
'ನಗಾಡ್ ಸಂಗ್ ಡೋಲ್' ಹಾಡಿಗೆ ನೃತ್ಯ ಮಾಡಿದ ಕೇರಳ ಜಿಲ್ಲಾಧಿಕಾರಿ
ಸಾಮಾನ್ಯವಾಗಿ ಅಧಿಕಾರಿಗಳು ಸಾರ್ವಜನಿಕರ ನಡುವಿನ ಒಂದು ಅಂತರವನ್ನು ಕಾಯ್ದುಕೊಂಡಿರುತ್ತಾರೆ. ಆದರೆ, ಕೇರಳ ಜಿಲ್ಲಾಧಿಕಾರಿ ಅದನ್ನು ಮುರಿದ ಒಂದು ಹೆಜ್ಜೆ ಮುಂದೆ ಹೋಗಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡಿದ್ದಾರೆ. ಫ್ಲ್ಯಾಶ್ ಮಾಬ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಕೇರಳದ ಜಿಲ್ಲಾಧಿಕಾರಿ ಸಖತ್ ಸ್ಟೆಪ್ಸ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪತ್ತನಂತಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಅವರು ಕಲಾ ಉತ್ಸವದ ತಯಾರಿಯಲ್ಲಿ ನಿರತರಾಗಿದ್ದ ಕ್ಯಾಥೋಲಿಕೇಟ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡುವ ಮೂಲಕ ಎಲ್ಲರನ್ನು ಆಕರ್ಷಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯವರ ನಿರ್ದೇಶನದ ರಾಮ್-ಲೀಲಾ ಸಿನಿಮಾದ 'ನಗಾಡ್ ಸಂಗ್ ಡೋಲ್ ಬಾಜೆ' ಹಾಡಿಗೆ ಗ್ರೂಮ್ ಮಾಡಿದ್ದಾರೆ. ಅವರು ಸ್ಥಳದಲ್ಲಿದ್ದ ಜನರನ್ನು ಮಾತ್ರವಲ್ಲದೆ ಆನ್‌ಲೈನ್‌ನಲ್ಲಿ ಅವರ ಪ್ರದರ್ಶನವನ್ನು ವೀಕ್ಷಿಸಿದವರನ್ನೂ ಸಂತೋಷಪಡಿಸಿದ್ದಾರೆ. ಐಎಎಸ್ ಅಧಿಕಾರಿ ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಫೇಸ್‌ಬುಕ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಮಲಯಾಳ ಮನೋರಮಾ ಪ್ರಕಾರ, ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯದ ಕಲಾ ಉತ್ಸವದ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿಗಳು ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದಾಗ ಈ ಪೂರ್ವಸಿದ್ಧತೆಯಿಲ್ಲದ ಪ್ರದರ್ಶನ ಕಂಡುಬಂದಿದೆ.
ತನ್ನ ಮಗು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಹಾಜರಿದ್ದ ಅಯ್ಯರ್ ಅವರು ಕೆಲವು ವಿದ್ಯಾರ್ಥಿಗಳು ನೃತ್ಯಕ್ಕೆ ಸೇರಲು ಕೇಳಲು ಬಂದಾಗ ಅಯ್ಯರ್ ಸ್ವತ: ನೃತ್ಯದಲ್ಲಿ ಭಾಗಿಯಾಗಿ ಪ್ರದರ್ಶನವನ್ನು ಆನಂದಿಸಿದ್ದಾರೆ. ನಂತರ ಮಾತನಾಡಿದ ಐಎಎಸ್ ಅಧಿಕಾರಿ, "ನನಗೆ ನೃತ್ಯ ಮತ್ತು ಹಾಡು ಎಂದರೆ ತುಂಬಾ ಇಷ್ಟ. ಆದ ಕಾರಣ ಅವರು ನನ್ನನ್ನು ಹೆಚ್ಚು ಮನವೊಲಿಸುವ ಅಗತ್ಯವಿಲ್ಲ" ಎಂದು ಹೇಳಿದರು.
"ನಾನು ಕೆಲವು ಸ್ಟೆಪ್ಸ್ ಮಾಡಬೇಕೆಂದು ಭಾವಿಸಿದೆ, ಆದರೆ ವಿದ್ಯಾರ್ಥಿಗಳ ಶಕ್ತಿ ಅಪಾರವಾಗಿತ್ತು. ಆ ಶಕ್ತಿಯು ಫ್ಲ್ಯಾಶ್ ಮಾಬ್‌ಗಳ ಸಂಪೂರ್ಣ ಸಾರವಾಗಿದೆ ಎಂದು ಅಯ್ಯರ್ ಹೇಳಿದರು, ಅವರ ನೃತ್ಯದ ವೀಡಿಯೊ ವೈರಲ್ ಆಗಿರುವುದು ತನಗೆ ತಿಳಿದಿಲ್ಲ" ಎಂದು ಅವರು ಹೇಳಿದ್ದಾರೆ.
ನೆಟಿಜನ್‌ಗಳು ಆಕೆಯ ಹಾವಭಾವದಿಂದ ಮಾತ್ರವಲ್ಲದೆ ಅವರ ಪ್ರತಿಭೆಯಿಂದಲೂ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಅವರ ಆಕರ್ಷಕವಾದ ನಡೆಗಳನ್ನು ಕಂಡು ಅವರು ಶಾಸ್ತ್ರೀಯ ನೃತ್ಯಗಳಲ್ಲಿ ವರ್ಷಗಳ ತರಬೇತಿ ಪಡೆದವರು ಎಂಬುದು ಸ್ಪಷ್ಟವಾಗುತ್ತದೆ. ಕೇರಳ ಕೌಮುದಿ ಪ್ರಕಾರ, ಅಯ್ಯರ್ ಅವರು ತಮ್ಮ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಕೂಚಿಪುಡಿ, ಒಡಿಸ್ಸಿ ಮತ್ತು ಕಥಕ್ಕಳಿಯಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.