ಆಗಸದಲ್ಲಿ ಅತಿ ಸನಿಹಕ್ಕೆ ಬರುತ್ತಿವೆ ಎರಡು ಗ್ರಹಗಳು :ಇಂದು ಬರಿಗಣ್ಣಿಗೇ ಕಾಣಿಸುತ್ತಿದೆ ಈ ಅಪರೂಪದ ದೃಶ್ಯ!

ಸಂಜೆಯಾದ ಮೇಲೆ ಹೊರಗೆ ಬಂದು ಆಕಾಶದತ್ತ ಅದೆಷ್ಟು ಮಂದಿ ಕಣ್ಣು ಹಾಯಿಸುತ್ತಾರೆ.ಆದರೆ, ಇಂದು ರಾತ್ರಿ ಸೂರ್ಯಾಸ್ತದ ನಂತರ ತಲೆ ಎತ್ತಿ ಆಕಾಶವನ್ನ ನೋಡಲು ಒಂದು ಕಾರಣವಿದೆ. ಎರಡು ಪ್ರಕಾಶಮಾನವಾದ ಗ್ರಹಗಳಾದ ಶುಕ್ರ ಮತ್ತು ಗುರುಗಳು ಸಂಜೆ ಆಕಾಶದಲ್ಲಿ ಭೂಮಿಗೆ ಅಸಾಮಾನ್ಯವಾಗಿ ಹತ್ತಿರದಲ್ಲಿ ಗೋಚರಿಸುತ್ತವೆ. ಇದು ಜೂನ್ ತಿಂಗಳಲ್ಲಿ ಗೋಚರಿಸುತ್ತಿರುವ ನಭೋಮಂಡಲದ ಅತಿದೊಡ್ಡ ಕೌತುಕಗಳಲ್ಲಿ ಒಂದಾಗಲಿದೆ. ಬರಿಗಣ್ಣಿನಿಂದಲೇ ಈ ಸೌರ ಕೌತುಕವನ್ನು ವೀಕ್ಷಿಸಬಹುದು ಎನ್ನುವುದು ಇನ್ನೊಂದು ವಿಶೇಷ.

ಇನ್ನು ಇನ್ನು ವೀಕ್ಷಿಸಲು ನಿಮಗೆ ಯಾವುದೇ ಖಗೋಳಶಾಸ್ತ್ರದ ಅನುಭವದ ಅಗತ್ಯವಿಲ್ಲ. ಆಕಾಶವು ಸ್ಪಷ್ಟವಾಗಿದ್ದರೆ, ಈ ಗ್ರಹಗಳನ್ನು ಗುರುತಿಸುವುದು ಸುಲಭವಾಗುತ್ತದೆ.

Venus and Jupiter Conjunction 2026

ಅಕ್ಕಪಕ್ಕದಲ್ಲಿ ಕಾಣಿಸಿಕೊಳ್ಳಲಿವೆ ಶುಕ್ರ ಮತ್ತು ಗುರು ಗ್ರಹಗಳು:

ನ್ಯಾಷನಲ್ ಜಿಯಾಗ್ರಫಿಕ್ ವರದಿ ಮಾಡಿದಂತೆ, ಜೂನ್ 8, ಮತ್ತು ಜೂನ್ 9 ರಂದು ಶುಕ್ರ ಮತ್ತು ಗುರು ಗ್ರಹಗಳು ಸಂಜೆ ಆಕಾಶದಲ್ಲಿ ಅಸಾಮಾನ್ಯವಾಗಿ ಪರಸ್ಪರ ಹತ್ತಿರದಲ್ಲಿ ಕಾಣಿಸಿಕೊಳ್ಳುತ್ತವೆ. ಸೂರ್ಯಾಸ್ತದ ನಂತರ ಗೋಚರಿಸುವ ಅತ್ಯಂತ ಪ್ರಕಾಶಮಾನವಾದ ಗ್ರಹ ಶುಕ್ರ. ಅದರ ಹೊಳಪಿನಿಂದಾಗಿ ಗುರುವನ್ನು ಗುರುತಿಸುವುದು ಸುಲಭವಾಗುತ್ತದೆ. ಒಟ್ಟಾರೆ ಹೇಳುವುದಾದರೆ ಗುರು ಮತ್ತು ಶುಕ್ರರು ಸೇರಿ ಈ ತಿಂಗಳು ಆಕಾಶದಲ್ಲಿ ಅತ್ಯಂತ ಆಕರ್ಷಕ ದೃಶ್ಯಗಳಲ್ಲಿ ಒಂದನ್ನು ಸೃಷ್ಟಿಸುತ್ತಾರೆ.

ಬುಧಾದಿತ್ಯ ಯೋಗದಿಂದ ಈ ರಾಶಿಯವರಿಗೆ ಸಿರಿವಂತರಾಗುವ ಭಾಗ್ಯ: ಸ್ವಂತ ಮನೆ, ಉನ್ನತ ಸ್ಥಾನಮಾನದ ಗೌರವ
ಬುಧಾದಿತ್ಯ ಯೋಗದಿಂದ ಈ ರಾಶಿಯವರಿಗೆ ಸಿರಿವಂತರಾಗುವ ಭಾಗ್ಯ: ಸ್ವಂತ ಮನೆ, ಉನ್ನತ ಸ್ಥಾನಮಾನದ ಗೌರವ

ಮಿಥುನ ರಾಶಿಯನ್ನು ಗುರುತಿಸುವ ಅವಕಾಶ:

ಗುರು ಶುಕ್ರರ ಈ ಸಂಯೋಗವು ದ್ವಾದಶ ರಾಶಿಗಳಲ್ಲಿ ಒಂದಾದ ಮಿಥುನ ರಾಶಿಯನ್ನು ಪತ್ತೆಹಚ್ಚಲು ಕೂಡಾ ಸಹಾಯ ಮಾಡುತ್ತದೆ. ಶುಕ್ರ ಮತ್ತು ಗುರು ಗ್ರಹಗಳು ಮಿಥುನ ರಾಶಿಯ ಅವಳಿ ನಕ್ಷತ್ರಗಳಾದ ಪೊಲಕ್ಸ್ ಮತ್ತು ಕ್ಯಾಸ್ಟರ್‌ಗಳ ಹತ್ತಿರ ಕಾಣಿಸಿಕೊಳ್ಳುತ್ತವೆ. ಇವು ನಗರ ಪ್ರದೇಶಗಳಿಂದಲೂ ಹೆಚ್ಚಾಗಿ ಗೋಚರಿಸುತ್ತವೆ. ನಿನ್ನೆ ರಾತ್ರಿ ಈ ಕೌತುಕವನ್ನು ವೀಕ್ಷಿಸಲು ಸಾಧ್ಯವಾಗದವರಿಗೆ ಈ ಅದ್ಬುತ ದೃಶ್ಯವನ್ನು ನೋಡಲು ಇಂದು ಇನ್ನೊಂದು ಅವಕಾಶವಿದೆ.

ಜೂನ್‌ 11ರಂದು ಕಾಣಿಸಿಕೊಳ್ಳುತ್ತಾನೆ ಬುಧ:

ಇನ್ನು ಈ ತಿಂಗಳ ನಭೋ ಕೌತುಕ ಇಂದಿಗೇ ಮುಗಿಯುವುದಿಲ್ಲ. ಮುಂದಿನ ದಿನಗಳಲ್ಲಿ ಕೂಡಾ ಸಂಜೆಯಾಗುತ್ತಿರುವಂತಯೇ ಗ್ರಹಗಳು ಪರಸ್ಪರ ಹತ್ತಿರ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಜೂನ್ 11, 2026 ರಿಂದ ಬುಧ ಕೂಡಾ ಈ ಗ್ರಹಗಳ ಮೆರವಣಿಗೆಯ ಸಾಲಿಗೆ ಸೇರಿಕೊಳ್ಳುತ್ತದೆ. ಈ ಸಮಯದಲ್ಲಿ ಗುರು ಶುಕ್ರರ ಜೋಡಿಯ ಕೆಳಗೆ ನೋಡಿದರೆ ಮತ್ತೊಂದು ಚಿಕ್ಕ ಗ್ರಹವನ್ನು ಗುರುತಿಸಲು ಸಾಧ್ಯವಾಗಬಹುದು. ಅದುವೇ ಬುಧ. ಜೂನ್ 15, 2026 ರವರೆಗೆ, ಈ ಮೂರು ಗ್ರಹಗಳು ಆಕಾಶದಲ್ಲಿ ಒಂದಕ್ಕೊಂದು ಬಹಳ ಹತ್ತಿರದಲ್ಲಿ ಗೋಚರಿಸುತ್ತವೆ.

ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ; ಹಣ, ಮನೆ, ಪದೋನ್ನತಿ ಯೋಗ
ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ; ಹಣ, ಮನೆ, ಪದೋನ್ನತಿ ಯೋಗ

ಜೂನ್ 11 ರ ನಂತರ, ಬುಧ ಗ್ರಹದ ಸೇರ್ಪಡೆಯೊಂದಿಗೆ, ಪ್ರತಿದಿನ ಸಂಜೆ ಸೂರ್ಯಾಸ್ತದ ನಂತರ ಮೂರು ಗ್ರಹಗಳ ಮೆರವಣಿಗೆ ಗೋಚರಿಸುತ್ತದೆ. ಈ ಘಟನೆಯು ಖಗೋಳ ಉತ್ಸಾಹಿಗಳಿಗೆ ಅದ್ಭುತ ಅವಕಾಶವಾಗಿದೆ. ಏಕೆಂದರೆ ಇಲ್ಲಿ ಈ ಮೂರೂ ಗ್ರಹಗಳನ್ನು ಬಹಳ ಹತ್ತಿರದಿಂದ ಬರಿಗಣ್ಣಿನಿಂದಲೇ ನೋಡುವುದು ಸಾಧ್ಯವಾಗುತ್ತದೆ.

ಯಾವಾಗ ಮತ್ತು ಎಲ್ಲಿ ನೋಡಬೇಕು?

ಸೂರ್ಯ ಮುಳುಗಿದ ನಂತರ ಈ ಗ್ರಹಗಳು ಸುಮಾರು ಎರಡರಿಂದ ಎರಡೂವರೆ ಗಂಟೆಗಳ ಕಾಲ ಗೋಚರಿಸುತ್ತವೆ. ಎರಡೂ ಅಸಾಧಾರಣವಾಗಿ ಪ್ರಕಾಶಮಾನವಾಗಿರುವುದರಿಂದ, ಆಕಾಶವು ಸಂಪೂರ್ಣವಾಗಿ ಕತ್ತಲೆಯಾಗುವ ಮೊದಲೇ ಅವು ಗೋಚರಿಸಬಹುದು.

ಭಾರತದಲ್ಲಿ, ಈ ದೃಶ್ಯವು ಜೂನ್ 9 ರ ರಾತ್ರಿಯಿಂದ ಕೆಲವು ಪ್ರದೇಶಗಳಲ್ಲಿ ಗೋಚರಿಸುತ್ತದೆ. ಈ ದೃಶ್ಯವು ಪಶ್ಚಿಮ ಆಕಾಶದಲ್ಲಿ ಗೋಚರಿಸುತ್ತದೆ. ಆದರೆ ನೆನಪಿರಲಿ ಆಕಾಶವು ಸ್ಪಷ್ಟವಾಗಿದ್ದಾಗ ಮಾತ್ರ ಈ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಬಹುದು.

ಈ ದೇಶಗಳಲ್ಲಿಯೂ ಕಂಡುಬರುತ್ತದೆ:

ಈ ಆಕಾಶ ಘಟನೆಯು ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಮೆರಿಕದ ಹೆಚ್ಚಿನ ಭಾಗಗಳಲ್ಲಿ ಗೋಚರಿಸುತ್ತದೆ. ಎರಡೂ ಗ್ರಹಗಳು ಅತ್ಯಂತ ಪ್ರಕಾಶಮಾನವಾಗಿರುವುದರಿಂದ, ಅವು ರಾತ್ರಿ ಮತ್ತು ಬೆಳಗಿನ ಆಕಾಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+