ಕುಡಿಯುವ ನೀರಿನ ವಿಚಾರದಲ್ಲಿ ಕೇರಳ ಸರ್ಕಾರದ ದಿಟ್ಟ ನಿರ್ಧಾರ

ತಿರುವನಂತಪುರಂ, ಫೆಬ್ರವರಿ 13 : ಕೇರಳ ಸರ್ಕಾರ ಕುಡಿಯುವ ನೀರಿನ ಬಾಟಲ್‌ಗಳನ್ನು ಅಗತ್ಯ ಸೇವೆಗಳು ಎಂದು ಘೋಷಣೆ ಮಾಡಿದೆ. ಮಿನರಲ್ ವಾಟರ್ ದರದಲ್ಲಿ ಇಳಿಕೆ ಮಾಡಿದ್ದು, ಲೀಟರ್ ನೀರಿನ ದರವನ್ನು 13 ರೂ. ಎಂದು ನಿಗದಿ ಮಾಡಲು ಒಪ್ಪಿಗೆ ನೀಡಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಲ್ಲಿಕೆ ಮಾಡಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಂಕಿತ ಹಾಕಿದ್ದಾರೆ. ನೀರಿನ ಬಾಟಲ್ ಮೇಲೆ ದರವನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂದು ಸೂಚನೆ ನೀಡಲಾಗಿದ್ದು, ಅಧಿಕೃತ ಆದೇಶ ಶೀಘ್ರದಲ್ಲಿಯೇ ಹೊರಬೀಳಲಿದೆ.

ಕೇರಳ ರಾಜ್ಯದಲ್ಲಿ ಪ್ರಸ್ತುತ ಒಂದು ಲೀಟರ್ ನೀರಿನ ಬಾಟಲ್‌ಗಳನ್ನು 20 ರೂ. ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಈಗ ಸರ್ಕಾರ ನೀರಿನ ಬಾಟಲ್‌ಗಳಿಗೆ ಬಿಎಸ್‌ಐ ಮಾನದಂಡವನ್ನು ನಿಗದಿ ಮಾಡಿದ್ದು, ಅಕ್ರಮ ಬಾಟಲ್ ತಯಾರಿಕಾ ಘಟಕಗಳನ್ನು ತಡೆಯಲು ಮುಂದಾಗಿದೆ.

Drinking Water

2018ರಲ್ಲಿ ಸರ್ಕಾರ ನೀರನ ಬಾಟಲ್ ಉತ್ಪಾದಕರ ಜೊತೆ ಸಭೆ ನಡೆಸಿತ್ತು. ನೀರಿನ ಬಾಟಲ್ ದರವನ್ನು 12 ರೂ. ನಿಗದಿ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಅದು ಜಾರಿಗೆ ಬಂದಿರಲಿಲ್ಲ. ಈಗ 13 ರೂ. ದರವನ್ನು ನಿಗದಿ ಮಾಡಿದ್ದು, ಬಾಟಲ್‌ನ ಕ್ಯಾಪ್‌ ಮೇಲೆ ಕಡ್ಡಾಯವಾಗಿ ಮುದ್ರಿಸಬೇಕು ಎಂದು ಹೇಳಿದೆ.

ಕೇರಳದ ವಾಟರ್ ಬಾಟಲ್ ಉತ್ಪಾದಕರ ಸಂಘ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿದೆ. 2012ರಲ್ಲಿ ವಿವಿಧ ಕಂಪನಿಗಳು 20 ರೂ.ಗೆ ದರವನ್ನು ಏರಿಕೆ ಮಾಡಿದ್ದವು. ಸರ್ಕಾರ 13 ರೂ. ನಿಗದಿ ಮಾಡಿದರೆ ಆಕ್ಷೇಪವಿಲ್ಲ ಎಂದು ಹೇಳಿದೆ.

ಕೇರಳದಲ್ಲಿ ಸುಮಾರು 200 ಬಾಟಲ್ ಉತ್ಪಾದನಾ ಘಟಕಗಳಿಗೆ ಎಂದು ಅಂದಾಜಿಸಲಾಗಿದೆ. ಆದರೆ, ಅಕ್ರಮ ಘಟಕಗಳು ಸೇರಿ 300 ರಿಂದ 500 ಇರಬಹುದು ಎಂಬುದು ಲೆಕ್ಕಾಚಾರವಾಗಿದೆ. ಬಿಎಸ್‌ಐ ಮಾನದಂಡ ಪಾಲಿಸದ ಘಟಕಗಳಿಗೆ ಬೀಗ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+