2,200 ವರ್ಷ ಹಳೆಯ ವಿಶಾಲ ಭೂಗತ ಅರಮನೆ ಪತ್ತೆ:ರಕ್ಷಣೆಗಿದೆ ಕಲ್ಲಿನ ಯೋಧರ ಸೈನ್ಯ!ಒಳನುಗ್ಗುವ ಧೈರ್ಯ ಯಾರಿಗೂ ಇಲ್ಲ

ಎರಡು ಸಹಸ್ರಮಾನಗಳಿಗೂ ಹೆಚ್ಚು ಕಾಲ ಮುಚ್ಚಿಹೋಗಿದ್ದ, ಸಂಪತ್ತಿನಿಂದ ತುಂಬಿರುವ ಭೂಗತ ಅರಮನೆಯೊಂದು ಇದೀಗ ಪತ್ತೆಯಾಗಿದೆ. ಈ ಅರಮನೆ ಸುತ್ತಲೂ ಕಾವಲಿಗೆ ಕಲ್ಲಿನ ಯೋಧರ ಸೈನ್ಯವಿದೆ. 8,000 ಕ್ಕೂ ಹೆಚ್ಚು ಅನನ್ಯ ಸೈನಿಕರು ಇಲ್ಲಿಗೆ ಕಾವಲು ಕಾಯುತ್ತಿದ್ದಾರೆ. ಈ ಅರಮನೆ ಒಳಗೆ ಕಾಲಿಡುವ ಧೈರ್ಯವನ್ನು ಯಾರೂ ಮಾಡುತ್ತಿಲ್ಲ. ಇಲ್ಲಿ ಕೇಳಿ ಬರುವ ಪಿಸುಮಾತುಗಳು, ಹರಿಯುವ ವಿಷಕಾರಿ ಪಾದರಸದ ನದಿಗಳು, ಯಾರೂ ತನ್ನ ಬಳಿಗೆ ಬಾರದಂತೆ ತಡೆಯುತ್ತದೆ. ಈ ಅರಮನೆ ತನ್ನೊಳಗೆ ಅನೇಕ ಅದ್ಭುತಗಳನ್ನು ಬಚ್ಚಿಟ್ಟುಕೊಂಡಿದೆ. ಪುರಾತತ್ತ್ವ ಶಾಸ್ತ್ರದಲ್ಲಿನ ಸಂರಕ್ಷಣೆ ಮತ್ತು ಕುತೂಹಲದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುವ ಈ ಅರಮನೆ ನಿಜಕ್ಕೂ ಒಂದು ಬೆರಗುಗೊಳಿಸುವ ರಹಸ್ಯ.

ಅಸಲಿಗೆ ಇದು ಇದು ಚೀನಾದ ಮೊದಲ ಚಕ್ರವರ್ತಿ ಕಿನ್ ಶಿ ಹುವಾಂಗ್ ಅವರ ಸಮಾಧಿಯಾಗಿದೆ. 1974 ರಲ್ಲಿ ಕ್ಸಿಯಾನ್ ಬಳಿ ರೈತರು ಬಾವಿಯನ್ನು ತೋಡುವಾಗ ಈ ಸಮಾಧಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಸ್ಥಳವು ಪ್ರಸಿದ್ಧ ಟೆರಾಕೋಟಾ ಸೈನ್ಯದ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಿದೆ. ಸಾವಿರಾರು ಜೀವ ಗಾತ್ರದ ಮಣ್ಣಿನ ಸೈನಿಕರು ಇಲ್ಲಿ ಯುದ್ಧಕ್ಕೆ ಸಿದ್ಧರಾಗಿ ನಿಂತಿರುವುದು ಗೋಚರಿಸಿದೆ. ಈ ಅದ್ಭುತ ಸಂಶೋಧನೆಯ ಹೊರತಾಗಿಯೂ, ಪುರಾತತ್ತ್ವಜ್ಞರು ಈ ಸಮಾಧಿಯನ್ನು ಒಳಗಿನಿಂದ ಭೇದಿಸಿಲ್ಲ.

Underground Palace Discovered

ಸಮಾಧಿಯಲ್ಲಿ ಮಾರಕ ಬಲೆ ಮತ್ತು ಪಾದರಸ ನದಿ:

ಪ್ರಾಚೀನ ಗ್ರಂಥಗಳು ಈ ಸಮಾಧಿಯ ರಕ್ಷಣೆಯ ಬಗೆಗಿನ ಒಂದು ಚಿತ್ರಣವನ್ನು ನೀಡುತ್ತದೆ. ಅದರ ಪ್ರಕಾರ ಸಮಾಧಿಯ ಒಳನುಗ್ಗುವವರ ಮೇಲೆ ಗುಂಡು ಹಾರಿಸಲು ಅಡ್ಡಬಿಲ್ಲುಗಳನ್ನು ಸಜ್ಜುಗೊಳಿಸಲಾಗಿದೆ. ಯಾಂಗ್ಟ್ಜೆ ಮತ್ತು ಹಳದಿ ನದಿಯಂತಹ ಚೀನಾದ ದೊಡ್ಡ ನದಿಗಳನ್ನು ಅನುಕರಿಸಲು ಇಲ್ಲಿ ಪಾದರಸವನ್ನು ಯಾಂತ್ರಿಕವಾಗಿ ಬಳಸಲಾಗಿದೆ. ಸಮಾಧಿಯನ್ನು ಪ್ರವೇಶಿಸುವ ಯಾರ ಮೇಲೂ ಗುಂಡು ಹಾರಿಸಲು ಪ್ರಾಥಮಿಕವಾಗಿ ಅಡ್ಡಬಿಲ್ಲುಗಳು ಮತ್ತು ಬಾಣಗಳನ್ನು ಸಿದ್ದವಾಗಿಡಲಾಗಿದೆ. ನೂರು ನದಿಗಳನ್ನು ಅನುಕರಿಸಲು ಪಾದರಸವನ್ನು ಬಳಸಲಾಗಿದೆ.ಸಿಮಾ ಕಿಯಾನ್ ತನ್ನ ರೆಕಾರ್ಡ್ಸ್ ಆಫ್ ದಿ ಗ್ರ್ಯಾಂಡ್ ಹಿಸ್ಟೋರಿಯನ್‌ನಲ್ಲಿ ಈ ಎಲ್ಲಾ ವಿಚಾರಗಳನ್ನು ಉಲ್ಲೆಖಿಸಿದ್ದಾರೆ. ಇದನ್ನು ಸಮಾಧಿಯ ನಿರ್ಮಾಣದ ಐತಿಹಾಸಿಕ ದಾಖಲೆಗಳಲ್ಲಿಯೂ ಉಲ್ಲೇಖಿಸಲಾಗಿದೆ.

ಮಾವಿನ ವಸ್ತುಸಂಗ್ರಹಾಲಯಗಳಿಂದ ಮಾವಿನ ಹಳ್ಳಿಗಳವರೆಗೆ, ಮಾವು ಪ್ರಿಯರು ಭೇಟಿ ನೀಡಲೇಬೇಕಾದ ಸ್ಥಳಗಳಿವು
ಮಾವಿನ ವಸ್ತುಸಂಗ್ರಹಾಲಯಗಳಿಂದ ಮಾವಿನ ಹಳ್ಳಿಗಳವರೆಗೆ, ಮಾವು ಪ್ರಿಯರು ಭೇಟಿ ನೀಡಲೇಬೇಕಾದ ಸ್ಥಳಗಳಿವು

ಆಧುನಿಕ ವಿಜ್ಞಾನ ಹೇಳುವುದೇನು ?:

ಸಮಾಧಿ ದಿಬ್ಬದ ಸುತ್ತಲಿನ ಮಣ್ಣಿನಲ್ಲಿ ಅಸಾಧಾರಣವಾಗಿ ಹೆಚ್ಚಿನ ಪಾದರಸದ ಮಟ್ಟವನ್ನು ಕಂಡುಹಿಡಿಯಲಾಗಿದೆ. ಇದು ಸಾಮಾನ್ಯ ಸಾಂದ್ರತೆಯನ್ನು ಮೀರಿದೆ. ನೆಲಕ್ಕೆ ನುಗ್ಗುವ ರಾಡಾರ್ 76 ಮೀಟರ್ ಎತ್ತರದ ಪಿರಮಿಡ್ ಆಕಾರದ ದಿಬ್ಬದ ಕೆಳಗೆ ವಿಶಾಲವಾದ ಕೋಣೆಗಳು ಮತ್ತು ಕುಳಿಗಳಿರುವುದನ್ನು ಬಹಿರಂಗಪಡಿಸಿದೆ. ಇದು ಸಿಮಾ ಕಿಯಾನ್ ವಿವರಿಸಿದ ಸಂಕೀರ್ಣವಾದ "ಭೂಗತ ಅರಮನೆ"ಯನ್ನು ಸೂಚಿಸುತ್ತದೆ. 2,200 ವರ್ಷಗಳ ನಂತರವೂ ಬಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲಾಗುತ್ತದೆ. ಆದರೆ ಈ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸುತ್ತಾರೆ. ಇನ್ನು ಪಾದರಸ ಮಾತ್ರ ಬಾಷ್ಪೀಕರಣದ ಅಪಾಯವನ್ನುಂಟುಮಾಡುತ್ತದೆ. ಈ ಸಮಾಧಿಯನ್ನು ಅಗೆಯಲು ಹೋದರೆ ಅದು ವೇಗವಾಗಿ ಆವಿಯಾಗಬಹುದು. ಈ ಮೂಲಕ ಗಾಳಿಯನ್ನು ವಿಷಪೂರಿತಗೊಳಿಸಬಹುದು.

ಸಮಾಧಿ ತೆರೆದರೆ ಏನಾಗಬಹುದು?:

ಇನ್ನು ಭೂವೈಜ್ಞಾನಿಕ ಸಮೀಕ್ಷೆಗಳ ಸಮಯದಲ್ಲಿ ಸಮಾಧಿಯಿಂದ ಹುಟ್ಟಿಕೊಂಡ ಪಾದರಸದ ಸಾಂದ್ರತೆಯು ಹೆಚ್ಚಾಗಿದೆ ಎಂದು ಶಾಂಕ್ಸಿ ಪ್ರಾಂತೀಯ ಪುರಾತತ್ವ ಸಂಸ್ಥೆಯ ತಂಡದ ಮುಖ್ಯಸ್ಥರಾದ ಪುರಾತತ್ವಶಾಸ್ತ್ರಜ್ಞ ಡುವಾನ್ ಕ್ವಿಂಗ್ಬೊ ದೃಢಪಡಿಸಿದ್ದಾರೆ. "ಕಿನ್ಶಿಹುವಾಂಗ್‌ನ ಸ್ಮಶಾನ ಪ್ರದೇಶದಲ್ಲಿ ಪಾದರಸದ ಸಾಂದ್ರತೆಯು ಪರಿಧಿಯಲ್ಲಿರುವ ಪ್ರದೇಶಕ್ಕಿಂತ ಅಸಾಧಾರಣವಾಗಿ ಹೆಚ್ಚಾಗಿದೆ. ಹಾಗಾಗಿ ಒಂದು ವೇಳೆ ಈ ಸಮಾಧಿಯನ್ನು ತೆರೆದರೆ ಊಹಿಸಲು ಸಾಧ್ಯವಾಗದ ಅಪಾಯಗಳನ್ನು ಎದುರಾಗಬಹುದು ಎನ್ನಲಾಗಿದೆ.

AC, ಫ್ಯಾನ್ ಬೇಡ, ವಿಭಿನ್ನ ವಿನ್ಯಾಸದಿಂದ ಮನೆ ಕೂಲ್ ಕೂಲ್, ಬೆಂಗಳೂರಲ್ಲೊಂದು ವಿಶಿಷ್ಟ ಮನೆ
AC, ಫ್ಯಾನ್ ಬೇಡ, ವಿಭಿನ್ನ ವಿನ್ಯಾಸದಿಂದ ಮನೆ ಕೂಲ್ ಕೂಲ್, ಬೆಂಗಳೂರಲ್ಲೊಂದು ವಿಶಿಷ್ಟ ಮನೆ

ಸಮಾಧಿಯನ್ನು ತೆರೆಯುವುದರಿಂದ ಉಂಟಾಗುವ ಸಂರಕ್ಷಣಾ ಅಪಾಯಗಳು:

1970 ರ ದಶಕದಲ್ಲಿ ಮೊದಲು ಇದು ಗಾಳಿಗೆ ಒಡ್ಡಿಕೊಂಡಾಗ, ಪ್ರಕಾಶಮಾನವಾದ ಬಣ್ಣವನ್ನು ಹೊಂದಿದ್ದ ಯೋಧರ ಬಣ್ಣಗಳು ಕೆಲವೇ ನಿಮಿಷಗಳಲ್ಲಿ ಮಸುಕಾಗಿ ಹೋಗಿತ್ತು. ಇದು ಗಾಳಿಯ ಸಂಪರ್ಕಕ್ಕೆ ಬಂದರೆ ಅದರ ಪ್ರಕಾಶಮಾನವಾದ ವರ್ಣದ್ರವ್ಯಗಳು ಕೆಲವೇ ನಿಮಿಷಗಳಲ್ಲಿ ಮಸುಕಾಗುತ್ತವೆ. ಸೂರ್ಯನ ಬೆಳಕು, ಆಮ್ಲಜನಕ ಮತ್ತು ಆರ್ದ್ರತೆಯು ಅವುಗಳನ್ನು ತಕ್ಷಣವೇ ನಾಶಪಡಿಸಬಹುದು.

ಈ ಸಾಂಸ್ಕೃತಿಕ ಅವಶೇಷಗಳನ್ನು 2,000 ವರ್ಷಗಳಿಗೂ ಹೆಚ್ಚು ಕಾಲ ಸಮಾಧಿಯಲ್ಲಿ ಹೂತಿಡಲಾಗಿದೆ. ಹೀಗಾಗಿ ಇದು ಇನ್ನೂ ಉತ್ತಮ ಸ್ಥಿತಿಯಲ್ಲಿವೆ. ಅವುಗಳನ್ನು ಅನುಚಿತವಾಗಿ ಅಗೆದರೆ ಎಲ್ಲವೂ ಹಾಳಾಗಿ ಹೋಗಬಹುದು. ಅಗೆದ ನಂತರ ಸೈನಿಕ ದಂತವು ಕೇವಲ ಎರಡು ಗಂಟೆಗಳಲ್ಲಿ ಪುಡಿಯಾಗಿ ಮಾರ್ಪಟ್ಟ ಉದಾಹರಣೆಗಳೂ ಇವೆ. ಹಾಗಾಗಿ ಇದನ್ನು ಅಗೆಯದೆ ಹಾಗೆಯೇ ಬಿಡಲು ಸರ್ಕಾರ ಕೂಡಾ ನಿರ್ಧರಿಸಿದೆ.
ಇನ್ನು ಸಮಾಧಿಯ ಬಗ್ಗೆ ಇನ್ನೂ ಅನೇಕ ಸತ್ಯಗಳು ಬಹಿರಂಗವಾಗಿರದ ಕಾರಣ ಅದನ್ನು ತೆರೆಯಲು ಇದು ಸರಿಯಾದ ಸಮಯವಲ್ಲ.

8,000 ಕ್ಕೂ ಹೆಚ್ಚು ಅನನ್ಯ ಸೈನಿಕರು, ರಥಗಳು ಮತ್ತು ಇತ್ತೀಚೆಗೆ ಪತ್ತೆಯಾದ ಪ್ರಿನ್ಸ್ ಗಾವೊನ ಸಂಭಾವ್ಯ ರಾಜಮನೆತನದ ಸಮಾಧಿಯೂ ಅಲ್ಲಿ ಅಡಗಿದೆ. ಈ ಸಮಾಧಿಯ ಪ್ರಾಚೀನ ಒಳಚರಂಡಿ ವ್ಯವಸ್ಥೆಯು ಸಹಸ್ರಮಾನಗಳಿಂದ ಅದರ ವಿಷಯಗಳನ್ನು ಹಾಗೆಯೇ ಉಳಿಸಿಕೊಂಡಿದೆ.

ಈ 2,200 ವರ್ಷಗಳಷ್ಟು ಹಳೆಯದಾದ ಅದ್ಭುತವನ್ನು ತೆರೆಯಲು ನಿರಾಕರಿಸುವುದು ಹೇಡಿತನವಲ್ಲ, ಬದಲಿಗೆ ಬುದ್ಧಿವಂತಿಕೆ. ಕಿನ್ ಶಿ ಹುವಾಂಗ್ ಅವರ ಸಮಾಧಿಯನ್ನು ಮುಚ್ಚಿಡುವ ಮೂಲಕ, ಪುರಾತತ್ತ್ವಜ್ಞರು ಅವರ ಪರಂಪರೆಯನ್ನು ಗೌರವಿಸುತ್ತಾರೆ ಮತ್ತು ಅದರ ರಹಸ್ಯಗಳನ್ನು ನಿಜವಾಗಿಯೂ ಸುರಕ್ಷಿತವಾಗಿ ಅನ್ಲಾಕ್ ಮಾಡುವ ತಂತ್ರಜ್ಞಾನಕ್ಕಾಗಿ ಕಾಯುತ್ತಿದ್ದಾರೆ.ಭವಿಷ್ಯದ ಪೀಳಿಗೆಗಳು ಒಂದು ದಿನ ಇದರಲ್ಲಿ ಯಶಸ್ವಿಯಾಗಬಹುದು. ಆದರೆ ಸದ್ಯಕ್ಕೆ ಚಕ್ರವರ್ತಿಯ ಶಾಶ್ವತ ರಕ್ಷಕರು ಕಾವಲು ಕಾಯುತ್ತಿದ್ದಾರೆ. ಅವರ ಕಾವಲಿನಲ್ಲಿ ಕೆಲವೊಂದು ರಹಸ್ಯಗಳು ರಹಸ್ಯವಾಗಿಯೇ ಉಳಿದಿವೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+