ಕೇರಳದಲ್ಲಿ 2 ಲಕ್ಷ ದಾಟಿದ ಕೊರೊನಾ ಸೋಂಕಿತರು: ಸೆಕ್ಷನ್ 144 ಜಾರಿ
ತಿರುವನಂತಪುರಂ, ಅಕ್ಟೋಬರ್ 02: ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿರುವ ಕಾರಣ ಕಾರಣ ನಿಯಂತ್ರಿಸುವ ನಿಟ್ಟಿನಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಕೇರಳದದಲ್ಲಿ ಇದುವರೆಗೆ 771 ಮಂದಿ ಸಾವನ್ನಪ್ಪಿದ್ದಾರೆ. ಅಕ್ಟೋಬರ್ 3 ರಿಂದ 144 ಸೆಕ್ಸನ್ ಜಾರಿಯಾಗಲಿದ್ದು ಅಕ್ಟೋಬರ್ 31ರವರೆಗೂ ಇರಲಿದೆ.
ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ. ಹೊಸದಾಗಿ 8135 ಪ್ರಕರಣಗಳು ಪತ್ತೆಯಾಗಿವೆ. ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಅಕ್ಟೋಬರ್ 3 ರಬೆಳಗ್ಗೆ 9 ಗಂಟೆಯಿಂದ ಜಾರಿಯಾಗಲಿದೆ.

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.ಕಂಟೈನ್ಮೆಂಟ್ ಜೋನ್‌ಗಳಲ್ಲಿ ಸಾಕಷ್ಟು ನಿರ್ಬಂಧ ಹೇರಲಾಗಿದೆ. ಮದುವೆ, ಅಂತ್ಯಕ್ರಿಯೆ ಸಂದರ್ಭದಲ್ಲಿ ಡಿಡಿಎಂಎಯಿಂದ ಅನುಮತಿ ಪಡೆಯಬೇಕು.
ಮದುವೆಯಲ್ಲಿ 50 ಮಂದಿ ಭಾಗವಹಿಸಬಹುದು, ಅಂತ್ಯಕ್ರಿಯೆಯಲ್ಲಿ 20ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ. ಒಟ್ಟು 2.43 ಲಕ್ಷ ಮಂದಿ ಮೇಲೆ ನಿಗಾ ಇಡಲಾಗಿದೆ. 72,339 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 771 ಮಂದಿ ಮೃತಪಟ್ಟಿದ್ದಾರೆ.












Click it and Unblock the Notifications