ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಗೆ

|
Google Oneindia Kannada News

ತಿರುವನಂತಪುರಂ, ಜನವರಿ 01: "ಒಂದು ಬಾರಿ ಬಳಸಿ ಬಿಸಾಡುವಂಥ ಹಾನಿಕಾರಕ ಪ್ಲಾಸ್ಟಿಕ್ ಅನ್ನು ಬಳಸಬೇಡಿ" ಎಂದು ಪ್ರಧಾನಿ ಮೋದಿ ಕರೆ ನೀಡಿದ ಬಳಿಕ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಗೆ ಬಂದಿದೆ. ಗುರುವಾರದಿಂದ ಕೇರಳ ರಾಜ್ಯದಲ್ಲೂ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲಾಗಿದೆ

ಬೆಂಗಳೂರಿನಲ್ಲಿ ಸೆಪ್ಟೆಂಬರ್ 1 ರಿಂದ ಯಾವುದೇ ಅಂಗಡಿಗಳಲ್ಲಿ ಗ್ರಾಹಕರಿಗೆ ಸಾಮಾಗ್ರಿಗಳನ್ನು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳಲ್ಲಿ ಕೊಡುವಂತಿಲ್ಲ. ಜನರು ಸಹ ಕೈಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಹಿಡಿದು ಓಡಾಡುವಂತಿಲ್ಲ.ಪ್ಲಾಸ್ಟಿಕ್ ಬಳಕೆ ಮಾಡಿದರೆ ಮೊದಲ ಬಾರಿಗೆ 500 ರೂ., 2 ನೇ ಬಾರಿಗೆ 5000 ರೂ. ದಂಡ ವಿಧಿಸಲಾಗುತ್ತದೆ. ಪ್ಲಾಸ್ಟಿಕ್ ಉತ್ಪಾದಕರು ಮತ್ತು ಮಾರಾಟ ಮಾಡುವವರಿಗೂ ಈ ಕುರಿತು ಈಗಾಗಲೇ ಸೂಚನೆ ನೀಡಲಾಗಿದೆ.

ಪ್ಲಾಸ್ಟಿಕ್ ಬಳಕೆ ನಿಷೇಧ, ಮೋದಿ ಕರೆಗೆ ಓಗೊಟ್ಟ ಆಂಧ್ರದ ರೈತರುಪ್ಲಾಸ್ಟಿಕ್ ಬಳಕೆ ನಿಷೇಧ, ಮೋದಿ ಕರೆಗೆ ಓಗೊಟ್ಟ ಆಂಧ್ರದ ರೈತರು

ಗಡಿಭಾಗದ ಬಂಡೀಪುರ ಮಾತ್ರವಲ್ಲ, ಪಕ್ಕದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ನೀರಿನ ಬಾಟಲಿ ಬಳಕೆಯನ್ನು ನಿಷೇಧ ಹೇರಲಾಗಿದೆ. ಕೆಲವರು ರಸ್ತೆ ಬದಿ ವಾಹನ ನಿಲ್ಲಿಸಿ ಮದ್ಯಪಾನ ಮಾಡಿ ಬಾಟಲಿಗಳನ್ನು ಅಲ್ಲೇ ಬಿಸಾಡಿ ಹೋಗುತ್ತಾರೆ. ಇವುಗಳು ಪ್ರಾಣಿಗಳಿಗೆ ಕಂಟಕವಾಗುತ್ತಿವೆ. ಬಂಡೀಪುರ ಅರಣ್ಯ ವ್ಯಾಪ್ತಿಯೊಂದರಲ್ಲೇ ತಿಂಗಳಿಗೆ ಒಂದು ಟ್ರಾಕ್ಟರ್‌ನಷ್ಟು ಕಸ ಸಂಗ್ರಹವಾಗುತ್ತಿದೆ ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ.

Kerala govt bans single use plastic from Jan 01

40 ಮೈಕ್ರಾನ್‌ಗಿಂತಲೂ ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು ಇದನ್ನು ಬಳಸುವುದು ನಿಷೇಧಿಸಲಾಗಿದೆ, ಥರ್ಮೋಕೋಲ್, ಪ್ಲಾಸ್ಟಿಕ್ ಕಪ್, ಫ್ಯಾನ್ಸಿ ಸಾಮಾಗ್ರಿ, ಆಹಾರ ವಿತರಣೆ, ಪ್ಯಾಕೇಜಿಂಗ್, ಫಾರ್ಮಾ, ಕೃಷಿ ಉತ್ಪನ್ನ, ಪೆಟ್ ಬಾಟಲ್, ಪ್ಲಾಸ್ಟಿಕ್ ತ್ಯಾಜ್ಯ, ಪಿವಿಸಿ ಫ್ಲೆಕ್ಸ್ ಎಲ್ಲವನ್ನು ನಿಷೇಧಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಬಂಡೀಪುರದಲ್ಲಿ ಪ್ಲಾಸ್ಟಿಕ್ ಹಾವಳಿ ತಪ್ಪಿಸಲು ಹೊಸ ಯೋಜನೆಬಂಡೀಪುರದಲ್ಲಿ ಪ್ಲಾಸ್ಟಿಕ್ ಹಾವಳಿ ತಪ್ಪಿಸಲು ಹೊಸ ಯೋಜನೆ

ರೀಟೇಲ್ ಡೀಲರ್, ಹೋಲ್ ಸೇಲ್, ಉತ್ಪಾದಕರು ಪ್ಲಾಸ್ಟಿಕ್ ನಿಷೇಧ ನೀತಿ ಮೀರಿದರೆ 10,000 ರು ದಂಡ ವಿಧಿಸಲಾಗುತ್ತಿದೆ. ಮಿತಿ ಮೀರಿದರೆ 25, 000 ರು ದಂಡ ಹಾಕಲಾಗುತ್ತದೆ.

ಹಾನಿಕಾರಕ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ಮೋದಿ ಸಮರಹಾನಿಕಾರಕ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ಮೋದಿ ಸಮರ

ಸದ್ಯದ ಮಾಹಿತಿಯಂತೆ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಹಾಗೂ ಮಧ್ಯಪ್ರದೇಶ ಸೇರಿದಂತೆ 18 ರಾಜ್ಯಗಳಲ್ಲಿ ಪ್ಲಾಸ್ಟಿಕ್ ನಿಷೇಧ ಹೇರಲಾಗಿದೆ.

English summary
The Kerala government on Thursday decided to ban single use plastic products from January one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X