ಕೇರಳದ ಸ್ಮಗಲಿಂಗ್ ಕೇಸ್, ಕಣಕ್ಕಿಳಿದ ಜಾರಿ ನಿರ್ದೇಶನಾಲಯ

ತಿರುವನಂತಪುರಂ, ಜುಲೈ 23: ಕೇರಳದ ಚಿನ್ನದ ಸ್ಮಗಲಿಂಗ್ ಪ್ರಕರಣದಲ್ಲಿ ಮನಿ ಲಾಂಡ್ರಿಂಗ್ ಕಂಡು ಬಂದಿದೆ ಎಂದು ಜಾರಿ ನಿರ್ದೇಶನಾಲಯವು ದೂರು ದಾಖಲಿಸಿದ್ದು, ಆರೋಪಿಗಳ ವಿಚಾರಣೆಗಾಗಿ ಮನವಿ ಸಲ್ಲಿಸಿದೆ. ಕೇರಳದ ಚಿನ್ನದ ಸ್ಮಗಲಿಂಗ್ ಪ್ರಕರಣದ ಆರೋಪಿಗಳ ಮೇಲೆ ಮನಿಲಾಂಡ್ರಿಂಗ್ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಲಿದೆ.

Recommended Video

      ಹೊಸ Oneplus ವಿಶೇಷತೆಗಳು Oneplus Nord , ಕೈಗೆಟಕುವ ಬೆಲೆಯಲ್ಲಿ ಬೆಸ್ಟ್ ಫೋನ್ | Oneindia Kannada

      ಈ ಪ್ರಕರಣದಲ್ಲಿ ಇಲ್ಲಿ ತನಕ ತಿರುವನಂತಪುರಂನ ರಾಜತಾಂತ್ರಿಕ ಕಚೇರಿಯ ಪಿಆರ್ ಒ ಪಿಎಸ್ ಸರಿತ್ ಕುಮಾರ್ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ. ಈತನಿಗೆ ಹವಾಲಾ ಗ್ಯಾಂಗ್ ಪರಿಚಯವಿದ್ದು, ಸ್ವಪ್ನ ಸುರೇಶ್ ಮೂಲಕ ಸುಲಭವಾಗಿ ಕಳ್ಳ ಸಾಗಣೆ ನಡೆಸಿದ್ದರು ಎಂದು ತಿಳಿದು ಬಂದಿದೆ.

      ಹವಾಲ ಗ್ಯಾಂಗ್ ಬಗ್ಗೆ ಸುದ್ದಿ ಬಂದಿರುವುದರಿಂದ ಶೀಘ್ರದಲ್ಲೇ ಈ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಕೂಡಾ ಕೈಗೆತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಯೊಬ್ಬರು ಒನ್ಇಂಡಿಯಾಕ್ಕೆ ತಿಳಿಸಿದ್ದರು. ಅದರಂತೆ, ಜಾರಿ ನಿರ್ದೇಶನಾಲಯ ಕಣಕ್ಕಿಳಿದಿದ್ದು, ತನಿಖೆ ಕೈಗೆತ್ತಿಕೊಳ್ಳಲು ಮುಂದಾಗಿದೆ.

      Kerala Gold Smuggling Case: Ed Registers Money Laundering Complaint

      ದುಬೈನಲ್ಲಿರುವ ಉದ್ಯಮಿ ಫೈಜಲ್ ಫರೀದ್ ದುಬೈನಲ್ಲಿ ಚಿನ್ನ ಖರೀದಿಸಿ ಕೇರಳದ ಕಾನ್ಸುಲೇಟ್ ಕಚೇರಿಗೆ ಕಳುಹಿಸುತ್ತಿದ್ದ ಇಲ್ಲಿ ಸ್ವಪ್ನ ಸುರೇಶ್, ಸರೀತ್ ಅದನ್ನು ಹವಾಲ ಗ್ಯಾಂಗಿಗೆ ಹಂಚುತ್ತಿದ್ದರು. ಕೇರಳದ ಹೊರಗಡೆ ಎಲ್ಲವೂ ಮಾರಾಟವಾಗುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ

      ಸರೀತ್ ಕುಮಾರ್ ನಿಂದ ಪಡೆದ ಚಿನ್ನವನ್ನು ಸಂದೀಪ್ ನಾಯರ್ ಪಡೆದುಕೊಂಡು ಮಲ್ಲಪುರಂನ ಕೆ.ಟಿ ರಮೀಸ್ ಗೆ ತಲುಪಿಸುತ್ತಿದ್ದ. ಸದ್ಯ ರಮೀಶ್ ಕಸ್ಟಮ್ ಅಧಿಕಾರಿಗಳ ವಶದಲ್ಲಿದ್ದಾನೆ. ರಮೀಸ್ ಈ ಬ್ಯಾಗೇಜನ್ನು ಮುವತ್ತುಪುಳದ ಪಿ.ಟಿ ಅಬ್ದು, ಮೊಹಮ್ಮದ್ ಶಫಿ, ಎಡಕಂದನ್ ಸೈಥಾಲವಿ, ಜಲಾಲ್ ಮೊಹಮ್ಮದ್ ಗೆ ತಲುಪಿಸುತ್ತಿದ್ದ, ಇವರಿಂದ ಹವಾಲ ಆಪರೇಟರ್ ಗಳು ಇದನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಇತ್ತೀಚಿನ ಎಲ್ಲಾ ಮೊತ್ತವನ್ನು ಕಸ್ಟಮ್ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಆದರೆ, ಅಬ್ದುಗೆ ತಲುಪಿದ 78 ಕೆಜಿ ಚಿನ್ನ ಇನ್ನೂ ಎಲ್ಲೂ ಪತ್ತೆಯಾಗಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+