ವರ್ಷಗಳ ಕಾಲ ಲಾಕರ್‌ನಲ್ಲಿಟ್ಟಿದ್ದ ಚಿನ್ನ ಈಗ ಮಾರುಕಟ್ಟೆಗೆ ಮರಳುತ್ತಿರುವುದೇಕೆ?

ಹಣದುಬ್ಬರ ತಗಡೆಗಟ್ಟಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿದ್ದ ಚಿನ್ನವನ್ನು ಮಾರಿದೆ ಎಂಬೊಂದು ಸುಳ್ಳು ಸುದ್ದಿ ಇತ್ತೀಚೆಗೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆದರೆ, ಭಾರತೀಯ ಕುಟುಂಬದಲ್ಲಿ ಚಿನ್ನವಿದ್ದರೆ ಸೇಫ್ ಎನ್ನೋ ಭಾವ ಮುಂಚಿನಿಂದಲೂ ಇದೆ. ಅಷ್ಟಕ್ಕೂ ಕಷ್ಟವೆಂದ್ರೆ ಚಿನ್ನವನ್ನು ಮಾರಲು, ಅಡವಿಡಲು ಭಾರತೀಯ ಮನಸ್ಸುಗಳು ಸಿದ್ಧವಿದ್ಯಾ?

ಚಿನ್ನವನ್ನು ಬಳಸದೇ ಹೋದರೆ ವೇಸ್ಟ್ ಅನ್ನೋ ಮನಸ್ಥಿತಿ ಬದಲು, ಆದಾಗ ಚಿನ್ನವನ್ನ ಕೊಂಡು, ಸಂಕಟದಲ್ಲಿ ನೆರವಾಗಬಲ್ಲದು ಅನ್ನೋ ಭಾವನೆ ಭಾರತೀಯರಲ್ಲಿದೆ. ಅದೇ ಕಾರಣಕ್ಕೆ ಭಾರತೀಯ ಕುಟುಂಬಗಳಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನವಿದೆ. ಮದುವೆ, ಹಬ್ಬ, ಉಡುಗೊರೆ, ವಾರಸುದಾರಿಕೆ ಹಾಗೂ ಹೂಡಿಕೆ-ಎಲ್ಲದರಲ್ಲೂ ಚಿನ್ನ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಪ್ರತಿವರ್ಷ ಹೊಸ ಚಿನ್ನ ಖರೀದಿಸುತ್ತಿರುವ ಭಾರತೀಯರ ಮನೆಗಳಲ್ಲಿ ಈಗಾಗಲೇ ಅಪಾರ ಪ್ರಮಾಣದ ಚಿನ್ನ ಲಾಕರ್‌ಗಳು ಮತ್ತು ಅಲಮಾರ್‌ಗಳಲ್ಲಿ ಬಳಕೆಯಾಗದೇ ಇವೆ.

Gold Stored in Lockers

ತಲೆ ತಲಾಂತರರಿಂದ ಚಿನ್ನ ಅತ್ಯುತ್ತಮ ಹೂಡಿಕೆ ಎಂದೇ ಪರಿಗಣಿತವಾಗಿದೆ. ಅದರಲ್ಲಿಯೂ ಕೆಲವೆಡೆ ಚಿನ್ನಕ್ಕೆ ವಿಶೇಷ ಸ್ಥಾನವಿದ್ದು, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ ಏನಿಲ್ಲವೆಂದರೂ ವರ್ಷಕ್ಕೆ ಇಂತಿಷ್ಟು ಅಂತ ಚಿನ್ನವನ್ನು ಮಾತ್ರ ಕೊಂಡೇ ಕೊಳ್ಳುತ್ತಾರೆ.ಕೇಜಿಗಟ್ಟಲೇ ಅಲ್ಲದಿದ್ದರೂ ತೊಲ ಬಂಗಾರವನ್ನಿಟ್ಟುಕೊಂಡು, ಬಡವರಂತೆ ಫೋಸ್ ಕೊಡೋರನ್ನು ನಾವು ಎಲ್ಲೆಡೆ ನೋಡಿರುತ್ತೇವೆ. ಹಣದುಬ್ಬರದ ವಿರುದ್ಧದ ರಕ್ಷಣೆ ಹಾಗೂ ತುರ್ತು ಸಂದರ್ಭಗಳಲ್ಲಿ ಆರ್ಥಿಕ ಭದ್ರತೆಯ ಸಾಧನವಾಗಿ ಈ ಹಳದಿ ಲೋಹವನ್ನು ಪರಿಗಣಿಸಲಾಗಿದೆ. ಇದರ ಪರಿಣಾಮವಾಗಿ ಅನೇಕ ಕುಟುಂಬಗಳ ಬಳಿ ವರ್ಷಗಳ ಕಾಲ ಬಳಕೆಯಾಗದ ಆಭರಣಗಳು ಸಂಗ್ರಹವೇ ಇದೆ.

ಸೌದಿ ಅರೇಬಿಯಾದಲ್ಲಿ 1,200 ವರ್ಷಗಳ ಹಳೆಯ ಚಿನ್ನದ ಆಭರಣಗಳ ಭಾರಿ ನಿಧಿ ಪತ್ತೆ!
ಸೌದಿ ಅರೇಬಿಯಾದಲ್ಲಿ 1,200 ವರ್ಷಗಳ ಹಳೆಯ ಚಿನ್ನದ ಆಭರಣಗಳ ಭಾರಿ ನಿಧಿ ಪತ್ತೆ!

ಹಳೆಯ ಚಿನ್ನಕ್ಕೆ ಹೊಸ ಮೌಲ್ಯ

ಭಾರತೀಯ ಸಿರಿವಂತ ಕುಟುಂಬಗಳಲ್ಲಿ ಪುರಾತನ, ಹಾಳಾದ ಅಥವಾ ಎಲ್ಲಿಯೋ ಆಗೊಮ್ಮೆ ಈಗೊಮ್ಮೆ ಬಳಸುವ ಚಿನ್ನಾಭರಣಗಳಿವೆ. ಬಳಸೋಲ್ಲ, ಹಳೆಯದ್ದು ಎನ್ನುವ ಕಾರಣಕ್ಕೆ ಚಿನ್ನವೇನೂ ತನ್ನ ಮೌಲ್ಯ ಕಳೆದುಕೊಳ್ಳುವುದಿಲ್ಲ. ಆದರೆ, ಕಷ್ಟವೆಂದರೆ ಆ ಬಳಸದ ಚಿನ್ನವನ್ನು ಮಾರುವವರು ಸಂಖ್ಯೆ ಮುಂಚಿಗಿಂತ ಇದೀಗ ಹೆಚ್ಚಾಗುತ್ತಿದೆ. ಹಣಕ್ಕಾಗಿಯೋ ಅಥವಾ ಹೊಸ ವಿನ್ಯಾಸದ ಆಭರಣಗಳು ಅಥವಾ ಶುದ್ಧೀಕರಿಸಿದ ಚಿನ್ನದ ಉತ್ಪನ್ನಗಳಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ಹಳೆಯ ಪದ್ಧತಿಗೆ ಹೊಸ ವೇಗ

ಭಾರತದಲ್ಲಿ ಮದುವೆ, ಮನೆ ಖರೀದಿ, ಉನ್ನತ ಶಿಕ್ಷಣ ಮುಂತಾದ ಅಗತ್ಯಗಳಿಗಾಗಿ ಚಿನ್ನ ಮಾರುವುದು ಅಥವಾ ವಿನಿಮಯ ಮಾಡುವುದು ಹೊಸ ವಿಷಯವಲ್ಲ. ಹಳೆಯ ಆಭರಣವನ್ನು ಕೊಟ್ಟು ಹೊಸ ವಿನ್ಯಾಸದ ಆಭರಣ ಪಡೆಯುವ ಪದ್ಧತಿ ಹಲವು ದಶಕಗಳಿಂದಲೂ ಇದೆ. ಆದರೆ ಈಗ ಈ ಪ್ರಕ್ರಿಯೆ ಹೆಚ್ಚು ಸಂಘಟಿತ ಮತ್ತು ಪಾರದರ್ಶಕವಾಗುತ್ತಿದೆ. ಚಿನ್ನದ ಬೆಲೆಗಳು ದಾಖಲೆ ಮಟ್ಟಕ್ಕೆ ಏರಿರುವುದು, ಆಭರಣ ಮಳಿಗೆಗಳು ಪಾರದರ್ಶಕ ವಿನಿಮಯ ಯೋಜನೆಗಳನ್ನು ಪರಿಚಯಿಸಿರುವುದು ಹಾಗೂ ಗ್ರಾಹಕರಲ್ಲಿ ಜಾಗೃತಿ ಹೆಚ್ಚಿರುವುದು ಇದಕ್ಕೆ ಕಾರಣವಾಗಿದೆ.

Gold Price: ಅಧಿಕ ಮಾಸ ಅಂತ ಮದ್ವೆ, ಮುಂಜಿ ಆಗದಿದ್ದರೇನು? ಚಿನ್ನದ ಬೆಲೆ ಇಳಿದಿದೆ, ತಗೋಬಹುದು, ಹೇಗಿದೆ ಚಿನ್ನ, ಬೆಳ್ಳಿ ಬೆಲೆ?
Gold Price: ಅಧಿಕ ಮಾಸ ಅಂತ ಮದ್ವೆ, ಮುಂಜಿ ಆಗದಿದ್ದರೇನು? ಚಿನ್ನದ ಬೆಲೆ ಇಳಿದಿದೆ, ತಗೋಬಹುದು, ಹೇಗಿದೆ ಚಿನ್ನ, ಬೆಳ್ಳಿ ಬೆಲೆ?

ಆಭರಣ ಅಂಗಡಿಗಳ ಹೊಸ ಆಫರ್ಸ್

ಅನೇಕ ಬಂಗಾರದ ಅಂಗಡಿಗಳು ಈಗ ಕಡಿಮೆ ಅಥವಾ ಶೂನ್ಯ ಕಡಿತದೊಂದಿಗೆ ಚಿನ್ನ ವಿನಿಮಯ ಯೋಜನೆಗಳನ್ನು ನೀಡುತ್ತಿವೆ. ಜೊತೆಗೆ ಹಳೆಯ ಚಿನ್ನವನ್ನು ಹೊಸ ವಿನ್ಯಾಸಗಳಲ್ಲಿ ಮರುರೂಪಿಸುವ ಅವಕಾಶಗಳನ್ನೂ ಒದಗಿಸುತ್ತಿವೆ. ಇದರಿಂದ ಗ್ರಾಹಕರು ತಮ್ಮ ಲಾಕರ್‌ನಲ್ಲಿ ಬಿದ್ದಿರುವ ಚಿನ್ನವನ್ನು ಮರುಬಳಸಲು ಉತ್ಸುಕರಾಗಿದ್ದಾರೆ. ಸ್ವಲ್ಪ ಹಾಳಾಗಿ ಬಳಸಲು ಬಾರದ ಆಭರಣಗಳನ್ನು ಕೊಟ್ಟು, ಹೊಸ ವಿನ್ಯಾಸದ ಆಭರಣಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.

ಆರ್ಥಿಕತೆಗೆ ಲಾಭವೇ?

ಚಿನ್ನದ ಬೆಲೆ ಏರಿಕೆಯಿಂದ ಬಳಕೆಯಾಗದ ಆಭರಣಗಳ ಮೌಲ್ಯವೂ ಹೆಚ್ಚಾಗಿದೆ. ಇದರಿಂದ ಅನೇಕ ಕುಟುಂಬಗಳು ಲಾಕರ್‌ನಲ್ಲಿ ಸುಮ್ಮನೆ ಬಿದ್ದಿರುವ ಚಿನ್ನವನ್ನು ಹೇಗೆ ಉಪಯೋಗಿಸಬಹುದು ಎಂದು ಮರುಚಿಂತಿಸುತ್ತಿವೆ. ಸರ್ಕಾರ ವಲಯಗಳ ಪ್ರಕಾರ, ಹೀಗೆ ಮನೆಯೊಳಗೆ ನಿಷ್ಕ್ರಿಯವಾಗಿರುವ ಚಿನ್ನ ಮಾರುಕಟ್ಟೆಗೆ ಬಂದರೆ ದೇಶದ ಚಿನ್ನ ಆಮದು ಅವಲಂಬನೆ ಕಡಿಮೆಯಾಗಬಹುದು ಮತ್ತು ಚಾಲ್ತಿ ಖಾತೆ ಕೊರತೆ (Current Account Deficit) ನಿಯಂತ್ರಣಕ್ಕೂ ಸಹಾಯವಾಗಬಹುದು.

ಹಿಂದೆ ಕೇವಲ ಸಂಪತ್ತಿನ ಸಂಕೇತವಾಗಿದ್ದ ಚಿನ್ನ ಈಗ ಆರ್ಥಿಕ ಚಟುವಟಿಕೆಯ ಭಾಗವಾಗುವ ದಿಕ್ಕಿನಲ್ಲಿ ಸಾಗುತ್ತಿದೆ. ಹಳೆಯ ಚಿನ್ನ ವಿನಿಮಯ ಯೋಜನೆಗಳು ಹಾಗೂ ಮರುಬಳಕೆ ಆಯ್ಕೆಗಳು ಹೆಚ್ಚುತ್ತಿರುವುದರಿಂದ, ಲಾಕರ್‌ಗಳಲ್ಲಿ ವರ್ಷಗಳಿಂದ ಮಲಗಿದ್ದ ಚಿನ್ನ ಮತ್ತೆ ಮಾರುಕಟ್ಟೆಗೆ ಮರಳುವ ಸಾಧ್ಯತೆ ಹೆಚ್ಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+