಯು ಸಾಕಷ್ಟು ಪ್ರಚಾರ ಕಾರ್ಯ ಕೈಗೊಳ್ಳುವಂತೆ ಕೇರಳ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಈ ಋುತುವಿನ ಶಬರಿಮಳೆ ಯಾತ್ರೆಗೆ ಸಂಬಂಧಪಟ್ಟ ವಿವಿಧ ದೂರುಗಳನ್ನು ವಿಚಾರಣೆ ಮಾಡುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಅನಿಲ್‌ ಕೆ. ನರೇಂದ್ರನ್‌ ಮತ್ತು ಪಿಜಿ ಅಜಿತ್‌ಕುಮಾರ್‌ ನೇತೃತ್ವದ ವಿಭಾಗೀಯ ಪೀಠವು ಈ ಆ ದೇಶ ನೀಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಭಕ್ತರು ಸನ್ನಿಧಾನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ವರ್ಚುವಲ್ ಕ್ಯೂ ಸಿಸ್ಟಮ್‌ನಲ್ಲಿ ಗುಂಪು ಬುಕ್ಕಿಂಗ್‌ಗೆ ಅವಕಾಶವಿಲ್ಲವೆನ್ನುವ ದೂರಿನ ವಿಚಾರಣೆ ಸಂದರ್ಭದಲ್ಲಿ, ''ಹಲವು ಟ್ರಾವೆಲ್‌ ಏಜೆನ್ಸಿಗಳು ಗ್ರೂಪ್‌ ಬುಕ್ಕಿಂಗ್‌ ವ್ಯವಸ್ಥೆಯನ್ನು ದುರುಪಯೋಗ ಮಾಡುತ್ತಿರುವುದು ಗಮನಕ್ಕೆ ಬಂದಿರುವ ಕಾರಣ ಈ ಋುತುವಿನಲ್ಲಿ ಈ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ವಿವಿಧ ರಾಜ್ಯಗಳಿಂದ ಆನ್‌ಲೈನ್‌ ಬುಕ್ಕಿಂಗ್‌ ಮಾಡಿಕೊಂಡು ಗುಂಪುಗಳಾಗಿ ಬರುವ ಭಕ್ತರನ್ನು ಒಟ್ಟಾಗಿ ದರ್ಶನಕ್ಕೆ ಬಿಡಲಾಗುತ್ತಿದೆ'' ಎಂದು ಕೋರ್ಟ್‌ಗೆ ಸರಕಾರ ಮಾಹಿತಿ ನೀಡಿದೆ.

ರಾಜ್ಯ ಸರಕಾರ ನೀಡಿದ ಮಾಹಿತಿ ಪ್ರಕಾರ, ಪ್ರತಿದಿನ ಸರಾಸರಿ 45 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಪ್ರತಿದಿನ ಆನ್‌ಲೈನ್‌ ಬುಕ್ಕಿಂಗ್‌ ಮಾಡಿದ 40 ಸಾವಿರ ಭಕ್ತರಿಗೆ ಮತ್ತು ಆಫ್‌ಲೈನ್‌ನಲ್ಲಿ ಸ್ಲಾಟ್‌ ಬುಕ್ಕಿಂಗ್‌ ಮಾಡಿದ 5 ಸಾವಿರ ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ಈಗಾಗಲೇ ನವೆಂಬರ್‌ 09ರಿಂದ ಮಂಡಲ ಮಕರವಿಲ್ಲಕ್ಕು ಅವಧಿಯವರೆಗಿನ ಆನ್‌ಲೈನ್‌ ಸ್ಲಾಟ್‌ಗಳು ಬಹುತೇಕ ಬುಕ್ಕಿಂಗ್‌ ಆಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+